Skin Protection: ಚಳಿಗಾಲ ಆರಂಭವಾಗಿದೆ ನಾವು ಉಸಿರಾಡುತ್ತಿರುವಂತಹ ಗಾಳಿಯೇ ಮಾಲಿನ್ಯದಿಂದ ತುಂಬಿಹೋಗಿದ್ದರಿಂದ ನಮ್ಮ ಚರ್ಮದಲ್ಲಿ ಅನೇಕ ತೊಂದರೆಗಳು ಪ್ರಾರಂಭವಾಗಿವೆ. ಇದರಿಂದ ಚರ್ಮದಲ್ಲಿ ಒತ್ತಡ, ಉರಿಯೂತ ಹಾಗೂ ಚರ್ಮದಲ್ಲಿ ನೈಸರ್ಗಿಕ ಅಡತಡೆಗಳನ್ನು ಅನುಭವಿಸುವಂತೆ ಮಾಡುತ್ತದೆ. ಇದರಿಂದ ಚರ್ಮದಲ್ಲಿ ಮಂದತೆ, ಮೊಡವೆಗಳನ್ನು ಉಂಟು ಮಾಡುತ್ತದೆ.
ಮಾಲಿನ್ಯವು ಹೆಚ್ಚುತ್ತಿರುವಂತಹ ಸಂದರ್ಭದಲ್ಲಿ ಚರ್ಮವನ್ನು ಪರಿಸರದ ಒತ್ತಡಗಳಿಂದ ರಕ್ಷಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಹಾಗಾಗಿ ಚರ್ಮರೋಗ ತಜ್ಞ ರಿಂಕಿ ಕಪೂರ್ ಅವರ ಈ ಟಿಪ್ಸ್ಗಳನ್ನು ಬಳಸಿ ಇವು ಚರ್ಮವನ್ನು ತ್ವಚ್ಛೆಯಿಂದ ಕೂಡಿರುವಂತೆ ಮಾಡುತ್ತದೆ.
ಇದನ್ನೂ ಓಧಿ: ಪಾಕಿಸ್ತಾನದ ಸುಪ್ರೀಂ ಕೋರ್ಟ್ನಲ್ಲಿ ಸಿಲಿಂಡರ್ ಸ್ಫೋಟ: 12 ಜನರಿಗೆ ಗಾಯ, ನಲುಗಿದ ಕಟ್ಟಡ | Cylinder Blast
ನಿಮ್ಮ ಚರ್ಮದಲ್ಲಿ ಅಡಗಿ ಕುಳಿತ ನೈಸರ್ಗಿಕ ಎಣ್ಣೆಗಳನ್ನು ತೆಗೆದುಹಾಕಲು ಉತ್ತಮವಾದ ಕ್ಲೆನ್ಸರ್ಗಳನ್ನು ಬಳಸುವುದು ಸೂಕ್ತವಾಗಿದೆ. ಇದನ್ನು ದಿನಕ್ಕೆ 2 ಬಾರಿ ಹಚ್ಚಿ ಚರ್ಮವನ್ನು ಸ್ವಚ್ಛಗೊಳಿಸುವುದರಿಂದ ನಿಮ್ಮ ಚರ್ಮದಲ್ಲಿರುವ ಕಲ್ಮಶಗಳು ಮತ್ತು ಮಾಲಿನ್ಯವನ್ನು ತೆಗೆದು ಹಾಕಲು ಸಹಾಯವಾಗುತ್ತದೆ.
ನಿಮ್ಮ ಚರ್ಮದಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ರಂಧ್ರಗಳನ್ನು ಮುಚ್ಚಲು ಸ್ಕ್ರಬ್ ಅಥವಾ ಬ್ರಷ್‌ನಂತಹ ಭೌತಿಕ ವಿಧಾನಗಳ ಮೂಲಕ AHA ಗಳು ಅಥವಾ BHA ಗಳನ್ನು ಹೊಂದಿರುವ ರಾಸಾಯನಿಕಗಳನ್ನು ಬಳಸಿ ಮಸಾಜ್ ಮಾಡುವುದರಿಂದ ಇದು ಮಾಲಿನ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓಧಿ: ಬಿಬಿಎಲ್ನಿಂದ ಹೊರಬಿದ್ದ ಆರ್. ಅಶ್ವಿನ್: ಚೊಚ್ಚಲ ಪ್ರವೇಶಕ್ಕೂ ಮುನ್ನವೇ ಸ್ಪಿನ್ ಮಾಂತ್ರಿಕನಿಗೆ ನಿರಾಸೆ! R Ashwin
ವಿಟಮಿನ್ ಇ, ನಿಯಾಸಿನಮೈಡ್ ಅಥವಾ ರೋಸ್ ವಾಟರ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಹೈಡ್ರೇಟಿಂಗ್ ಟೋನರ್ನ್ನು ನಿಮ್ಮ ಚರ್ಮಕ್ಕೆ ಸಿಂಪಡಿಸುವುದರಿಂದ ಇವು ನಿಮ್ಮ ಚರ್ಮದ ತಡೆಗೋಡೆಗಳನ್ನು ಬಲಪಡಿಸುತ್ತದೆ. ಇದು ದಿನವಿಡೀ ಜಲಸಂಚಯವನ್ನು ಉಳಿಸಿಕೊಳ್ಳುತ್ತದೆ.
ವಿಟಮಿನ್ ಸಿ ಅಥವಾ ಗ್ರೀನ್ ಟೀ ಸಾರ ಹೊಂದಿದಂತಹ ನಿರೋಧಕಗಳನ್ನು ಹೊಂದಿರುವ ಫೇಸ್ ಸಿರಮ್ಗಳನ್ನು ಬಳಸುವುದರಿಂದ ಇದು ಮಾಲಿನ್ಯದ ಪರಿಣಾಮ ವಿರುದ್ಧ ಹೋರಾಡುವುದಲ್ಲದೇ, ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಿ ನಿಮ್ಮ ಮೈ ಬಣ್ಣವನ್ನು ಹೊಳೆಯುವಂತೆ ಮಾಡುತ್ತದೆ.
ನಿಮ್ಮ ದೇಹಕ್ಕೆ ಸೂಕ್ತವಾದಂತಹ ಹೈಡ್ರೇಟಿಂಗ್ ಮಾಯಿಶ್ಚರೈಸರ್ ಬಳಸುವುದರಿಂದ ಇದು ಧೂಳಿನಿಂದ ಕೂಡಿದ ಚರ್ಮ ಹಾಗೂ ಸಿಪ್ಪೆ ಸುಲಿಯುವಿಕೆಯನ್ನು ನಿಲ್ಲಿಸುತ್ತದೆ. ಹಾಗೆಯೇ ಇದು ಎಣ್ಣೆಯುಕ್ತ ಚರ್ಮಕ್ಕೆ ಜೆಲ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳು ಮತ್ತು ಮಾಲಿನ್ಯದಿಂದ ರಕ್ಷಿಸಲು, ನಿಮ್ಮ ಚರ್ಮಕ್ಕೆ ಸೂಕ್ತವಾದಂತಹ ಸನ್ಸ್ಕ್ರೀಮ್ಗಳನ್ನು ಬಳಸಿರಿ. ಇದು ಚರ್ಮವನ್ನು ರಕ್ಷಣೆ ಮಾಡಿ, ಯಾವುದೇ ತೊಂದರೆ ಆಗದಂತೆ ಕಾಪಾಡುತ್ತದೆ.
ರಾತ್ರಿ ವೇಳೆಯಲ್ಲಿ ಚರ್ಮವು ತಾನೇ ಸರಿಪಡಿಸಿಕೊಳ್ಳುವುದರಿಂದ ಚರ್ಮದ ಆರೈಕೆ ಅಗತ್ಯವಾಗಿದೆ. ಟೋನಿಂಗ್ ಮಾಡಿದ ನಂತರ, ವಿಟಮಿನ್ ಇ, ರೆಟಿನಾಲ್ ಹೊಂದಿರುವಂತಹ ಕ್ರೀಮ್ಗಳನ್ನು ಬಳಸುವುದರಿಂದ ಇದು ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ವಾರಕ್ಕೆ 1-2 ಬಾರಿ ಹಚ್ಚುವುದರಿಂದ ನಿಮ್ಮ ಚರ್ಮದ ಪೋಷಣೆಯನ್ನು ಮಾಡಲು ಸಾಧ್ಯವಾಗುತ್ತದೆ.
ಚರ್ಮದ ಆಂತರಿಕ ಸ್ಥಿತಿಸ್ಥಾಪಕತ್ವ ಮತ್ತು ಕಾಂತಿಯನ್ನು ಬೆಂಬಲಿಸಲು ವಿಟಮಿನ್ ಸಿ ಹಣ್ಣುಗಳು, ಪಾಲಕ್ ಮತ್ತು ಉತ್ಕರ್ಷಣ ನಿರೋಧಕ-ಭರಿತ ಆಹಾರಗಳನ್ನು ಸೇವನೆ ಹಾಗೂ ಕನಿಷ್ಟ 8-10 ಗ್ಲಾಸ್ ನೀರು ಕುಡಿಯುವುದರಿಂದ ಚರ್ಮವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.