ಕರೂರು: ತಮಿಳುನಾಡಿನ ಕರೂರು ಜಿಲ್ಲೆಯ ತೆನ್ನಿಲೈ ಬಳಿ ಮರಳು ಸಾಗಿಸುತ್ತಿದ್ದ ಟ್ರಕ್ವೊಂದು ಪಲ್ಟಿಯಾಗಿದ್ದು(Truck overturn), ಮರುಳಿನ ಕೆಳಗೆ ಸಿಲುಕಿ ಉಸಿರುಗಟ್ಟಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ ಎಂದು ಭಾನುವಾರ(ನ. 02) ವರದಿಯಾಗಿದೆ.
ಶನಿವಾರ ಈ ಘಟನೆ ನಡೆದಿದೆ. ಮರಳು ತುಂಬಿದ ಟ್ರಕ್ ಕೊಡಂಡೂರಿನ ಖಾಸಗಿ ಕಲ್ಲು ಕ್ವಾರಿಯಿಂದ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹೊರಟಿತ್ತು. ವೇಗವಾಗಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾಗಿದೆ ಎನ್ನಲಾಗಿದೆ.
ಟ್ರಕ್ನಲ್ಲಿ ಮರಳಿನ ರಾಶಿ ಮೇಲೆ ಕುಳಿತಿದ್ದ ಒಡಿಶಾದ ಕಾರ್ಮಿಕರಾದ ಟಿ ಅಜಯ್ ಬಂಗಾರ(31), ಎನ್ ಸಿಕಂದರ್ ಕೆಟ್ಟಾ(21) ಹಾಗೂ ಬಿಹಾರದ ಎ ವಿದ್ಯಾನಂದ್ ಪ್ರಭಾಕರನ್(48) ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಚಾಲಕ ಚಂದ್ರಕುಮಾರ್, ಕಾರ್ಮಿಕ ಅಲ್ಜೀಮ್ ಪರ್ವಾಗೆ ಗಂಭೀರ ಗಾಯಗಳಾಗಿವೆ.
ತೆನ್ನಿಲೈ ಪೊಲೀಸರು ಕಾರ್ಮಿಕರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಗಾಯಾಳನ್ನು ಕರೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. (ಏಜೆನ್ಸೀಸ್)