ನ್ಯೂಸ್

ಅಲಾಸ್ಕಾ ಸಭೆ ಬಳಿಕ ಫಸ್ಟ್​ ರಿಯಾಕ್ಷನ್​ ಕೊಟ್ಟ ಟ್ರಂಪ್​: ಭಾರತ ಮೇಲಿನ ಟಾರಿಫ್​ ಬಗ್ಗೆ ಹೇಳಿದ್ದೇನು? | Tariff

Tariff : ಅಮೆರಿಕದ ಅಲಾಸ್ಕಾದಲ್ಲಿ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ನಡುವಿನ ನಿರ್ಣಾಯಕ ಸಭೆ ಕೊನೆಗೊಂಡಿದೆ. ಇಡೀ ಜಗತ್ತೇ ಈ ಸಭೆಯನ್ನು ಎದುರು ನೋಡುತ್ತಿತ್ತು. ಇಬ್ಬರು ಜಾಗತಿಕ ನಾಯಕರು ಏನೆಲ್ಲ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ ಎಂಬ ಕುತೂಹಲವಿತ್ತು. ಆದರೆ, ಯೂಕ್ರೇನ್ ಯುದ್ಧದ ಬಗ್ಗೆ ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿದೆ. ಸಭೆ ಬಳಿಕ ಟ್ರಂಪ್,​ ಭಾರತದ ಮೇಲಿನ ಸುಂಕ ಹೇರಿಕೆ ಬಗ್ಗೆ ಇದೀಗ ಮಾತನಾಡಿದ್ದಾರೆ.

ಸುಂಕ ಹೇರಿಕೆ ಮರುಶೀಲನೆ ಆಗತ್ಯ

ರಷ್ಯಾ ಮತ್ತು ಅದರ ವ್ಯಾಪರ ಪಾಲುದಾರರು(ಭಾರತ) ಮೇಲಿನ ದ್ವಿತೀಯ ನಿರ್ಬಂಧಗಳನ್ನು ತಕ್ಷಣಕ್ಕೆ ಪರಿಗಣಿಸುತ್ತಿಲ್ಲ. ಆದಾಗ್ಯೂ, 2 ಅಥವಾ 3 ವಾರಗಳಲ್ಲಿ ಈ ಬಗ್ಗೆ ಮರು ಪರಿಶೀಲನೆ ಆಗತ್ಯವಿದೆ ಎಂದು ಸಭೆ ಬಳಿಕ ಫ್ಯಾಕ್ಸ್​ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ನಾನು, 2 ಅಥವಾ 3 ವಾರಗಳಲ್ಲಿ (ನಿರ್ಬಂಧಗಳ) ಯೋಚಿಸ ಬೇಕಾಗಿದೆ. ಮರು ಪರಿಶೀಲನೆ ಆಗತ್ಯ ಇದೆ ಎಂದು ಟ್ರಂಪ್​ ಒತ್ತಿ ಹೇಳಿದ್ದಾರೆ. ಈ ಮೂಲಕ ಭಾರತದ ಮೇಲೆ ಹೇರಿಕೆ ಮಾಡಿದ್ದ ಸುಂಕದ ಬಗ್ಗೆ ಡೊಡ್ಡಣ್ಣ ಮೆತ್ತಗಾಗಿದ್ದಾರೆ.

"ನಾನು ಈಗ ದ್ವಿತೀಯ ನಿರ್ಬಂಧಗಳನ್ನು ಮಾಡಿದರೆ, ಅದು ಅವರಿಗೆ ವಿನಾಶಕಾರಿಯಾಗುತ್ತದೆ" ಎಂದು ಟ್ರಂಪ್ ತಮ್ಮ ಭವಿಷ್ಯದ ಕ್ರಮಗಳ ಬಗ್ಗೆ ಪರೋಕ್ಷವಾಗಿ ಹೇಳಿದರು.

ಭಾರತದ ಮೇಲೆ ಪರಸ್ಪರ ಶೇ.25 ರಷ್ಟು ಸುಂಕ ವಿಧಿಸಿದ ನಂತರ, ಟ್ರಂಪ್, ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಭಾರತೀಯ ಸರಕುಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರು. ಇದು ಭಾರತೀಯ ಆಮದಿನ ಮೇಲಿನ ಒಟ್ಟಾರೆ ಸುಂಕವನ್ನು ಶೇ.50 ಕ್ಕೆ ದ್ವಿಗುಣಗೊಳಿಸಿತು.

ಯುಕ್ರೇನ್ ಯುದ್ಧದ ಕುರಿತು ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಟ್ರಂಪ್ ರಷ್ಯಾದ ಬಗ್ಗೆ ತಮ್ಮ ನಿಲುವನ್ನು ಮೃದುಗೊಳಿಸಿದ್ದಾರೆ. ಅಲಾಸ್ಕಾ ಶೃಂಗಸಭೆ ಚೆನ್ನಾಗಿ ನಡೆದಿದೆ ಎಂದು ಹೇಳಿದ ಟ್ರಂಪ್​, ಸಭೆಗೆ 10ಕ್ಕೆ 10ರಷ್ಟು ರೇಟಿಂಗ್ ನೀಡಿದರು.(ಏಜೆನ್ಸೀಸ್​)