Trump Warning: ಇರಾನ್-ಇಸ್ರೇಲ್ ನಡುವಿನ ಯುದ್ಧ ದಾಳಿಯಲ್ಲಿ ಕದನ ವಿರಾಮ ಘೋಷಿಸಬೇಕಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇದೀಗ ಸಮರದ ಹಾದಿ ಹಿಡಿದಿದ್ದಾರೆ. ಇಂದು ಬೆಳಗ್ಗೆಯೇ ಇರಾನ್‌ನ ಮೂರು ಪ್ರಮುಖ ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಬಿ-2 ಸ್ಪಿರಿಟ್ ಬಾಂಬರ್‌ಗಳಿಂದ ಅಮೆರಿಕ ಸೇನಾ ಪಡೆಗಳು ಸಂಘಟಿತ ವೈಮಾನಿಕ ದಾಳಿ ನಡೆಸಿತು. ಈ ಕುರಿತು ಇರಾನ್ಗೆ ಎಚ್ಚರಿಕೆ ಕೊಟ್ಟಿರುವ ಟ್ರಂಪ್, ಇನ್ನೂ ಒಂದಷ್ಟು ದಾಳಿಗಳು ಬಾಕಿ ಉಳಿದಿವೆ ಎಂಬ ಸೂಚನೆಯನ್ನು ರವಾನಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಬಿಕಿನಿ ಧರಿಸುವಾಗ ಈ 2 ವಿಷಯ ನೆನಪಿನಲ್ಲಿರಲಿ… ಕಹಿ ಅನುಭವ ಬಿಚ್ಚಿಟ್ಟ ವಿದೇಶಿ ಯುವತಿಯರು! Foreign Women
ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಡೋನಾಲ್ಡ್ ಟ್ರಂಪ್, "ಈ ಕಾರ್ಯಾಚರಣೆಯನ್ನು 'ಅದ್ಭುತ ಮಿಲಿಟರಿ ಯಶಸ್ಸು' ಎಂದು ಕರೆದರು. ಇರಾನ್‌ನ ಪರಮಾಣು ಸಾಮರ್ಥ್ಯಗಳನ್ನು ನಾಶ ಮಾಡುವ ಮೂಲಕ ಈ ಕಾರ್ಯಾಚರಣೆ ತನ್ನ ಪ್ರಾಥಮಿಕ ಗುರಿಯನ್ನು ಸಾಧಿಸಿದೆ" ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಈ ಮಧ್ಯೆ ಇರಾನ್ಗೆ ಎಚ್ಚರಿಸಿದ ಟ್ರಂಪ್, "ನಿಮಗೆ ಶಾಂತಿ ಅಥವಾ ವಿನಾಶ? ಯಾವುದು ಬೇಕು ಅದನ್ನು ನೀವೇ ಆಯ್ಕೆ ಮಾಡಿಕೊಳ್ಳಿ. ಇರಾನ್ ಮೇಲಿನ ಒಂದಷ್ಟು ಗುರಿಯಗಳು ಇನ್ನೂ ಬಾಕಿ ಉಳಿದಿವೆ" ಎಂದು ಹೇಳಿದ್ದಾರೆ.
"ಪ್ರಸ್ತುತ ಇರಾನ್‌ನಲ್ಲಿ ಉಳಿದಿರುವ ಒಂದಷ್ಟು ಗುರಿಗಳನ್ನು ನಾಶಮಾಡಲು ಅಮೆರಿಕ ಮತ್ತು ಇಸ್ರೇಲ್ ಒಗಟ್ಟಾಗಿ ಕೆಲಸ ಮಾಡಲಿದೆ" ಎಂದು ಟ್ರಂಪ್ ಕಟು ಮಾತುಗಳನ್ನಾಡಿದ್ದಾರೆ. ಎರಡೂ ದೇಶಗಳು ಪರಸ್ಪರ ಕ್ಷಿಪಣಿಗಳಿಂದ ದಾಳಿ ಮಾಡುತ್ತಿರುವುದು ಯುದ್ಧದ ತೀವ್ರತೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಪಹಲ್ಗಾಮ್ನಲ್ಲಿ ಅಮಾಯಕರನ್ನು ಕೊಂದ ಪಾಕ್ ಉಗ್ರರಿಗೆ ಆಶ್ರಯ ನೀಡಿದ ಇಬ್ಬರು ಸ್ಥಳೀಯರ ಬಂಧನ! Pahalgam Attack
ಇದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಗೆ ಸಾಕ್ಷಿಯಾಗಿದೆ. ಎರಡೂ ದೇಶಗಳ ನಡುವಿನ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕ ಮಧ್ಯಪ್ರವೇಶಿಸಿರುವುದು ಸಮರದ ಕಿಚ್ಚನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಅಮೆರಿಕದ ಸೇನೆಯು ಇರಾನ್‌ನಲ್ಲಿರುವ ಮೂರು ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಆ ಪ್ರದೇಶಗಳನ್ನು ನಾಶಪಡಿಸಿದೆ,(ಏಜೆನ್ಸೀಸ್).