ಬೆಂಗಳೂರು : ಕರೊನಾ ಸೋಂಕಿನ ಉಲ್ಬಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಟಿ.ವಿ.ಎಸ್. ಮೋಟಾರ್ ಸಂಸ್ಥೆಯು 3 ಕೋಟಿ ರೂ. ಮೌಲ್ಯದ 100 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಮತ್ತು ವೈದ್ಯಕೀಯ ಪರಿಕರಗಳನ್ನು ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದೆ.
ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದೆ. ಇಂದು ಸಿಎಂ ಬಿ.ಎಸ್.ಯಡಿಯೂರಪ್ಪನವರು ಕಂಪೆನಿಯ ಆಡಳಿತ ಮಂಡಳಿ ಸದಸ್ಯರಿಂದ ಚೆಕ್ ಮತ್ತು ಉಪಕರಣಗಳನ್ನು ಸ್ವೀಕರಿಸಿದರು. ಕಳೆದ ವರ್ಷ ಕರೊನಾ ಸೋಂಕಿನ ಆಗಮನದ ಸಂದರ್ಭದಲ್ಲಿ ಪಿಪಿಇ ಕಿಟ್ಗಳನ್ನು ಮತ್ತು ಎನ್95 ಮಾಸ್ಕ್ಗಳನ್ನು ಟಿವಿಎಸ್ ಮೋಟಾರ್ ಕಂಪೆನಿ ದೇಣಿಗೆಯಾಗಿ ನೀಡಿತ್ತು. (ಏಜೆನ್ಸೀಸ್)