Trump: ಡೆಮಾಕ್ರಟಿಕ್ ಪಕ್ಷದ ನಾಯಕಿ ಕಮಲಾ ಹ್ಯಾರಿಸ್ಗೆ ನೀಡಲಾಗಿದ್ದ ಸೀಕ್ರೆಟ್ ಸರ್ವೀಸ್ ರಕ್ಷಣೆಯನ್ನು ಇದೀಗ ಅಮೆರಿಕದ ಶ್ವೇತಭವನ ಹಿಂಪಡೆದಿದೆ.
ಇದನ್ನೂ ಓದಿ: ಚಿನ್ನ ಮತ್ತೆ ಸಾರ್ವಕಾಲಿಕ ದಾಖಲೆ: 10 ಗ್ರಾಂ ಸ್ವರ್ಣ ಈಗ ಇನ್ನಷ್ಟು ದುಬಾರಿ; ಬೆಳ್ಳಿ 1000 ರೂ. ಇಳಿಕೆ | Gold Surge
2024ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಎದುರಾಳಿಯಾಗಿದ್ದ ಕಮಲಾ ಹ್ಯಾರಿಸ್ಗೆ ನೀಡಲಾಗಿದ್ದ ಸೀಕ್ರೆಟ್ ಸರ್ವಿಸ್ ರಕ್ಷಣೆಯನ್ನು ಇದೀಗ ಟ್ರಂಪ್ ರದ್ದುಗೊಳಿಸಿದ್ದಾರೆ. ಆಕೆಗೆ ಕೊಟ್ಟಿರುವ ರಕ್ಷಣೆಯನ್ನು ಹಿಂಪಡೆಯುವಂತೆ ಟ್ರಂಪ್ ಶ್ವೇತಭವನಕ್ಕೆ ತಿಳಿಸಿರುವುದಾಗಿ ರಾಯಿಟರ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಜೋ ಬೈಡನ್ ಅಧಿಕಾರ ತೊರೆಯುವ ಮೊದಲು ಹ್ಯಾರಿಸ್ಗೆ ಈ ಸೀಕ್ರೆಟ್ ಸರ್ವಿಸ್ ರಕ್ಷಣೆಯನ್ನು ವ್ಯವಸ್ಥೆ ಮಾಡಿದ್ದರು. ಇದು ಜನವರಿ 2026 ರವರೆಗೆ ಅಂದರೆ ಒಂದು ವರ್ಷದವರೆಗೆ ವಿಸ್ತರಿಸಲಾಗಿತ್ತು. ಆದರೆ, ಟ್ರಂಪ್ ಆದೇಶದ ಮೇರೆಗೆ ಇದೀಗ ಆ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).