ನವದೆಹಲಿ: ನಿನ್ನೆ (ನ.7) ರಾತ್ರಿ ನಡೆದ ಪ್ರಚಾರ ಯಾತ್ರೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2024 ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇಳಿಯುವ ಸೂಚನೆ ನೀಡಿದ್ದಾರೆ.
ಅವರು ನವೆಂಬರ್ 15 ರಂದು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೊ ಮನೆಯಲ್ಲಿ 'ದೊಡ್ಡ ಘೋಷಣೆ' ಮಾಡುವುದಾಗಿ ನೆರೆದಿದ್ದ ಬೆಂಬಲಿಗರಿಗೆ ತಿಳಿಸಿದರು. 2024 ನವೆಂಬರ್ ಮಧ್ಯದಲ್ಲಿ ನಡೆಯಲಿರುವ ಮತ್ತೊಂದು ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಕೇಳಿಬರುತ್ತಿದೆ.
ಓಹಿಯೋದಲ್ಲಿ ನೀಡಿದ ಪ್ರಕಟಣೆ, ಟ್ರಂಪ್ ಚುನಾವಣೆಗೆ ಇಳಿಯುವ ಸ್ಪಷ್ಟ ಸೂಚನೆ ಎಂದೇ ಹೇಳಲಾಗುತ್ತಿದೆ. ಅದರ ನಡುವೆ ಎಲಾನ್ ಮಸ್ಕ್ ಕೂಡ ತಮ್ಮ ಟ್ವೀಟ್ನಲ್ಲಿ ಟ್ರಂಪ್ ಇರುವ ರಿಪಬ್ಲಿಕನ್ ಪಕ್ಷಕ್ಕೆ ಮತ ಚಲಾಯಿಸಿ ಎಂದು ಜನರಿಗೆ ಸಲಹೆ ನೀಡಿದ್ದಾರೆ. ಬೈಡೆನ್ ಸರ್ಕಾರದ ವೈಫಲ್ಯಗಳು ಡೆಮಾಕ್ರೆಟಿಕ್ ಪಕ್ಷವನ್ನು ಮುಂಬರುಬವ ಚುನಾವಣೆಯಲ್ಲಿ ಮುಳುಗಿಸಲಿದೆಯೆ ಎಂಬ ಪ್ರಶ್ನೆ ಎಲ್ಲೆಡೆ ಏಳುತ್ತಿದೆ.
ಟ್ರಂಪ್ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಆಗುವ ಲಾಭಗಳು ಅನೇಕ. ಸದ್ಯ ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿರುವ ಹಣ ಮತ್ತು ಬೆಂಬಲ ಬಹಳಷ್ಟು ಇಳಿಯಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)