ನ್ಯೂಸ್

VIDEO | ದಾಂಪತ್ಯ ಬದುಕಿಗೆ ಪ್ರವೇಶಿಸಿದ ಟಾಮಿ ಮತ್ತು ಜೆಲ್ಲಿ!

ಉತ್ತರ ಪ್ರದೇಶ: ಅಲ್ಲಿ ಹತ್ತಾರು ಜನ ಸೇರಿದ್ದರು... ಎಲ್ಲರ ಮುಖದಲ್ಲೂ ಸಂತಸ, ಕಾರಣ ತಮ್ಮ ಮನೆಯ ಸದಸ್ಯನಂತಿದ್ದ ನಾಯಿಯ ವಿವಾಹ ಕಾರ್ಯಕ್ರಮ ನೆರವೇರುತ್ತಿತ್ತು. ಹೌದು, ಇದು ಅಚ್ಚರಿಯಾದರೂ ಸತ್ಯ. ಸದ್ಯ ನಾಯಿಯಗಳ ವಿವಾಹ ಕಾರ್ಯಕ್ರಮ ನಡೆದಿರುವಂತಹದ್ದು, ಉತ್ತರ ಪ್ರದೇಶದ ಅಲಿಗಢ ವ್ಯಾಪ್ತಿಯಲ್ಲಿ.

ದಿನೇಶ್​ ಚೌಧರಿ ಎಂಬುವವರು ಸಾಕು ನಾಯಿ ಟಾಮಿ, ರಾಮ್ ಪ್ರಕಾರ್ ಸಿಂಗ್ ಅವರ ಸಾಕು ನಾಯಿ ಜೆಲ್ಲಿಯನ್ನುವಿವಾಹವಾಗಿದೆ. ಈ ನಾಯಿಗಳು ವಿವಾಹ ಕಾರ್ಯಕ್ರಮದ ಅದ್ದೂರಿಯಾಗಿ ನೆರವೇರಿದೆ. ಮನೆಯ ಸದಸ್ಯೆರೆಲ್ಲಾ ಡೊಳ್ಳು ಬಾರಿಸಿ, ಕುಣಿದು ಸಂಭ್ರಮ ಪಟ್ಟಿದ್ದಾರೆ. ಟಾಮಿ ಮತ್ತು ಜೆಲ್ಲಿ ನಾಯಿಗಳ ವಿವಾಹ ಕಳೆದ ಜನವರು 14ರಂದು ನೆರವೇರಿದೆ.

ಭಾರತೀಯ ಸಂಪ್ರದಾಯದಂತೆ ಟಾಮಿ ಹಾಗೂ ಜೆಲ್ಲಿ ಎಂಬ ನಾಯಿಗಳ ವಿವಾಹ ನಡೆದಿದೆ. ರಾಯ್​​ಪುರದಿಂದ ಟಾಮಿ ವಿವಾಹ ಮಂಟಪಕ್ಕೆ ಆಗಮಿಸಿದೆ. ಇತ್ತ ಜೆಲ್ಲಿ ಕಡೆಯವರು ಮದುವೆ ದಿಬ್ಬಣದೊಂದಿಗೆ ಸಂತಸದಿಂದಲೇ ಸ್ವಾಗತಿಸಿದ್ದಾರೆ. ನಂತರ ಟಾಮಿ ಹಾಗೂ ಜೆಲ್ಲಿ ಹಾರ ಬದಲಾಯಿಸಿಕೊಂಡಿವೆ.

ಟಾಮಿ ಮತ್ತು ಜೆಲ್ಲಿಯ ವಿವಾಹ ಕಾರ್ಯಕ್ರಮ ವಿಶೇಷವಾಗಿ ನೆರವೇರಿದೆ. ತಮ್ಮ ಪ್ರೀತಿಯ ಸಾಕು ನಾಯಿಗಳಿಗೆ ವಿವಾಹವಾದ ಸಂತದಲ್ಲಿ, ದೇಸಿ ತುಪ್ಪದಿಂದ ಮಾಡಿದ ಆಹಾರವನ್ನು ನೆರೆಹೊರೆಯ ನಾಯಿಗಳಿಗೆ ವಿತರಿಸಲಾಗಿದೆ ಎಂದು ವರದಿಯಾಗಿದೆ.

ಸದ್ಯ ಟಾಮಿ ಮತ್ತು ಜೆಲ್ಲಿಯ ವಿವಾಹ ಕಾರ್ಯಕ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 45 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. (ಏಜೆನ್ಸೀಸ್)