ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣ 
ನ್ಯೂಸ್

ಟೈಗರ್ ಶ್ರಾಫ್ ಫೈರಿಂಗ್ ಕೇಸ್: ಪತ್ರಕರ್ತರ ಪ್ರಶ್ನೆಗೆ ಜಾಕಿ ಶ್ರಾಫ್ ರಿಯಾಕ್ಷನ್ ಹೇಗಿತ್ತು ಗೊತ್ತಾ? | Jackie Shroff

  • 'ಕಾಳಿ ಖೇತಿ' ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಜಾಕಿ ಶ್ರಾಫ್ ಭಾಗಿ

  • ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ಕುರಿತು ಪತ್ರಕರ್ತರಿಂದ ಪ್ರಶ್ನೆ

  • ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ನಟ ಜಾಕಿ ಶ್ರಾಫ್

Tiger Shroff firing incident: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಕಳೆದ ತಿಂಗಳು ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹಿರಿಯ ನಟ ಜಾಕಿ ಶ್ರಾಫ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿದ್ದಾರೆ.

ಮುಂಬೈನಲ್ಲಿ ನಡೆದ ತಮ್ಮ ಮುಂದಿನ 'ಕಾಳಿ ಖೇತಿ' (Kaali Kheti) ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜಾಕಿ ಶ್ರಾಫ್ ಭಾಗವಹಿಸಿದ್ದರು. ಮಗನ ಮೇಲಿನ ದಾಳಿಯ ನಂತರ ಜಾಕಿ ಶ್ರಾಫ್ ಕೆಲವು ರೆಡ್ ಕಾರ್ಪೆಟ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರೂ, ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮುಖಾಮುಖಿಯಾಗಿದ್ದು ಇದೇ ಮೊದಲ ಬಾರಿ.

ಕಾರ್ಯಕ್ರಮದ ವೇಳೆ ಪತ್ರಕರ್ತರೊಬ್ಬರು ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ಬಗ್ಗೆ ಜಾಕಿ ಶ್ರಾಫ್ ಅವರನ್ನು ಪ್ರಶ್ನಿಸಲು ಮುಂದಾದರು.

ಆದರೆ, ಪತ್ರಕರ್ತರು ತಮ್ಮ ಪ್ರಶ್ನೆಯನ್ನು ಪೂರ್ಣಗೊಳಿಸುವ ಮೊದಲೇ ಕಾರ್ಯಕ್ರಮದ ನಿರೂಪಕರು ಮಧ್ಯಪ್ರವೇಶಿಸಿ, ಆ ಪ್ರಶ್ನೆಯನ್ನು ಕೇಳದಂತೆ ತಡೆದರು. ಈ ವೇಳೆ ಜಾಕಿ ಶ್ರಾಫ್ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ: 7 ಕೋಟಿ ರೂ. ಹಣಕ್ಕೆ ಡಿಮ್ಯಾಂಡ್! Arvind Kejriwal

ಕಳೆದ ತಿಂಗಳು ಮುಂಬೈನ ಜುಹು ಪ್ರದೇಶದ ಮೈದಾನವೊಂದರ ಹೊರಗೆ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಟೈಗರ್ ಶ್ರಾಫ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅವರ ಕಾರು ಚಾಲಕನಿಗೆ ಗುಂಡು ತಗುಲಿತ್ತು. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ.