Seoul: ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನು ಭೇಟಿ ಮಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್( (Trump- Xi to meet)), ಡ್ರ್ಯಾಗನ್ ದೇಶದೊಂದಿಗಿನ ಸಂಬಂಧಗಳಲ್ಲಿನ ಪುನರಾರಂಭವನ್ನು "ಅದ್ಭುತ" ಎಂದು ಕರೆದಿದ್ದು, ಚೀನಾದ ಮೇಲಿನ ಶೇ 10 ರಷ್ಟು ಸುಂಕವನ್ನು ಕಡಿತಗೊಳಿಸಿದ್ದಾರೆ.
ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಗುರುವಾರ (ಅ 30) ಕ್ಸಿ ಜಿನ್ಪಿಂಗ್ರೊಂದಿಗಿನ ಸಭೆಯ ನಂತರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಗಳನ್ನು ಟ್ರಂಪ್ ಘೋಷಿಸಿದ್ದು, ಇದರಲ್ಲಿ ಸುಂಕಗಳಲ್ಲಿನ ಶೇ 10% ಕಡಿತ, ಸೋಯಾಬೀನ್ ಖರೀದಿಗಳ ಪುನರಾರಂಭ ಮತ್ತು ಅಪರೂಪದ ಭೂಮಿಯ ರಫ್ತಿನ ವಿವಾದಾತ್ಮಕ ವಿಷಯದ ಕುರಿತು ಪ್ರಗತಿಯೂ ಸೇರಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಛೇ.. ತಮನ್ನಾಗೆ ಇಂಥಾ ಅನ್ಯಾಯ ಆಗಬಾರದಿತ್ತು: ಸಾಂಬಾರಿನಲ್ಲಿ ಕರಿಬೇವಿನಂತಾದ ಮಿಲ್ಕಿ ಬ್ಯೂಟಿ! Tamannaah Bhatia
ಕ್ಸಿ ಜೊತೆಗಿನ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮಾತುಕತೆಯ ಬಳಿಕ ಮಾತನಾಡಿದ ಟ್ರಂಪ್, ಈಗ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಮುಖ್ಯವಾದ ವಿಷಯಗಳ ಕುರಿತಾದ ತೀರ್ಮಾನಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದರು. ಇದೊಂದು ಅದ್ಭುತ ಸಭೆಯಾಗಿತ್ತು. ಫೆಂಟನಿಲ್ ನಿಲ್ಲಿಸಲು ಅಧ್ಯಕ್ಷ ಕ್ಸಿ ತುಂಬಾ ಶ್ರಮಿಸಲಿದ್ದಾರೆ, ಸೋಯಾಬೀನ್ ಖರೀದಿಗಳು ತಕ್ಷಣವೇ ಪ್ರಾರಂಭವಾಗುತ್ತವೆ ಮತ್ತು ಚೀನಾದ ಮೇಲಿನ ಸುಂಕವನ್ನು 57% ರಿಂದ 47% ಕ್ಕೆ ಇಳಿಸಲು ಸಮ್ಮತಿ ಸೂಚಿಸಿರುವುದಾಗಿ ತಿಳಿಸಿದರು.
ಎಲ್ಲಾ ಅಪರೂಪದ ಭೂಮಿಯ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ, ಇನ್ನು ಮುಂದೆ ಚೀನಾದ ರಫ್ತುಗಳನ್ನು ಅಮೆರಿಕಕ್ಕೆ ಸಾಗಿಸಲು ಯಾವುದೇ ಅಡೆತಡೆಗಳು ಇರುವುದಿಲ್ಲ ಎಂದು ಹೇಳಿದರು. ಚೀನಾ ಅಪರೂಪದ ಭೂಮಿಯ ರಫ್ತುಗಳನ್ನು ಒಂದು ವರ್ಷದ ಅವಧಿಗೆ ಮುಂದುವರಿಸಲು ಒಪ್ಪಿಕೊಂಡಿದೆ, ಈ ಒಪ್ಪಂದವನ್ನು ಎರಡೂ ಕಡೆಯವರು ವಿಸ್ತರಿಸಲು ನಿರೀಕ್ಷಿಸುತ್ತಾರೆ ಎಂದು ಟ್ರಂಪ್ರೊಂದಿಗೆ ಪ್ರಯಾಣಿಸುತ್ತಿದ್ದ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ಕೆಲ ತಿಂಗಳುಗಳಿಂದ ಅಮೆರಿಕದ ತಂತ್ರಜ್ಞಾನ ಮತ್ತು ರಕ್ಷಣಾ ಸಂಸ್ಥೆಗಳನ್ನು ಕಾಡುತ್ತಿದ್ದ ಪೂರೈಕೆ ಸರಪಳಿ ಕಳವಳಗಳನ್ನು ಈ ಒಪ್ಪಂದವು ಕಡಿಮೆ ಮಾಡಬಹುದು ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲಿನ ಸುಂಕವನ್ನು ಶೇ. 10 ರಷ್ಟು, ಅಂದರೆ ಶೇ. 57 ರಿಂದ ಶೇ. 47 ಕ್ಕೆ ಇಳಿಸುವುದಾಗಿ ಹೇಳಿದ್ದರು. ಕ್ಸಿ ಜಿನ್ಪಿಂಗ್ರೊಂದಿಗಿನ ಸಂವಾದದ ಬಳಿಕ ಇದನ್ನು "ಸದ್ಭಾವನೆಯ ಸೂಚಕ" ಎಂದು ಕರೆದರು. ಚೀನಾ ತಕ್ಷಣವೇ ಸೋಯಾಬೀನ್ ಖರೀದಿಸಲು ಪ್ರಾರಂಭಿಸುತ್ತದೆ. ಇದು ನಮ್ಮ ರೈತರಿಗೆ ಸಿಕ್ಕ ದೊಡ್ಡ ಗೆಲುವು, ವ್ಯಾಪಾರ ಸಂಬಂಧವು ಈಗ ತುಂಬಾ ವಿಭಿನ್ನವಾಗಿ ಕಾಣಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಅಧಿಕಾರಿಗಳು ಫೆಂಟನಿಲ್ ಉತ್ಪಾದನೆಯನ್ನು ಅಮೆರಿಕದ ಒಪಿಯಾಯ್ಡ್ ಬಿಕ್ಕಟ್ಟಿಗೆ ಕಾರಣ ಎಂದು ಆರೋಪಿಸುತ್ತಿದ್ದು, ಉಭಯ ದೇಶಗಳ ನಡುವೆ ಪದೇ ಪದೇ ಉದ್ಭವವಾಗುವ ಫೆಂಟನಿಲ್ ಉತ್ಪಾದನೆಯನ್ನು ತಡೆಯುವ ಪ್ರಯತ್ನಗಳನ್ನು ತೀವ್ರಗೊಳಿಸುವುದಾಗಿ ಕ್ಸಿ ವಾಗ್ದಾನ ಮಾಡಿದ್ದಾರೆ ಎಂದು ಟ್ರಂಪ್ ಇದೇ ವೇಳೆ ತಿಳಿಸಿದರು.
ಎರಡು ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಸಂಕೇತವಾಗಿ, ಟ್ರಂಪ್ ಏಪ್ರಿಲ್‌ನಲ್ಲಿ ಚೀನಾಕ್ಕೆ ಭೇಟಿ ನೀಡುವುದಾಗಿ ಘೋಷಿಸಿದರು, ಕ್ಸಿ ಈ ವರ್ಷದ ಕೊನೆಯಲ್ಲಿ ಅಮೆರಿಕಕ್ಕೆ ಮತ್ತೆ ಭೇಟಿ ನೀಡುವ ನಿರೀಕ್ಷೆಯಿದೆ.(ಏಜೆನ್ಸೀಸ್)