ನ್ಯೂಸ್

ಇಂದಿನಿಂದ ಅಂತಾರಾಜ್ಯ ರೈಲು: ಮುಂಬೈ, ದೆಹಲಿ ಸೇರಿ ಇನ್ನಿತರ ನಗರಗಳಿಗೆ ಸೇವೆ

vinaymk1969

ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಿಂದಾಗಿ ದೆಹಲಿ, ಮುಂಬೈ, ಬಿಹಾರ ಮತ್ತು ಕೋಲ್ಕತ ಹಾಗೂ ಹೊರರಾಜ್ಯಗಳ 16 ಮಾರ್ಗಗಗಳಲ್ಲಿ ಸೋಮವಾರ(ಜೂ. 1) ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಿದೆ.

ಜೂ. 1ರಿಂದ ಕೆಎಸ್​ಆರ್ ಬೆಂಗಳೂರು- ಹುಬ್ಬಳ್ಳಿ, ಹುಬ್ಬಳ್ಳಿ- ಕೆಎಸ್​ಆರ್ ಬೆಂಗಳೂರು, ಯಶವಂತಪುರ- ಶಿವಮೊಗ್ಗ, ವಾಸ್ಕೋಡಾ ಗಾಮ/ಹುಬ್ಬಳ್ಳಿ- ಹಜರತ್ ನಿಜಾಮುದ್ದೀನ್, ಕೆಎಸ್​ಆರ್ ಬೆಂಗಳೂರು-ದಾನಪುರ, ಮುಂಬೈ ಕಂಟೋನ್ಮೆಂಟ್- ಕೆಎಸ್​ಆರ್ ಬೆಂಗಳೂರು, ಮುಂಬೈ ಕಂಟೋನ್ಮೆಂಟ್-ಗದಗ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ.

ಜೂ. 2ರಿಂದ ಶಿವಮೊಗ್ಗ- ಯಶವಂತಪುರ, ಯಶವಂತಪುರ- ನಿಜಾಮುದ್ದೀನ್ (ಮಂಗಳವಾರ ಮತ್ತು ಗುರುವಾರ), ಕೆಎಸ್​ಆರ್ ಬೆಂಗಳೂರು- ಮುಂಬೈ ಕಂಟೋನ್ಮೆಂಟ್, ಹೌರಾ-ಯಶವಂತಪುರ, ಗದಗ-ಮುಂಬೈ ಕಂಟೋನ್ಮೆಂಟ್ ನಡುವೆ ರೈಲುಗಳು ಪ್ರಯಾಣಿಸಲಿವೆ. ಜೂ. 3ರಿಂದ ಹಜರತ್ ನಿಜಾಮುದ್ದೀನ್- ವಾಸ್ಕೋಡಗಾಮ/ಹುಬ್ಬಳ್ಳಿ ಹಾಗೂ ದಾನಪುರ-ಕೆಎಸ್​ಆರ್ ಬೆಂಗಳೂರು, ಜೂ. 4ರಿಂದ ಯಶವಂತಪುರ-ಹೌರಾ ವಿಶೇಷ ರೈಲು (ವಾರದಲ್ಲಿ ಐದು ದಿನ), ಜೂ. 5ರಂದು ಹಜರತ್ ನಿಜಾಮುದ್ದೀನ್-ಯಶವಂತಪುರ ನಡುವೆ ವಿಶೇಷ ರೈಲು( ಬುಧವಾರ ಮತ್ತು ಶುಕ್ರವಾರ) ಸಂಚರಿಸಲಿವೆ.