Pahalgam Terrorists Attack: ಮಿನಿ ಸ್ವಿಜರ್ಲ್ಯಾಂಡ್ ಎಂದೇ ಕರೆಯುವ ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ಭೀಕರ ಗುಂಡಿನ ದಾಳಿ ನಡೆಸಿದ ಪಾಪಿಸ್ತಾನದ ಪಾಪಿ ಉಗ್ರರು, ಧರ್ಮ ಕೇಳಿ ಪ್ರವಾಸಿಗರ ಹಣೆಗೆ ಗುಂಡಿಟ್ಟು ಹತ್ಯೆಗೈದಿದ್ದಾರೆ. ಈ ದಾಳಿಯಿಂದಾಗಿ ಭಾರತ ತೀವ್ರ ದುಃಖಿತವಾಗಿದೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಹೋಗಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರ ದಾಳಿ ಇದೀಗ ಹಲವು ಕೆಲಸಗಳಿಗೆ ತಡೆ ನೀಡಿದೆ.
ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತದಿಂದ ಪಾಕ್ಗೆ ಒಂದೆರೆಡಲ್ಲ ಬಿಕ್ಕಟ್ಟು! ಜಿಡಿಪಿಗೆ ದೊಡ್ಡ ಹೊಡೆತ | Indus Waters Treaty
ಘಟನೆ ನಂತರ ಪಹಲ್ಗಾಮ್ಗೆ ಭೇಟಿ ನೀಡಲು ನಿರಾಕರಿಸಿರುವ ಪ್ರವಾಸಿಗರು, ತಮ್ಮ ಮುಂಗಡ ಬುಕ್ಕಿಂಗ್ಗಳನ್ನು ರದ್ದುಗೊಳಿಸುವ ಮೂಲಕ ಪ್ರಯಾಣದ ಆಸೆಗೆ ಎಳ್ಳು-ನೀರು ಬಿಟ್ಟಿದ್ದಾರೆ. ಈ ಸಮಸ್ಯೆ ಟಾಲಿವುಡ್ ಚಿತ್ರರಂಗಕ್ಕೂ ಎದುರಾಗಿದೆ. ಉಗ್ರರ ಅಟ್ಟಹಾಸ ನಡೆದ ಸ್ಥಳದಲ್ಲೇ ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣದ ದಿನಾಂಕಗಳನ್ನು ನಿಗದಿಪಡಿಸಿಕೊಂಡಿದ್ದ ಆಯಾ ನಿರ್ಮಾಪಕರು, ಇದೀಗ ಡೇಟ್ಸ್ಗಳನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ಘಟನೆ ಸಂಭವಿಸುವ ಮುನ್ನವೇ ಚಿತ್ರೀಕರಣದ ಪ್ಲ್ಯಾನ್ ಹಾಕಿಕೊಂಡಿದ್ದ ಚಿತ್ರತಂಡಗಳು, ಮುಂದಿನ ಎರಡು ತಿಂಗಳ ಕಾಲ ಕಾಶ್ಮೀರದಲ್ಲಿ ನಡೆಯಬೇಕಿದ್ದ ತಮ್ಮ ಸಿನಿಮಾದ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಿದೆ. ಕಡಿಮೆ ಮತ್ತು ಬಿಗ್ ಬಜೆಟ್‌ನ ಸಿನಿಮಾಗಳು ಪಹಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲು ಈ ಹಿಂದೆಯೇ ಯೋಜಿಸಲಾಗಿತ್ತು. ಆದರೆ, ಉಗ್ರರ ದಾಳಿಯಿಂದಾಗಿ ಇದೆಲ್ಲವೂ ಈಗ ಬದಲಾಗಿವೆ,(ಏಜೆನ್ಸೀಸ್).