Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಬಾವ ರಾರ್ಬಟ್ ವಾದ್ರಾ (Robert Vadra) ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಜಾರಿ ನಿರ್ದೇಶನಾಲಯ(Enforcement Directorate) ವು ವಾದ್ರಾಗೆ ಸೇರಿದ 37. 64 ಕೋಟಿ ಮೌಲ್ಯದ 43 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ವಾದ್ರಾರನ್ನು ಬೇಟೆಯಾಡುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.
ಇಡಿ ದಾಳಿ ಬಗ್ಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ. ನನ್ನ ಬಾವನನ್ನು ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಬೇಟೆಯಾಡುತ್ತಿದೆ. ಅಲ್ಲದೇ, ರಾರ್ಬಟ್, ಪ್ರಿಯಾಂಕಾ ವಾದ್ರಾ (Priyanka Vadra) ಮತ್ತು ಅವರ ಮಕ್ಕಳು ಮತ್ತೊಂದು ದುರುದ್ದೇಶಪೂರಿತ ಹಾಗೂ ರಾಜಕೀಯ ಪ್ರೇರಿತ ನಿಂದನೆ ಹಾಗೂ ಕಿರುಕುಳವನ್ನು ಎದುರಿಸುತ್ತಿರುವಾಗ ನಾನು ಅವರೊಂದಿಗೆ ನೀಲ್ಲುತ್ತೇನೆ. ಅವರೆಲ್ಲರೂ ಯಾವುದೇ ರೀತಿಯ ಕಿರಿಕುಳವನ್ನು ತಡೆದುಕೊಳ್ಳುವಷ್ಟು ಧೈರ್ಯಶಾಲಿಗಳು ಮತ್ತು ಅವರ ಅದನ್ನು ಘನತೆಯಿಂದ ಮುಂದುವರೆಸುತ್ತಾರೆ ಎಂದು ನನಗೆ ತಿಳಿದಿದೆ. ಸತ್ಯವು ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುಂಚೆ ಇಡಿಯೂ ರಾರ್ಬಟ್ ವಾದ್ರಾಗೆ ಸಂಬಂಧಿಸಿದ ಸಂಸ್ಥೆಗಳಿಂದ 37.64 ಕೋಟಿ ಮೌಲ್ಯದ 43 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಇಡಿಯೂ 10 ಜನರ ವಿರುದ್ಧ ಪ್ರಾಸಿಕ್ಯೂಷನ್ನಲ್ಲಿ ದೂರು ಸಲ್ಲಿಸಿದೆ. (ಏಜೆನ್ಸೀಸ್)