ನ್ಯೂಸ್

ರಾಮ್​ ಚರಣ್​ ಮುಂದಿನ ಚಿತ್ರಕ್ಕೆ ಸ್ಟಾರ್​ ನಟಿಯ ಪುತ್ರಿ ನಾಯಕಿ!

ಹೈದರಾಬಾದ್: 'ಉಪ್ಪೇನ' ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದಲ್ಲಿ ಸೆಟ್ಟೇರಲು ಸಜ್ಜಾಗಿರುವ ಹೊಸ ಚಿತ್ರಕ್ಕೆ ಬಾಲಿವುಡ್​ನ ಸ್ಟಾರ್​ ನಟಿಯ ಮಗಳು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಟಾಲಿವುಡ್​ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

'ಆರ್​ಆರ್​ಆರ್​' ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ನಟ ರಾಮ್ ಚರಣ್​ ಅಭಿನಯಿಸಲಿರುವ ಮುಂದಿನ ಚಿತ್ರಕ್ಕೆ ಇದೀಗ ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ರವಿನಾ ಟಂಡನ್​ ಅವರ ಪುತ್ರಿ ರಶಾ ಥಡಾನಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬಹಳ ಹಿಂದೆಯೇ ಘೋಷಿಸಲಾದ ಈ ಪ್ರಾಜೆಕ್ಟ್​ ಸದ್ಯ ಪೂರ್ವ-ನಿರ್ಮಾಣ ಹಂತದಲ್ಲಿದೆ. ರಾಮ್​ ಚರಣ್​ಗೆ ನಾಯಕಿಯಾಗಿ ರಶಾ ಥಡಾನಿ ಅವರನ್ನು ಆಯ್ಕೆ ಮಾಡುವ ಮುಖೇನ ಟಾಲಿವುಡ್​ ಚಿತ್ರರಂಗಕ್ಕೆ ಕರೆ ತರುವ ಪ್ರಯತ್ನದಲ್ಲಿ ನಿರ್ದೇಶಕ ಬುಚ್ಚಿ ಬಾಬು ಮುಂಚೂಣಿಯಲ್ಲಿದ್ದಾರೆ ಎಂದು ಇತ್ತೀಚಿನ ಸಿನಿ ವರದಿ ತಿಳಿಸಿದೆ,(ಏಜೆನ್ಸೀಸ್).