ನ್ಯೂಸ್

ದೈವ ದರ್ಶನಕ್ಕೆಂದು ಹೊರಟು ನಡುರಸ್ತೆಯಲ್ಲೇ ದೇವರ ಪಾದ ಸೇರಿದ ಐದು ಭಕ್ತರು..

ಹತ್ರಾಸ್‌: ಭೀಕರ ಅಪಘಾತವೊಂದರಲ್ಲಿ ಐದು ಜನರು ಭಕ್ತರು ಮೃತಪಟ್ಟು, 16 ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್​ ಬಳಿ ನಡೆದಿದೆ.

ಇದನ್ನೂ ಓದಿ: ದಲಿತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೆ ಅಡ್ಡಿ: 13 ಜನ ಪೊಲೀಸ್​ ವಶಕ್ಕೆ

ಮೃತರನ್ನು ಮಾಧುರಿ(22), ಲಕ್ಷ್ಮಿ (18), ಅಭಿಷೇಕ್ (22), ಹೇಮಲತಾ (12) ಮತ್ತು ವಿಕ್ರಮ್ ಎಂದು ಗುರುತಿಸಲಾಗಿದ್ದು, ಈ ಭಕ್ತರು ಪರಸ್ಪರ ಸಂಬಂಧಿಗಳಾಗಿದ್ದರು ಎನ್ನಲಾಗಿದೆ. ಶುಕ್ರವಾರ ರಾತ್ರಿ ಏಟಾ ಜಿಲ್ಲೆಯ ಜಲೇಸರ್ ಗ್ರಾಮದ 50ರಿಂದ 60 ಮಂದಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕುಳಿತುಕೊಂಡು ಗೋವರ್ಧನಕ್ಕೆ ತೆರಳುತ್ತಿದ್ದರು. ಈ ಭಕ್ತರು ಪರಸ್ಪರ ಸಂಬಂಧಿಗಳಾಗಿದ್ದರು ಎನ್ನಲಾಗಿದ್ದು, ಟ್ರ್ಯಾಕ್ಟರ್ ಸಾದಾಬಾದ್ ರಸ್ತೆಗೆ ಬಂದಾಗ ಎದುರಿನಿಂದ ಬಂದ ಡಂಪರ್ ಟ್ರಾಕ್ಟರ್​ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ 5 ಮಂದಿ ಮೃತಪಟ್ಟು. 16 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸದಾಬಾದ್‌ನ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ, ಹಲವರನ್ನು ಜಿಲ್ಲಾಸ್ಪತ್ರೆಗೆ ಮತ್ತು ಇನ್ನು ಕೆಲವರನ್ನು ಆಗ್ರಾದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಟ್ರಾಲಿಯಲ್ಲಿ 50ರಿಂದ 60 ಮಂದಿ ಕುಳಿತಿದ್ದರು ಎಂದು ಅಪಘಾತದಲ್ಲಿ ಗಾಯಗೊಂಡಿರುವ ಸುಲ್ತಾನ್ ಸಿಂಗ್ ಹೇಳಿದ್ದು, ನಾವೆಲ್ಲ ಗೋವರ್ಧನಕ್ಕೆ ಹೊರಟಿದ್ದೆವು. ನಮ್ಮ ಟ್ರಾಕ್ಟರ್ ಸಹಪಾವು ಪ್ರದೇಶವನ್ನು ತಲುಪಿದಾಗ, ಮುಂದೆ ಬರುತ್ತಿದ್ದ ಡಂಪರ್ ನಮ್ಮ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾನೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)