ರಾಯ್ಗಢ: ಖ್ಯಾತ ಬಾಲಿವುಡ್ ಪ್ರೊಡಕ್ಷನ್ ಡಿಸೈನರ್ ತಮ್ಮ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ನಿತಿನ್ ಚಂದ್ರಕಾಂತ್ ದೇಸಾಯಿ(58) ಎಂದು ಗುರುತಿಸಲಾಗಿದ್ದು, ನಿತಿನ್ ದೇಸಾಯಿ ಅವರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಬಾಲಿವುಡ್ನಲ್ಲಿ ಉತ್ತಮ ಹೆಸರನ್ನು ಗಳಿಸಿದ್ದ ನಿತಿನ್, ದೇಸಾಯಿ ದೂರದರ್ಶನ ಚಲನಚಿತ್ರ ತಮಸ್ (1987) ನಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಮೂಲಕ ಕಲಾ ನಿರ್ದೇಶಕರಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ನಂತರ ಲಗಾನ್, ದೇವದಾಸ್, ಸ್ವದೇಸ್, ಜೋಧಾ ಅಕ್ಬರ್, ಮತ್ತು ಪ್ರೇಮ್ ರತನ್ ಧನ್ ಪಾಯೋ ಚಿತ್ರದ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಾಲಿವುಡ್‌ನ ಟಾಪ್ ಆರ್ಟ್ ಡೈರೆಕ್ಟರ್ ಆಗಿದ್ದ ನಿತಿನ್, ಮಹಾರಾಷ್ಟ್ರದ ಕರ್ಜತ್‌ನಲ್ಲಿ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಣ ಸೌಲಭ್ಯವಾದ ND ಸ್ಟುಡಿಯೋಸ್ನ್ನು ಸ್ಥಾಪಿಸಿದ್ದರು.
ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮತ್ತು ಮೂರು ಫಿಲ್ಮ್‌ಫೇರ್ ಅತ್ಯುತ್ತಮ ಕಲಾ ನಿರ್ದೇಶನ ಪ್ರಶಸ್ತಿಗಳನ್ನು ಪಡೆದಿದ್ದ ನಿತಿನ್, 2016 ರಲ್ಲಿ, ಅವರು ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.(ಏಜೆನ್ಸೀಸ್)