ನ್ಯೂಸ್

ಟ್ರಂಪ್​ ಸುಂಕ ಸಮರ: ಭಾರತ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಮರ್ಥವಾಗಿದೆ ಎಂದ ರಷ್ಯಾ ವಿದೇಶಾಂಗ ಸಚಿವ | Sergey Lavrov

Sergey Lavrov: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಶೇ.50 ರಷ್ಟು ಸುಂಕಗಳ ವಿರುದ್ಧ ಭಾರತ ನಿರಂತರವಾಗಿ ಪ್ರತಿರೋಧ ಒಡ್ಡುತ್ತಿರುವುದನ್ನು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಶನಿವಾರ (ಸೆಪ್ಟೆಂಬರ್ 27) ಭಾರತದ ತೈಲ ವ್ಯಾಪಾರ ನೀತಿಯ ನಿಲುವನ್ನು ಬಲವಾಗಿ ಬೆಂಬಲಿಸಿದ್ದಾರೆ.

ಈ ಬಗ್ಗೆ 80 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಮಾತನಾಡಿದ ಲಾವ್ರೊವ್, ವ್ಯಾಪಾರ ಮತ್ತು ಇಂಧನದ ಬಗ್ಗೆ ಭಾರತ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಾಗಿದೆ. ಅಲ್ಲದೆ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್​ರನ್ನು ಶ್ಲಾಘಿಸಿದರು.

ಭಾರತದ ಸ್ವಾಭಿಮಾನವನ್ನು ಹೊಗಳಿದ ಲಾವ್ರೊವ್, ಅಮೆರಿಕದ ಸುಂಕದ ವಿವಾದದ ನಡುವೆ ರಷ್ಯಾ ಮತ್ತು ಭಾರತದ ನಡುವಿನ ಆರ್ಥಿಕ ಪಾಲುದಾರಿಕೆ ಬೆದರಿಕೆಯಲ್ಲಿಲ್ಲ. ಭಾರತವು ತನ್ನದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡುತ್ತದೆ. ಭಾರತದ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಲಾವ್ರೊವ್ ಭರವಸೆ ವ್ಯಕ್ತಪಡಿಸಿದರು.

ಭಾರತ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ- ಲಾವ್ರೊವ್

ಭಾರತದ ತೈಲ ಖರೀದಿಯ ಬಗ್ಗೆ ಮಾತನಾಡಿದ ಲಾವ್ರೊವ್, ನಮ್ಮ ತೈಲದ ರಿಯಾಯಿತಿ ದರದ ಖರೀದಿಯನ್ನು ನಿಲ್ಲಿಸುವಂತೆ ಭಾರತವನ್ನು ಒತ್ತಾಯಿಸಲು ಅಮೆರಿಕ ಪ್ರಯತ್ನಿಸುತ್ತಲೇ ಇದೆ. ಟ್ರಂಪ್ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಪ್ರತಿ ಹಂತದಲ್ಲೂ ಭಾರತವನ್ನು ಟೀಕಿಸುತ್ತಿದ್ದರೂ, ಭಾರತವು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಾಗಿದೆ" ಎಂದು ಲಾವ್ರೊವ್ ಹೇಳಿದ್ದಾರೆ.

ನಮ್ಮ ವ್ಯಾಪಾರ ಸಂಬಂಧಗಳಿಗೆ, ನಮ್ಮ ತೈಲಕ್ಕೆ ಏನಾಗಲಿದೆ ಎಂದು ನಾನು ಕೇಳುತ್ತಿಲ್ಲ. ನಾನು ನಮ್ಮ ಭಾರತೀಯ ಸಹೋದ್ಯೋಗಿಗಳನ್ನು ತೈಲದ ಬಗ್ಗೆ ಕೇಳುವುದಿಲ್ಲ. ಭಾರತ ಈ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳುವಲ್ಲಿ ಸಮರ್ಥರಾಗಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದು ಅಮೆರಿಕ ಸಂಬಂಧಗಳಿಂದ ಸ್ವತಂತ್ರವಾಗಿದೆ ಎಂದು ಸ್ಪಷ್ಟಪಡಿಸುವ ಮೂಲಕ ಭಾರತವು ತುಂಬಾ ಯೋಗ್ಯ ಪ್ರತಿಕ್ರಿಯೆ ನೀಡಿದೆ ರಷ್ಯಾ ವಿದೇಶಾಂಗ ಸಚಿವ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿಯು ರಾಷ್ಟ್ರೀಯ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಟ್ಟಿದೆ ಮತ್ತು ಸಂಪೂರ್ಣ ಗೌರವಕ್ಕೆ ಅರ್ಹವಾಗಿದೆ. ರಷ್ಯಾ-ಭಾರತ ಸಂಬಂಧಗಳು ಶಕ್ತಿಯನ್ನು ಮೀರಿವೆ ಎಂದು ಲಾವ್ರೊವ್ ಒತ್ತಿ ಹೇಳಿದರು. ನಮ್ಮ ವ್ಯಾಪಾರದಲ್ಲಿ ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಮತ್ತು SCO ಮತ್ತು BRICS ನಂತಹ ವೇದಿಕೆಗಳಲ್ಲಿ ಉನ್ನತ ಮಟ್ಟದ ಸಮನ್ವಯವನ್ನು ಒಳಗೊಂಡ ವಿಶೇಷವಾಗಿ ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆ ಎಂದು ಲಾವ್ರೊವ್ ಬಣ್ಣಿಸಿದ್ದಾರೆ.

ಭಾರತದ ರಾಷ್ಟ್ರೀಯ ಹಿತಾಸಕ್ತಿಗಳು ಉತ್ತೇಜಿಸಲು ನರೇಂದ್ರ ಮೋದಿ ಜಾರಿಗೆ ತರುತ್ತಿರುವ ವಿದೇಶಾಂಗ ನೀತಿಯ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ನಾವು ಉನ್ನತ ಮಟ್ಟದಲ್ಲಿ ನಿಯಮಿತವಾಗಿ ಸಂಪರ್ಕ ಸಾಧಿಸುತ್ತೇವೆ ಎಂದು ಲಾವ್ರೊವ್ ಹೇಳಿದರು.

ಡಿಸೆಂಬರ್‌ನಲ್ಲಿ ಭಾರತಕ್ಕೆ ಪುಟಿನ್ ಭೇಟಿ

ಚೀನಾದ ಟಿಯಾಂಜಿನ್‌ನಲ್ಲಿ ನಡೆದ SCO ಶೃಂಗಸಭೆಯಲ್ಲಿ ಉಭಯ ನಾಯಕರ ಇತ್ತೀಚಿನ ಭೇಟಿಯನ್ನು ಉಲ್ಲೇಖಿಸಿ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಲಾವ್ರೊವ್ ದೃಢಪಡಿಸಿದ್ದಾರೆ. ನಮ್ಮಲ್ಲಿ ಬಹಳ ವಿಸ್ತಾರವಾದ ದ್ವಿಪಕ್ಷೀಯ ಮಾತುಕತೆ, ವ್ಯಾಪಾರ, ಮಿಲಿಟರಿ, ತಾಂತ್ರಿಕ ಸಹಕಾರ, ಹಣಕಾಸು, ಮಾನವೀಯ ವಿಷಯಗಳು, ಆರೋಗ್ಯ ರಕ್ಷಣೆ, ಹೈಟೆಕ್, AI ಮತ್ತು SCO, BRICS ಮತ್ತು ದ್ವಿಪಕ್ಷೀಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಕಟ ಸಮನ್ವಯವಿದೆ ಎಂದು ಲಾವ್ರೊವ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)