ನವದೆಹಲಿ: ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಯುಎಸ್ ಡಾಲರ್ಗೆ ಪರ್ಯಾಯವಾಗಿ ಹೊಸ ಕರೆನ್ಸಿ ತರುವಂಥ ‘ಬ್ರಿಕ್ಸ್’ (ಬಿಆರ್ಐಸಿಎಸ್) ರಾಷ್ಟ್ರಗಳ ಚಿಂತನೆಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಳಿ ಕೆಂಡವಾಗಿದ್ದಾರೆ. ಇಂಥ ಪ್ರಯತ್ನ ಮುಂದುವರಿದಿದ್ದೇ ಆದಲ್ಲಿ ಶೇ.100 ತೆರಿಗೆ ಅಸ್ತ್ರ ಪ್ರಯೋಗಿಸುವುದಾಗಿ ಭಾರತವನ್ನೂ ಒಳಗೊಂಡ ಬ್ರಿಕ್ ಸದಸ್ಯ ರಾಷ್ಟ್ರಗಳು ಹಾಗೂ ಅದರ ಮಿತ್ರ ದೇಶಗಳಿಗೆ ಗಂಭೀರ ಎಚ್ಚರಿಕೆ ರವಾನಿಸಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಜತೆಗೆ ಹೊಸ ಕರೆನ್ಸಿ ತರುವ ಪ್ರಯತ್ನದ ಕುರಿತು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ಮಾತ್ರವಲ್ಲದೆ, ಅದರ ಹೊಸ ಸದಸ್ಯರಾದ ಇರಾನ್, ಈಜಿಪ್ಟ್, ಇಥಿಯೋಪಿಯಾ ಮತ್ತು ಯುಎಇ ಔಪಚಾರಿಕ ಭರವಸೆ ನೀಡಬೇಕೆಂದು ಟ್ರಂಪ್ ಕೋರಿದ್ದಾರೆ. ‘ಬ್ರಿಕ್ಸ್ ಕರೆನ್ಸಿ ತರುವುದಿಲ್ಲ ಅಥವಾ ಯುಎಸ್ ಡಾಲರ್ಗೆ ಬದಲಿ ಆಗಿ ಯಾವುದೇ ಇತರ ಕರೆನ್ಸಿಗೆ ಬೆಂಬಲಿಸುವುದಿಲ್ಲ ಎಂಬ ಬದ್ಧತೆ, ಭರವಸೆ ನಮಗೆ ಈ ರಾಷ್ಟ್ರಗಳಿಂದ ಬೇಕಾಗಿದೆ, ಇಲ್ಲವಾದರೆ ಶೇ.100ರಷ್ಟು ತೆರಿಗೆ ವಿಧಿಸುವುದನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಆಕ್ರೋಶಕ್ಕೆ ಕಾರಣ?: ಇತ್ತೀಚೆಗೆ ರಷ್ಯಾದ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಸ್ಥಳೀಯ ಕರೆನ್ಸಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಡಾಲರೇತರ ವಹಿವಾಟನ್ನು ಉತ್ತೇಜಿಸುವ ಕುರಿತು ಚರ್ಚೆ ಆಗಿತ್ತು. ‘ಡಾಲರನ್ನು ಆಯುಧದ ರೀತಿ ಅಮೆರಿಕ ಬಳಸುತ್ತಿದೆ, ಅದು ದೊಡ್ಡ ತಪು್ಪ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅಭಿಪ್ರಾಯಪಟ್ಟಿದ್ದರು. ‘ನಾವು ಡಾಲರ್ ವಿರೋಧಿಸುತ್ತಿಲ್ಲ, ಆದರೆ ಅವರು ನಮಗೆ ಕೆಲಸ ಮಾಡಲು ಬಿಡದಿದ್ದರೆ ಇನ್ನೇನು ಮಾಡಲಾಗುತ್ತದೆ? ಹೀಗಾಗಿ ಪರ್ಯಾಯ ಕಂಡುಕೊಳ್ಳುವುದು ನಮಗೆ ಅನಿವಾರ್ಯ’ ಎಂದು ಪುತಿನ್ ಹೇಳಿದ್ದರು. ಅದಾಗ್ಯೂ ಮೈತ್ರಿಕೂಟ ಬ್ರಿಕ್ಸ್ ಕರೆನ್ಸಿ ಅಥವಾ ಯಾವುದೇ ತ್ವರಿತ ಪಾವತಿ ವ್ಯವಸ್ಥೆ ಜಾರಿಗೆ ಮುಂದಾಗುತ್ತಿಲ್ಲ ಎಂದು ಪುತಿನ್ ಸ್ಪಷ್ಟನೆ ನೀಡಿದ್ದರು.
ಭಾರತದ ನಿಲುವೇನು?: ನಾವು ಡಾಲರ್ ಅಪನಗದೀಕರಣದ ವಿರುದ್ಧವಾಗಿದ್ದೇವೆಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಹೊಸ ಕರೆನ್ಸಿ ವಿಚಾರ ಭಾರತದ ಆರ್ಥಿಕ ನೀತಿ ಅಥವಾ ದೇಶದ ರಾಜಕೀಯ ಇಲ್ಲವೇ ಕಾರ್ಯತಂತ್ರಾತ್ಮಕ ನೀತಿಯ ಭಾಗವಾಗಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಕ್ಟೋಬರ್ನಲ್ಲೇ ಸ್ಪಷ್ಟಪಡಿಸಿದ್ದರು. ಒಂದು ವೇಳೆ ಉದ್ಯಮ ಪಾಲುದಾರರು ಡಾಲರ್ ಸ್ವೀಕರಿಸದಿದ್ದರೆ ಅಥವಾ ವ್ಯಾಪಾರ ನೀತಿಗಳಲ್ಲಿ ಸಮಸ್ಯೆ ಕಂಡುಬಂದರೆ ಆಗ ಪರ್ಯಾಯದ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದೂ ಅವರು ಹೇಳಿದ್ದರು.
ಬ್ರಿಕ್ಸ್ನಲ್ಲಿ ಚರ್ಚೆ ಆಗಿದ್ದು?: ಯುಎಸ್ ಡಾಲರ್ ಅವಲಂಬನೆ ತಗ್ಗಿಸುವ ಚಿಂತನೆಯಲ್ಲಿರುವ ಬ್ರಿಕ್ಸ್ , ಸದಸ್ಯ ರಾಷ್ಟ್ರಗಳ ನಡುವಿನ ವ್ಯವಹಾರಕ್ಕಾಗಿ ಕರೆನ್ಸಿ ಸೃಷ್ಟಿ ಕುರಿತು ಮಾತುಕತೆ ನಡೆಸಿದ್ದವು. ಅಮೆರಿಕದ ನಿರ್ಬಂಧ ಹಾಗೂ ವಿತ್ತೀಯ ನೀತಿಗಳ ಚಂಚಲತೆಯಿಂದ ರಕ್ಷಿಸಿಕೊಳ್ಳಲು ಈ ಕರೆನ್ಸಿ ನೆರವಾಗಲಿದೆ ಎಂಬುದು ಸಂಬಂಧಿತ ರಾಷ್ಟ್ರಗಳ ಲೆಕ್ಕಾಚಾರ. ಆದರೆ ಇಂಥ ಒಂದು ಕರೆನ್ಸಿ ಚಲಾವಣೆಗೆ ಬಂದರೆ ಅದು ಜಾಗತಿಕ ವ್ಯವಹಾರ ಮತ್ತು ಹಣಕಾಸಿನಲ್ಲಿ ಡಾಲರ್ನ ಅಧಿಪತ್ಯಕ್ಕೆ ನೇರ ಸವಾಲು ಎಂದು ವಿಶ್ಲೇಷಿಸಲ್ಪಟ್ಟಿದೆ. ಮತ್ತೊಂದೆಡೆ ಬ್ರಿಕ್ಸ್ ಸಮೂಹದ ಆರ್ಥಿಕ ವೇದಿಕೆಗಳಾದ ನ್ಯೂ ಡೆವಲಪ್ವೆುಂಟ್ ಬ್ಯಾಂಕ್ ಮತ್ತು ಕಾಂಟಿಂಜೆಂಟ್ ರಿಸರ್ವ್ ಅರೇಂಜ್ವೆುಂಟ್ಗಳು ಸದ್ಯ ಯುನಿಫೈಡ್ ಕರೆನ್ಸಿ ತರುವ ಬದಲು ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಗಮನ ಕೇಂದ್ರೀಕರಿಸಿವೆ ಎಂದೂ ಹೇಳಲಾಗುತ್ತಿದೆ.
ಸದ್ಯಕ್ಕೆ ಡಾಲರ್ ಸುರಕ್ಷಿತ: ಪ್ರಾಥಮಿಕ ಜಾಗತಿಕ ರಿಸರ್ವ್ ಕರೆನ್ಸಿ ಆಗಿ ಯುಎಸ್ ಡಾಲರ್ನ ಪಾತ್ರ ಹತ್ತಿರದ ಹಾಗೂ ಮಧ್ಯಮದ ಅವಧಿಯಲ್ಲಿ ಸುರಕ್ಷಿತವಾಗಿದೆ ಎಂದು ಅಟ್ಲಾಂಟಿಕ್ ಕೌನ್ಸಿಲ್ನ ಅಧ್ಯಯನ ವರದಿ ಹೇಳಿದೆ. ಜಾಗತಿಕ ವಿದೇಶಿ ವಿನಿಮಯ ಮೀಸಲುಗಳಲ್ಲಿ ಡಾಲರ್ ಅಂದಾಜು ಶೇ.58 ಪಾಲು ಹೊಂದಿದೆ ಎಂದೂ ಈ ವರದಿ ಹೇಳಿದೆ.
ತಕ್ಷಣಕ್ಕೇನು?: ಸದ್ಯಕ್ಕೆ ಹೊಸ ಕರೆನ್ಸಿ ಪ್ರಯತ್ನ ನಡೆಯದಿದ್ದರೂ ‘ಬ್ರಿಕ್ಸ್ ಬ್ರಿಡ್ಜ್ ಮಲ್ಟಿಸೈಡೆಡ್ ಪೇಮೆಂಟ್ ಪ್ಲಾ್ಯಟ್ಫಾಮ್ರ್’ ಎನ್ನುವ ಬ್ಲಾಕ್ಚೈನ್ ಆಧರಿತ ವ್ಯವಸ್ಥೆ ತರಲು ಬ್ರಿಕ್ಸ್ ಚಿಂತನೆಯಲ್ಲಿದೆ ಎನ್ನಲಾಗುತ್ತಿದೆ. ಇದು ಸದಸ್ಯ
ಬ್ರಿಕ್ಸ್ ಚಿಂತನೆ ಏನು?
ಟ್ರಂಪ್ ಎಚ್ಚರಿಕೆ ಏನು?