ನ್ಯೂಸ್

ಟಾಲಿವುಡ್​ಗೆ ಫೆಬ್ರವರಿ ತಿಂಗಳು ಚಿತ್ರೋತ್ಸವ; ಸಿನಿಪ್ರಿಯರಿಗೆ ಮನರಂಜನೆಯ ಹಬ್ಬದೂಟ! Tollywood Release

ಮೋಹನ್​ ಶೆಟ್ಟಿ

Tollywood Release: ಹೊಸ ವರ್ಷಕ್ಕೆ ಕಾಲಿಟ್ಟಿರುವ ಭಾರತೀಯ ಚಿತ್ರೋದ್ಯಮ ತಮ್ಮ ಸಿನಿಪ್ರಿಯರಿಗೆ ಹೆಚ್ಚು ಮನರಂಜನೆ ಕೊಡಲು ದಿಟ್ಟ ನಿರ್ಧಾರ ಕೈಗೊಂಡಿದೆ. ಇದಕ್ಕೆ ಸಾಕ್ಷಿ ಹಲವಾರು ಚಿತ್ರರಂಗಗಳ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್​. ಸ್ಯಾಂಡಲ್​ವುಡ್​, ಟಾಲಿವುಡ್​, ಕಾಲಿವುಡ್​, ಮಾಲಿವುಡ್​ ಮತ್ತು ಬಾಲಿವುಡ್​ನ ಸ್ಟಾರ್ ನಟರು ಸೇರಿದಂತೆ ಹೊಸಬರ ಹಲವು ನಿರೀಕ್ಷಿತ ಚಿತ್ರಗಳು ಈ ವರ್ಷದ ಮೊದಲಾರ್ಧದಲ್ಲಿ ತೆರೆಕಾಣಲು ಎದುರುನೋಡುತ್ತಿವೆ. ಕಳೆದ ವರ್ಷ ಉತ್ತಮ ಆದಾಯ ನೋಡದ ಸಿನಿ ಇಂಡಸ್ಟ್ರಿಗಳು 2025ರಲ್ಲಿ ಅತ್ಯುತ್ತಮ ಲಾಭ ಗಳಿಸುವತ್ತ ದಾಪುಗಾಲಿಟ್ಟಿದೆ. ಈ ಸಾಲಿನಲ್ಲಿ ತೆಲುಗು ಚಿತ್ರರಂಗ ಒಂದು ಹೆಜ್ಜೆ ಮುಂದೋಗಿದೆ ಎಂದರೆ ಖಂಡಿತ ತಪ್ಪಾಗಲಾರದು. ಅದಕ್ಕೆ ಫೆಬ್ರವರಿ ತಿಂಗಳಲ್ಲಿ ರಿಲೀಸ್​ ಅಗಲಿರುವ 8 ಸಿನಿಮಾಗಳೇ ಸಾಕ್ಷಿ.

ಇತ್ತೀಚೆಗಷ್ಟೇ ಭರ್ಜರಿ ಓಪನಿಂಗ್ ಪಡೆದ ತೆಲುಗು ಹಿರಿಯ ನಟ ಬಾಲಯ್ಯ ಅಭಿನಯದ 'ಡಾಕು ಮಹಾರಾಜ' ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಕಂಗೊಳಿಸುತ್ತಿವೆ. ಆ್ಯಕ್ಷನ್​, ಮಾಸ್​ಗೆ ಕಿಂಗ್​ ಆಗಿ ಮಿಂಚುತ್ತಿರುವ ನಟ ಬಾಲಯ್ಯ, ಡಾಕು ಮಹಾರಾಜ್ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಅತ್ಯುತ್ತಮ ಗಳಿಕೆ ನೋಡುವ ನಿರೀಕ್ಷೆಯಲ್ಲಿದ್ದಾರೆ. ಥಿಯೇಟರ್​ಗಳತ್ತ ಮುಖ ಮಾಡಿರುವ ಸಿನಿರಸಿಕರು, ಬಾಲಯ್ಯ ನಟನೆಗೆ ಫಿದಾ ಆಗಿದ್ದಾರೆ. ಇದೊಂದು ಸಿನಿಮಾ ಮೂಲಕ ಟಾಲಿವುಡ್​ಗೆ ಹೊಸ ವರ್ಷದಲ್ಲಿ ಹೊಸ ಭರವಸೆ ಸಿಕ್ಕಂತಾಗಿದೆ. ಕಳೆದ ವರ್ಷ 'ಪುಷ್ಪ 2' ಗೆಲುವಿನ ಅಲೆಯಲ್ಲಿದ್ದ ಟಾಲಿವುಡ್​ಗೆ ಡಾಕು ಮಹಾರಾಜ್​ ಹೊಸದೊಂದು ಆಯಾಮವನ್ನೇ ಕೊಟ್ಟಿದೆ. ಬರೋಬ್ಬರಿ 8 ಸಿನಿಮಾಗಳನ್ನು ಫೆಬ್ರವರಿಯಲ್ಲಿ ತೆರೆಗೆ ತರಲು ನಿರ್ಧರಿಸಿರುವ ಟಾಲಿವುಡ್​, ತೆಲುಗು ಚಿತ್ರರಸಿಕರಿಗೆ ಮನರಂಜನೆಯ ಹಬ್ಬದೂಟ ಕೊಡಲು ಮುಂದಾಗಿದೆ.

ಫೆಬ್ರವರಿಯಲ್ಲಿ 8 ಚಿತ್ರಗಳು ರಿಲೀಸ್​

1. ಪಟ್ಟುದಲ: ಫೆಬ್ರವರಿ 06, 2025

2. ತಾಂಡೇಲ್: ಫೆಬ್ರವರಿ 07, 2025

3. ಲೈಲಾ: ಫೆಬ್ರವರಿ 14, 2025

4. ದಿಲ್ರುಬಾ: ಫೆಬ್ರವರಿ 14, 2025

5. ಬ್ರಹ್ಮ ಆನಂದಂ: ಫೆಬ್ರವರಿ 14, 2025

6. ಮಜಾಕಾ: ಫೆಬ್ರವರಿ 21, 2025

7. ಸಬ್ದಮ್: ಫೆಬ್ರವರಿ 28, 2025

8. ರಾಬಿನ್ಹುಡ್ : ಫೆಬ್ರವರಿ 28, 2025 ,(ಏಜೆನ್ಸೀಸ್).