ತಿರುಪತಿ ಲಡ್ಡು 
ನ್ಯೂಸ್

ತಿಮ್ಮಪ್ಪ ಭಕ್ತರಿಗೆ ಬಿಗ್ ಶಾಕ್..ಆಧಾರ್ ತೋರಿಸಿದ್ರೇನೆ ಹೆಚ್ಚುವರಿ ಲಡ್ಡು!

ತಿರುಪತಿ: ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ಭಕ್ತರು ಇನ್ನು ಮುಂದೆ ಹೆಚ್ಚುವರಿಯಾಗಿ ಲಡ್ಡು ಬೇಕಾದರೆ ಆಧಾರ್​ ತೋರಿಸಬೇಕಾಗುತ್ತದೆ. ಇಲ್ಲಿ ತನಕ ಇದ್ದ ನಿಯಮ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಇನ್ನು ಮುಂದೆ ಒಬ್ಬರಿಗೆ ಒಂದು ಲಡ್ಡು ಮಾತ್ರ ನೀಡಲು ನಿಯಮಗಳನ್ನು ಬದಲಿಸಿ ನಿರ್ಧಾರ ಕೈಗೊಳ್ಳಲಾಗಿದೆ. ದೇವರ ದರ್ಶನ ಪಡೆದ ಭಕ್ತರು ದರ್ಶನ ಚೀಟಿ ತೋರಿಸಿದರೆ ಲಡ್ಡು ನೀಡಲಾಗುವುದು. ಹೆಚ್ಚುವರಿಯಾಗಿ ಲಡ್ಡು ಬೇಕೆಂದರೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ನೀಡಲಾಗುವುದು. ಟಿಟಿಡಿಯ ಈ ಹೊಸ ನಿಯಮಗಳ ಬಗ್ಗೆ ಭಕ್ತರಿಂದ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.

ಒಬ್ಬ ಭಕ್ತಗೆ ಒಂದು ಲಡ್ಡು ಮಾತ್ರ ನೀಡುವಂತೆ ನಿಯಮದಲ್ಲಿ ಬದಲಾವಣೆ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದರ್ಶನ್ ಟೋಕನ್ ಗೆ ಒಂದು ಲಡ್ಡು, ಆಧಾರ್ ಕಾರ್ಡ್ ತೋರಿಸಲು ಇನ್ನೊಂದು ಲಡ್ಡೂ ನೀಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.

ಆ.29ರ(ಗುರುವಾರ)ದಿಂದಲೇ ಹೊಸ ನಿಯಮಾವಳಿ ಜಾರಿಗೆ ಬರಲಿದೆ ಎಂದು ಟಿಟಿಡಿ ಹೇಳಿದ್ದು, ಸ್ವಾಮಿಯ ಪ್ರಸಾದ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಆದರೆ ಈ ರೀತಿ ನಿರ್ಬಂಧ ಹೇರುವುದು ಸರಿಯಲ್ಲ. ಕೂಡಲೇ ಟಿಟಿಡಿ ನಿಯಮಗಳನ್ನು ಬದಲಾಯಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಇನ್ನು ಲಡ್ಡು ಗುಣಮಟ್ಟ ಹೆಚ್ಚಿಸಲು ಟಿಟಿಡಿ ತುಪ್ಪದ ಟೆಂಡರ್ ಅನ್ನು ಬದಲಾಯಿಸಿದೆ. ಆಂಧ್ರದ ಖಾಸಗಿ ಡೇರಿಗಳಿಗೆ ಬದಲಾಗಿ ನೂತನ ಸರ್ಕಾರ ಕರ್ನಾಟಕದ ಕೆಎಂಎಫ್​ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದೆ.