ನ್ಯೂಸ್

ನಿಮಗೆ ನಾವು ಹೆದರುವುದಿಲ್ಲ; ಸಿಂಹಗಳ ಜತೆ ನಾಯಿಗಳ ಕಾದಾಟದ ವಿಡಿಯೋ ವೈರಲ್​

ಗಾಂಧಿನಗರ: ಕಾಡಿನ ರಾಜ ಎಂದು ಯಾರನ್ನು ಕರೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಹೌದು ಕಾಡಿನ ರಾಜ ಎಂದು ಸಿಂಹವನ್ನು ಕರೆಯುತ್ತಾರೆ. ಸಿಂಹ ಎಷ್ಟು ಶಕ್ತಿಶಾಲಿ ಪ್ರಾಣಿ ಎಂದರೆ, ಬೇರೆ ಯಾವುದೇ ಪ್ರಾಣಿ ಗ್ರಾತದಲ್ಲಾಗಲಿ, ಬುದ್ಧಿಯಲ್ಲಾಗಲಿ, ಶಕ್ತಿಯಲ್ಲಾಗಲಿ ಸಿಂಹಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರು ಸಿಂಹದ ಮುಂದೆ ನಿಂತೂ ಹೋರಾಡುವುದಿಲ್ಲ. ಆದರೆ ಈಗ ತಿಳಿಸುತ್ತಿರುವ ವಿಚಾರವೆ ಬೇರೆ. ಹೌದು ಎರಡು ಸಿಂಹಗಳಿಗೆ ಎರಡು ಗ್ರಾಮಸಿಂಹಗಳು ಎದುರು ನಿಂತು ಕಾದಾಟ ನಡೆಸಿ ಸಿಂಹವನ್ನೇ ಓಡಿ ಹೋಗುವಂತೆ ಮಾಡಿವೆ.

ಸದ್ಯ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು. ವಿಡಿಯೋದಲ್ಲಿ ಎರಡು ಸಿಂಹಗಳನ್ನು ಎರಡು ನಾಯಿಗಳು ಹೆದರಿಸಿ ಓಡಿಸಿವೆ. ವೈರಲ್​ ಆಗಿರುವ ವಿಡಿಯೋದಲ್ಲಿನ ಘಟನೆಯು ಗುಜರಾತ್​​ನ ಅಮ್ರೇಲಿಯ ಸಾವರ್ಕುಂಡ್ಲಾದಲ್ಲಿ ಗೋಶಾಲೆ ಬಳಿ ನಡೆದಿದೆ. ಏಷ್ಯಾಟಿಕ್​ ಸಿಂಹಗಳಿಗೆ ಹೆಸರುವಾಸಿಯಾಗಿರುವುದು ಗುಜರಾತ್​ನ ಪ್ರಸಿದ್ಧ ಗಿರ್​ ರಾಷ್ಟ್ರೀಯ ಉದ್ಯಾನವನ. ಈ ಉದ್ಯಾನವನದಿಂದ ಹೊರಬಂದ ಎರಡು ಸಿಂಹಗಳು ನಿರ್ಜನ ಪ್ರದೇಶದಲ್ಲಿ ಅಡ್ಡಾಡಿವೆ. ಹೀಗೆ ಹೋಗುವಾಗ ಗುಜರಾತ್​​​​​ನ ಗಿರ್​ ರಾಷ್ಟ್ರೀಯ ಉದ್ಯಾನದಿಂದ ಸುಮಾರು 70ಕಿ.ಮೀ. ದೂರದಲ್ಲಿರುವ ಅಮ್ರೇಲಿಯ ಸಾವರ್ಕುಂಡ್ಲಾದಲ್ಲಿ ಗೋಶಾಲೆ ಬಳಿ ನಿಂತಿವೆ.

ಗೇಟ್​​ ಒಳಗೆ ಹೋಗಲು ಯತ್ನಿಸಿದ ಸಿಂಹಗಳ ಮುಖಾಮುಳಿಯಾಗಿ ಎರಡು ನಾಯಿಗಳು ನಿಂತು ಬೊಗಳಲು ಆರಂಭಿಸಿವೆ. ನಾಯಿಗಲು ಬೊಗಳುವುದನ್ನು ಕಂಡು ಕೋಪಗೊಂಡ ಸಿಂಹಗಳು ನಾಯಿ ಮೇಲೆ ದಾಳಿ ಮಾಡಲು ಹೋಗುತ್ತವೆ. ಆದರೆ ಗೇಟ್​ ಬಾಗಿಲು ಮುಚ್ಚಿದ್ದರಿಂದ ಸಿಂಹಗಳಿಗೆ ಏನು ಮಾಡಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಸಿಂಹವೊಂದು ಬಲವಾಗಿ ಗೇಟ್​​ಗೆ ಗುದ್ದುತ್ತದೆ ಆದರೂ ಗೇಟ್​ ಓಪನ್​ ಆಗುವುದಿಲ್ಲ. ಸಿಂಹ ಇಷ್ಟು ಬಲವಾಗಿ ದಾಳಿ ನಡೆಸಿದರು ನಾಯಿಗಳು ಹಿಂದಕ್ಕೆ ಸರಿಯದೆ ಬೊಗಳುವುದನ್ನು ಜಾಸ್ತಿ ಮಾಡುತ್ತದೆ. ಸ್ವಲ್ಪ ಸಮಯದ ನಂತರ ಎರಡು ಸಿಂಹಗಳು ಅಲ್ಲಿಂದ ಕಾಲ್ಕಿಳುತ್ತವೆ.

ಬಳಿಕ ಗೇಟ್​​ ಓಪನ್​ ಆಗಿರುವುದನ್ನು ತಿಳಿದ ನಾಯಿಗಳು ಗೇಟ್​ನಿಂದ ಹೊರಬಂದು ನೋಡುತ್ತವೆ. ಅಷ್ಟರಲ್ಲಿ ನಾಯಿಗಳ ಬೊಗಳುವುದು ಹೆಚ್ಚಾದಾಗ ದನದ ಕೊಟ್ಟಿಗೆಯಲ್ಲಿದ್ದ ವ್ಯಕ್ತಿಗೆ ಎಚ್ಚರವಾಗಿ ಆತ ಗೇಟ್​ ಬಳಿ ಬರುತ್ತನೆ. ತೆರದಿದ್ದ ಗೇಟ್​​ ಅನ್ನು ಕ್ಲೋಸ್​ ಮಾಡಿ ಹೋಗುತ್ತಾನೆ. ಸಿಂಹ ಮತ್ತು ನಾಯಿಗಳ ಈ ಘರ್ಷಣೆಯ ದೃಶ್ಯ ಸದ್ದಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಎಲ್ಲರೂ ನಾಯಿಗಳ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್​​)