ಬೆಂಗಳೂರು: ಕನ್ನಡ ಚಿತ್ರರಂಗದ ಬುದ್ಧಿವಂತ ನಟ, ಡಿಫರೆಂಟ್ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ 'ಯುಐ' ಸಿನಿಮಾದ ಮೊದಲ ಚೀಪ್ ಸಾಂಗ್ ಲಿರಿಕಲ್ ವಿಡಿಯೋ ಈ ಹಿಂದೆಯೇ ಬಿಡಗಡೆಗೊಂಡು ನೋಡುಗರ ತಲೆಗೆ ಹುಳಬಿಟ್ಟಿತ್ತು. ಇದೀಗ ಚಿತ್ರದ ಎರಡನೇ 'ಟ್ರೋಲ್' ಹಾಡು ರಿಲೀಸ್ ಆಗಿದ್ದು, ಉಪ್ಪಿ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರಿಗೆ ಹಾಡಿನ ಸಾಲುಗಳಿಗೆ ಫಿದಾ ಆಗಿದ್ದಾರೆ.
'ಯುಐ' ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ ಉಪೇಂದ್ರ, ಈ ಸಿನಿಮಾ ಮುಖೇನ ಮತ್ತೊಮ್ಮೆ ತಾವು ಬುದ್ಧಿವಂತ ಹಾಗೂ ವಿಭಿನ್ನ ಎಂಬುದನ್ನು ಪ್ರಸ್ತುತ ಕಾಲಘಟ್ಟದಲ್ಲೂ ಸಾಬೀತುಪಡಿಸಿದ್ದಾರೆ. ಎಷ್ಟೇ ಚಿತ್ರಗಳು ಬರಲಿ, ಹೋಗಲಿ ತನ್ನ ಶೈಲಿಯಲ್ಲಿ ಹೇಳುವುದುನ್ನು ಉಪ್ಪಿ ಎಂದಿಗೂ ಬಿಡಲಾರರು ಎಂಬುದು ಟ್ರೋಲ್ ಸಾಂಗ್ನಲ್ಲಿ ತಿಳಿದುಬಂದಿದೆ.
ಟ್ರೋಲ್ ಸಾಂಗ್ನ ಟ್ರೋಲಾಗುತ್ತೆ ಇದು, ಟ್ರೋಲಾಗುತ್ತೆ ಹಾಡು ನಿನ್ನೆ ಬಿಡುಗಡೆಗೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್, ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ. ಟ್ರೋಲ್ ವಿಷಯಕ್ಕೆ ಸಂಬಂಧಿಸಿದಂತೆ ಬರೆದಿರುವ ಸಾಲುಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಈ ಹಾಡಿನಲ್ಲಿ ಬರುವ ಸಾಲುಗಳು ಸಾಮಾಜಿಕ ಜಾಲತಾಣದ ಟ್ರೋಲ್ಗಳಲ್ಲಿ ವ್ಯಾಪಕವಾಗಿ ಕೇಳಿಬಂದ ಡೈಲಾಗ್ಗಳೇ ಆಗಿವೆ. ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋನು, ನಂದಿನಿ, ನಮ್ಮ ಮನಸ್ಸು ದೇವರು ಇತ್ಯಾದಿ ಸಾಲುಗಳು ಸದ್ಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.
ಸದ್ಯ ಯುಐ ಸಿನಿಮಾದ ಎರಡನೇ ಟ್ರೋಲ್ ಹಾಡು ಇದೀಗ ಯುಟ್ಯೂಬ್ನಲ್ಲಿ ಬಿಡುಗಡೆಗೊಂಡು 24 ಗಂಟೆಗಳು ಕಳೆಯುವ ಮುನ್ನವೇ ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದುಕೊಂಡು, ಮುನ್ನುಗ್ಗುತ್ತಿದೆ.