Trump Tariff War: ಚೀನಾದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಉತ್ಪನ್ನಗಳ ಮೇಲೆ ಶೇ,100 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದನ್ನು ಚೀನಾ ಕಟುವಾಗಿ ಟೀಕಿಸಿದೆ.
ಅಮೆರಿಕದ ಸುಂಕ ಹೇರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ಸಚಿವಾಲಯ, ಅಮೆರಿಕದ ಕ್ರಮಗಳು ಚೀನಾದ ಹಿತಾಸಕ್ತಿಗಳಿಗೆ ಗಂಭೀರ ಹಾನಿ ಉಂಟು ಮಾಡುತ್ತವೆ. ನಮ್ಮ ನಡುವಿನ ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಮಾತುಕತೆಗಳನ್ನು ಹಾಳುಮಾಡಿವೆ. ಈ ಸುಂಕ ಹೇರಿಕೆಯ ವಿರುದ್ಧ ಚೀನಾ ಹೋರಾಡಲು ಬಯಸುವುದಿಲ್ಲ. ಆದರೆ ಹೋರಾಡಲು ಹೆದರುವುದಿಲ್ಲ ಮತ್ತು ಅಗತ್ಯವಿದ್ದರೆ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಸಚಿವಾಲಯವು ಅಮೆರಿಕದ ನಿರ್ಧಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಮುಂದಿನ ತಿಂಗಳಿನಿಂದ ಎಲ್ಲಾ ಚೀನೀ ಉತ್ಪನ್ನಗಳ ಮೇಲೆ ಶೇ,100 ಸುಂಕ ವಿಧಿಸಲಾಗುವುದು ಎಂದು ಯುಎಸ್ ಪ್ರಕಟಣೆ ತಿಳಿಸಿದೆ. ಅಲ್ಲದೆ, ನಿರ್ಣಾಯಕ ಅಮೇರಿಕನ್ ನಿರ್ಮಿತ ಸಾಫ್ಟ್‌ವೇರ್‌ಗಳ ಮೇಲೆ ಕಟ್ಟುನಿಟ್ಟಾದ ರಫ್ತು ನಿರ್ಬಂಧಗಳನ್ನು ಸಹ ಇದು ಘೋಷಿಲಾಗಿದೆ. ಈ ನಿರ್ಧಾರವು ಯುಎಸ್-ಚೀನಾ ವ್ಯಾಪಾರ ಯುದ್ಧ ಪ್ರಾರಂಭವಾಗಿದೆ.
ಇದನ್ನೂ ಓದಿ: Operation Blue Star ತಪ್ಪು ವಿಧಾನ, ಈ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣವನ್ನೇ ಪಣಕ್ಕಿಟ್ಟರು: ಪಿ.ಚಿದಂಬರಂ
ಇತ್ತೀಚೆಗೆ ಮ್ಯಾಡ್ರಿಡ್‌ನಲ್ಲಿ ನಡೆದ ವ್ಯಾಪಾರ ಮಾತುಕತೆಗಳ ನಂತರ, ಚೀನಾದ ವಾಣಿಜ್ಯ ಸಚಿವಾಲಯವು, ಅಮೆರಿಕವು ಚೀನಾದ ಮೇಲೆ ನಿರಂತರವಾಗಿ ಹೊಸ ನಿರ್ಬಂಧಗಳನ್ನು ವಿಧಿಸಿದೆ ಮತ್ತು ಅನೇಕ ಚೀನೀ ಕಂಪನಿಗಳನ್ನು ರಫ್ತು ನಿಯಂತ್ರಣ ಮತ್ತು ನಿರ್ಬಂಧಿತ ಪಟ್ಟಿಗೆ ಸೇರಿಸಿದೆ ಎಂದು ಕಿಡಿಕಾರಿದೆ. ಅಲ್ಲದೆ, ಪ್ರತಿ ಹಂತದಲ್ಲೂ ಹೆಚ್ಚಿನ ಸುಂಕಗಳನ್ನು ವಿಧಿಸುವ ಬೆದರಿಕೆ ಹಾಕುವುದು ಚೀನಾದೊಂದಿಗೆ ಮಾತುಕತೆ ನಡೆಸಲು ಸರಿಯಾದ ಮಾರ್ಗವಲ್ಲ. ಅಮೆರಿಕವು ತನ್ನ ತಪ್ಪುಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು ಮತ್ತು ಸ್ಥಿರ ಮತ್ತು ಅಭಿವೃದ್ಧಿಶೀಲ ಚೀನಾ-ಯುಎಸ್ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿಕೆ ತಿಳಿಸಿದೆ.
ಅಮೆರಿಕಕ್ಕೆ ಹೋಗುವ ಹಡಗುಗಳ ಮೇಲೆ ವಿಶೇಷ ಬಂದರು ಶುಲ್ಕವನ್ನು ವಿಧಿಸುವುದಾಗಿ ಚೀನಾ ಘೋಷಿಸಿತು. ಅಮೆರಿಕದ ಹೊಸ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮವನ್ನು ಅಗತ್ಯವಾದ ರಕ್ಷಣಾತ್ಮಕ ಕ್ರಮವೆಂದು ವಿವರಿಸಲಾಗಿದೆ. ಅಮೆರಿಕ ತನ್ನ ಸುಂಕ ಹೇರಿಕೆಯನ್ನು ಮುಂದುವರಿದರೆ, ಚೀನಾ ತನ್ನ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಸಚಿವಾಲಯ ಎಚ್ಚರಿಸಿದೆ.
ಇದನ್ನೂ ಓದಿ:12 ಮಂದಿ ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಅಫ್ಘಾನ್ ಸೇನೆ: ಔಟ್ಪೋಸ್ಟ್ಗಳು ಸೀಜ್! Pakistani soldiers
ಈ ಬಗ್ಗೆ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಚೀನಾದ ಮೇಲೆ ಶೇ,100 ರಷ್ಟು ಸುಂಕವನ್ನು ಘೋಷಿಸಿದರು. ಅಲ್ಲದೆ, ಚೀನಾದ ವ್ಯಾಪಾರದ ಮೇಲೆ ಅತ್ಯಂತ ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುತ್ತಿದೆ. ಚೀನಾದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಇದೇ ರೀತಿ ಪ್ರತಿಕ್ರಿಯಿಸುತ್ತದೆ. ಮುಂದಿನ ನವೆಂಬರ್ 1 ರಿಂದ, ಯುನೈಟೆಡ್ ಸ್ಟೇಟ್ಸ್ ಚೀನಾದ ಮೇಲೆ ಶೇ, 100 ರಷ್ಟು ಸುಂಕವನ್ನು ವಿಧಿಸುತ್ತದೆ. ಇದು ಪ್ರಸ್ತುತ ಚೀನಾ ಪಾವತಿಸುವ ಯಾವುದೇ ಸುಂಕಕ್ಕಿಂತ ಹೆಚ್ಚಾಗಿರುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದ ಹೊಸ ಸುಂಕಗಳು ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ವಿದ್ಯುತ್ ವಾಹನಗಳವರೆಗೆ ಈಗಾಗಲೇ ವ್ಯಾಪಾರ ಯುದ್ಧದಿಂದ ಸಂಕಷ್ಟದಲ್ಲಿರುವ ವಲಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಅನೇಕ ವಿಶ್ಲೇಷಕರು ಎಚ್ಚರಿಸಿದ್ದಾರೆ. ಡೊನಾಲ್ಡ್ ಟ್ರಂಪ್ ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನು ಭೇಟಿ ಮಾಡಲು ಸಿದ್ಧರಾಗಿರುವಂತೆಯೇ ಈ ಪ್ರಕಟಣೆ ಬಂದಿದೆ. (ಏಜೆನ್ಸೀಸ್)