ನ್ಯೂಸ್

ಬಂಗಾಳ ಮಹಿಳೆಯರು ತಮ್ಮಿಷ್ಟದಂತೆ ಬದುಕುತ್ತಾರೆ: ಟಿಎಂಸಿ ಸಂಸದೆ ಮಹುವಾ ಮೋಹಿತ್ರಾ

ಕೋಲ್ಕತ್ತಾ: "ನಾನು ಬಂಗಾಳಿ ಮಹಿಳೆ, ನನ್ನ ಜೀವನವನ್ನು ನಾನು ಇಷ್ಟಬಂದಂತೆ ಜೀವಿಸುತ್ತೇನೆ, ಸುಳ್ಳುಗಳನ್ನು ಹೇಳಿಕೊಂಡು ಅಲ್ಲ" ಟಿಎಂಸಿ ಸಂಸದೆ ಮಹುವಾ ಮೋಹಿತ್ರಾ ನೆಟ್ಟಿಗರ ಟೀಕೆಗಳಿಗೆ ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಜೊತೆ ಖಾಸಗಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಫೋಟೋಗಳು ಬಯಲಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಇದರಲ್ಲಿ ಕೆಲವರು ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್‌ ಮಾಡಿದ್ದರು. ಕೈನಲ್ಲಿ ವೈನ್ ಗ್ಲಾಸ್, ಸಿಗಾರ್ ಹಿಡಿದು ನಿಂತಿದ್ದ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಫೋಟೋಗಳನ್ನು ನೆಟ್ಟಿಗರು ವೈರಲ್ ಮಾಡಿದ್ದರು. ನೆಟ್ಟಿಗರ ಈ ವರ್ತನೆಗೆ ಮೋಹಿತ್ರಾ ತಿರುಗೇಟು ನೀಡಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕೃಷ್ಣಾ ನಗರದ ಸಂಸದೆಯಾಗಿರುವ ಮೋಹಿತ್ರಾ, ನನ್ನ ಕೆಲವು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾದೆ. ಇವು ನೋಡಲು ರಂಜನೀಯವಾಗಿವೆ. ಬಿಜೆಪಿ ಟ್ರೋಲ್ ಸೇನೆಯು ಈ ಕೃತ್ಯ ಎಸಗಿದೆ. ನನಗೆ ಬಿಳಿ ಕುಪ್ಪಸಕ್ಕಿಂತಲೂ ಹಸಿರು ಬಣ್ಣ ತುಂಬಾ ಇಷ್ಟ ಆಗುತ್ತೆ. ನನ್ನ ಜೊತೆ ಫೋಟೋದಲ್ಲಿ ಇದ್ದ ಹಲವರನ್ನು ಎಡಿಟ್​ ಮಾಡಿ ತೆಗೆಯಲಾಗಿದೆ. ಬಂಗಾಳದ ಮಹಿಳೆಯರು ಸ್ವಚ್ಚಂದ ಬದುಕು ಇಷ್ಟಪಡುತ್ತಾರೆ. ಸುಳ್ಳುಗಳ ಜೊತೆ ಬದುಕೋದಿಲ್ಲ ಎಂದು ಮಹುವಾ ಮೋಹಿತ್ರಾ ತಿರುಗೇಟು ನೀಡಿದ್ದಾರೆ.