ನ್ಯೂಸ್

ವಾಷಿಂಗ್ಟನ್‌ನಲ್ಲಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿಯ ಹತ್ಯೆ; 'ಫ್ರೀ ಪ್ಯಾಲೆಸ್ಟೈನ್' ಎಂಬ ಘೋಷಣೆ ಕೂಗಿದ ಶಂಕಿತ ವ್ಯಕ್ತಿ| washington shoot

ಇಸ್ರೇಲಿ ರಾಯಭಾರಿ ಕಚೇರಿ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯನ್ನು "ಸೆಮಿಟಿಸಂ ವಿರೋಧಿ ಭಯೋತ್ಪಾದಕ ಗುಂಪಿನ ಕೃತ್ಯ" ಎಂದು ಕರೆದಿರುವ ಇಸ್ರೇಲ್‌, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ವಾಷಿಂಗ್ಟನ್: ಬುಧವಾರ (21) ಸಂಜೆ ವಾಷಿಂಗ್ಟನ್ ಡಿಸಿಯ ಯಹೂದಿ ವಸ್ತುಸಂಗ್ರಹಾಲಯದಲ್ಲಿ ನಡೆದ ಕಾರ್ಯಕ್ರಮದಿಂದ ಹೊರಡುತ್ತಿದ್ದ ಇಸ್ರೇಲಿ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

'ಫ್ರೀ ಪ್ಯಾಲೆಸ್ಟೈನ್' ಎಂದ ಶಂಕಿತ

ಶಂಕಿತನನ್ನು ಚಿಕಾಗೋದ 30 ವರ್ಷದ ಎಲಿಯಾಸ್ ರೊಡ್ರಿಗಸ್ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿಗೆ ಮುನ್ನ ವಸ್ತುಸಂಗ್ರಹಾಲಯದ ಹೊರಗೆ ಓಡಾಡುತ್ತಿದ್ದನು ಎಂದು ಹೇಳಲಾಗಿದೆ. ಗುಂಡು ಹಾರಿಸಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಕೊಂದ ನಂತರ, ಅವನು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾಗಿ ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದಾಗ, ಆ ವ್ಯಕ್ತಿ ಫ್ರೀ (ಸ್ವತಂತ್ರ) ಪ್ಯಾಲೆಸ್ಟೈನ್ ಎಂದು ಘೋಷಣೆ ಕೂಗಲು ಪ್ರಾರಂಭಿಸಿದ್ದಾನೆ.

ಟ್ರಂಪ್ ಹೇಳಿದ್ದೇನು?

(ಏಜೆನ್ಸೀಸ್)

ಘಟನೆಯನ್ನು ಖಂಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ದ್ವೇಷ ಮತ್ತು ಮೂಲಭೂತವಾದಕ್ಕೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ. ಈ ಭಯಾನಕ ಹತ್ಯೆಗಳು, ಸ್ಪಷ್ಟವಾಗಿ ಯಹೂದಿ ವಿರೋಧಿತ್ವವನ್ನು ಆಧರಿಸಿವೆ, ಇದು ಈಗಲೇ ಕೊನೆಗೊಳ್ಳಬೇಕು, ದ್ವೇಷ ಮತ್ತು ಮೂಲಭೂತವಾದಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ. ಬಲಿಪಶುಗಳ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.