ನ್ಯೂಸ್

ಎಲ್​ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ರಕ್ ಸ್ಫೋಟ; 5 ಜನರು ಬಲಿ; 37 ಮಂದಿಗೆ ಗಾಯ!

ಜೈಪುರ: ಜೈಪುರ-ಅಜ್ಮೀರ್​ ಹೆದ್ದಾರಿಯಲ್ಲಿ ಎಲ್​ಪಿಜಿ ಗ್ಯಾಸ್​ ಸಾಗಿಸುತ್ತಿದ್ದ ಟ್ರಕ್​ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್​ ಬೆಂಕಿ ಹತ್ತಿಕೊಂಡ ಹಿನ್ನೆಲೆ 5 ಜನ ಮೃತಪಟ್ಟಿದ್ದು, 37 ಜನ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಘಟನೆ ನಡೆದಿದೆ.

ಈ ದುರಂತದಲ್ಲಿ ಬರೊಬ್ಬರಿ 35ಕ್ಕೂ ಅಧಿಕ ವಾಹನಗಳು ಜಕಂಗೊಂಡಿವೆ. ಅಲ್ಲದೇ, ಈ ಘಟನೆ ಅಣತಿ ದೂರದಲ್ಲಿ ಇರುವ ಪೆಟ್ರೋಲ್​ ಪಂಪ್​ ಬಳಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

''ದುರಂತದಲ್ಲಿ ನಾಲ್ಕು ಜನ ಮೃತಪಟ್ಟಿದ್ದು, ಒಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಸುಮಾರು 40ವಾಹನಗಳು ಬೆಂಕಿಗೆ ಅಹುತಿಯಾಗಿವೆ. ಅಗ್ನಿಶಾಮಕದಳ ಮತ್ತು ಆ್ಯಂಬುಲೆನ್ಸ್​ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡುತ್ತೀವೆ. ಅಲ್ಲದೇ, ಈವರೆಗೂ 24 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಕೆಲವರು ಗಂಭೀರ ಗಾಯಗಳಾಗಿವೆ'' ಎಂದು ಜೈಪುರ್​ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತು ರಾಜಸ್ಥಾನ ಸಿಎಂ ಭಜನ್​ಲಾಲ್​ ಶರ್ಮಾ ಮತ್ತು ಆರೋಗ್ಯ ಸಚಿವ ಗಜೇಂದ್ರ ಸಿಂಗ್​ ಪ್ರತಿಕ್ರಿಯೆ ನೀಡಿದ್ದು, ದುರಂತದ ಬಗ್ಗೆ ದುಖಃ ವ್ಯಕ್ತಪಡಿಸಿದ್ದಾರೆ. ಕೂಡಲೇ ಗಾಯಗಳುಗಳನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಂತೆ ಸೂಚಿದ್ದಾರೆ. ಸಂಪೂರ್ಣ ಮಾಹಿತಿ ಬಳಿಕ ಮಾತನಾಡುವೆ ಎಂದಿದ್ದಾರೆ ಎಂದು ವರದಿಯಾಗಿದೆ, (ಏಜೆನ್ಸೀಸ್​).