ತಿರುಪತಿ: ಕಲಿಯುಗದ ವೈಕುಂಠ ತಿರುಪತಿ(Tirupati)ಗೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇನ್ನು ಹಬ್ಬ ಹರಿದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚ್ಆಗಿರುತ್ತದೆ. ಅದೇ ರೀತಿ ದಸರಾ ಸಂದರ್ಭದಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಭಕ್ತರು ಬರುತ್ತಾರೆ. ಆಗ ದೇವರ ದರ್ಶನ ಎರಡು ಮೂರು ದಿನಗಳ ನಂತರ ಸಿಗುವುದೂ ಉಂಟು. ಹೀಗಾಗಿ ಹಲವರು ಎರಡು ಮೂರು ತಿಂಗಳ ಮೊದಲೇ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಆದರೆ ಈ ರೀತಿ ಅಡ್ವಾನ್ಸ್ ಟಿಕೆಟ್ ಬುಕ್ ಮಾಡದವರ ಕಥೆ ಏನು ಎಂದು ಯೋಚಿಸುವುದುಂಟು? ಆದರೆ ಇಂತಹವರನ್ನು ಗಮನದಲ್ಲಿಟ್ಟುಕೊಂಡು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕ್ರಮ ಕೈಗೊಂಡಿದೆ.
ದಸರಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಮಕ್ಕಳ ಜೊತೆ ತಿರುಪತಿ(Tirupati)ಗೆ ತೆರಳುವ ಭಕ್ತರಿಗೇನೂ ಕಡಿಮೆಯಿಲ್ಲ. ಇಂತಹವರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡದಿದ್ದರೂ ಟಿಟಿಡಿ, ಎಸ್‌ಎಸ್‌ಡಿ (ಸ್ಲಾಟೆಡ್ ಸರ್ವ ದರ್ಶನ), ದಿವ್ಯ ದರ್ಶನ, ಉಚಿತ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಈ ಎಸ್‌ಎಸ್‌ಡಿ ಟಿಕೆಟ್‌ಗಳನ್ನು ತಿರುಪತಿಯ ವಿಷ್ಣು ನಿವಾಸ, ಶ್ರೀನಿವಾಸಂ ಕಾಂಪ್ಲೆಕ್ಸ್, ಭೂದೇವಿ ಕಾಂಪ್ಲೆಕ್ಸ್‌ನಲ್ಲಿ (ತಿರುಮಲದಲ್ಲಿ ಅಲ್ಲ) ಪ್ರತಿದಿನ 3 ಗಂಟೆಗೆ ನೀಡಲಾಗುತ್ತದೆ. ಈ ಟಿಕೆಟ್‌ಗಳನ್ನು ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಟಿಕೆಟ್‌ಗಳನ್ನು ನೀಡುವಾಗ ದೇವರ ದರ್ಶನದ ಸಮಯ ಮತ್ತು ಪ್ರವೇಶದ ವಿವರಗಳನ್ನು ಸಹ ನೀಡಲಾಗುತ್ತದೆ. ಹೀಗಾಗಿ ಭಕ್ತರು ಇಂತಹ ಟಿಕೆಟ್ ಪಟಡೆದು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಉಚಿತವಾಗಿ ದರ್ಶನ ಮಾಡಬಹುದು.
ಇನ್ನು ಕೆಲವರು ಕಾಲ್ನಡಿಗೆಯಲ್ಲಿ ತಿರುಪತಿಯ ಅಲಿಪಿರಿಯಿಂದ ತಿರುಮಲಕ್ಕೆ ಬೆಟ್ಟ ಹತ್ತಿ ಹೋಗುತ್ತಾರೆ. ಅವರಿಗೆ ಭೂದೇವಿ ಕಾಂಪ್ಲೆಕ್ಸ್ ಮತ್ತು ಶ್ರೀವಾರಿ ಮೆಟ್ಟುಗಳಲ್ಲಿ ದಿವ್ಯ ದರ್ಶನಂ ಟಿಕೆಟ್ ಕೂಡ ನೀಡಲಾಗುತ್ತದೆ. ಈ ಟಿಕೆಟ್‌ಗಳ ಮೂಲಕ ದೇವರ ದರ್ಶನ ಉಚಿತವಾಗಿ ಮಾಡಬಹುದು. ಆದರೆ ಎಸ್‌ಎಸ್‌ಡಿ ಮತ್ತು ದಿವ್ಯದರ್ಶನ್ ಈ ಎರಡು ಟಿಕೆಟ್‌ಗಳು ಬಹುತೇಕ ಒಂದೇ ಆಗಿವೆ. ಹೀಗಾಗಿ ಭಕ್ತರು ಬೆಳಗ್ಗೆ ಆಗಮಿಸಿ ಎಸ್‌ಎಸ್‌ಡಿ ಟಿಕೆಟ್ ಪಡೆದರೆ ಸುಲಭವಾಗಿ ತಿಮ್ಮಪ್ಪ ದೇವರ ದರ್ಶನ ಪಡೆಯಬಹುದಾಗಿದೆ.