ನ್ಯೂಸ್

ಟರ್ಕಿಯ ವಿಮಾನಯಾನ ಸಂಸ್ಥೆಯಲ್ಲಿ ಸ್ಫೋಟ; ಭಯೋತ್ಪಾದಕರ ದಾಳಿಗೆ 3 ಬಲಿ | Turkish Aviation

ಟರ್ಕಿ: ವಾಯುಯಾನ ಕಂಪನಿ(Turkish Aviation) ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (ತುಸಾಸ್) ಮೇಲೆ ದಾಳಿ ನಡೆದಿರುವ ಸುದ್ದಿ ಟರ್ಕಿಯಲ್ಲಿ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಅಂಕಾರಾ ಬಳಿಯ ವಾಯುಯಾನ ಕಂಪನಿಯ ಪ್ರಧಾನ ಕಚೇರಿಯ ಹೊರಗೆ ಸ್ಫೋಟ ಸಂಭವಿಸಿದೆ. ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಭಯೋತ್ಪಾದಕರು ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ದಾಳಿಗೆ ಸಂಬಂಧಿಸಿದಂತೆ ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ, ದುರದೃಷ್ಟವಶಾತ್ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ದಾಳಿಗೆ ಸಂಬಂಧಿಸಿದಂತೆ ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟರ್ಕಿಯ ಏರೋಸ್ಪೇಸ್ ಇಂಡಸ್ಟ್ರೀಸ್ (ಟಿಎಐ) ಎಂಟ್ರೆನ್ಸ್​​​​ ಮುಂದೆ ದೊಡ್ಡ ಹೊಗೆಯ ಮೋಡವು ಗೋಚರಿಸುವುದನ್ನು ಇದರಲ್ಲಿ ಕಾಣಬಹುದು. ಇದು ರಾಜಧಾನಿಯಿಂದ ಸುಮಾರು 40 ಕಿಮೀ ದೂರದಲ್ಲಿದೆ. ಸ್ಥಳದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟದ ಕಾರಣ ಮತ್ತು ನಂತರದ ಗುಂಡಿನ ದಾಳಿಯು ಅಸ್ಪಷ್ಟವಾಗಿದೆ, ಆದರೆ ಆತ್ಮಾಹುತಿ ದಾಳಿ ನಡೆದಿದೆ ಎಂದು ಕೆಲವು ವರಿಗಳೂ ಸೂಚಿಸಿವೆ. ಘಟನೆಯ ನಂತರ ಟರ್ಕಿಯ ಬೆಂಚ್‌ಮಾರ್ಕ್ ಸ್ಟಾಕ್ ಸೂಚ್ಯಂಕವು ಶೇಕಡಾ ಎರಡರಷ್ಟು ಕುಸಿದಿದೆ. (ಏಜೆನ್ಸೀಸ್​​)