ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಕುರಿತು ನಟಿ ಅನನ್ಯಾ ಪಾಂಡೆ ಪ್ರತಿಕ್ರಿಯೆ 
ನ್ಯೂಸ್

Tiger Shroff Firing: ‘ತುಂಬಾ ಭಯಾನಕ ಘಟನೆ’! ಟೈಗರ್ ಶ್ರಾಫ್ ಮೇಲಿನ ಫೈರಿಂಗ್​ ಬಗ್ಗೆ ಅನನ್ಯಾ ಪಾಂಡೆ ಹೇಳಿದ್ದೇನು?

Tiger Shroff Firing: ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಕುರಿತು ಮಾತನಾಡಿರುವ ನಟಿ ಅನನ್ಯಾ ಪಾಂಡೆ, ಇದೊಂದು ಭಯಾನಕ ಮತ್ತು ದುರದೃಷ್ಟಕರ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಎಲ್ಲರಿಗೂ ಸುರಕ್ಷತೆ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ, ಕೇವಲ ಸೆಲೆಬ್ರಿಟಿಗಳ ಸುರಕ್ಷತೆ ಮಾತ್ರ ಮುಖ್ಯವಲ್ಲ. ನೆಚ್ಚಿನ ತಾರೆಯರನ್ನು ಕಣ್ತುಂಬಿಕೊಳ್ಳಲು ಬರುವ ಅಭಿಮಾನಿಗಳು ಮತ್ತು ಸುತ್ತಮುತ್ತಲಿರುವ ಜನಸಾಮಾನ್ಯರ ಜೀವದ ಭದ್ರತೆಯೂ ಅಷ್ಟೇ ಮುಖ್ಯ’ ಎಂದು ಅನನ್ಯಾ ಪಾಂಡೆ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಿನ್ನೆ ನಡೆದ 2026ರ ಎಚ್‌ಟಿ ಲೀಡರ್‌ಶಿಪ್ ಶೃಂಗಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನನ್ಯಾ ಪಾಂಡೆ ಅವರಿಗೆ ಟೈಗರ್ ಶ್ರಾಫ್ ಮೇಲಿನ ದಾಳಿಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಂದರ್ಭಗಳಲ್ಲಿ ನಟರ ಜತೆಗೆ ಅಲ್ಲಿರುವ ಸಾಮಾನ್ಯ ಜನರ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೆ, ಅಭಿಮಾನಿಗಳ ಜತೆ ಮಾತನಾಡುವುದು ಮತ್ತು ಅವರ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳುವುದು ನಟರ ವೃತ್ತಿಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದು. ಸಿನಿಮಾ ನೋಡಿ ತಮ್ಮ ಪಾತ್ರದಿಂದ ಪ್ರೇರಣೆ ಪಡೆದಿದ್ದೇವೆ ಎಂದು ಅಭಿಮಾನಿಗಳು ಹೇಳಿದಾಗ ಖುಷಿಯಾಗುತ್ತದೆ.

ಭದ್ರತೆಯ ಕಾರಣಕ್ಕಾಗಿ ಅಭಿಮಾನಿಗಳಿಂದ ಅಂತರ ಕಾಯ್ದುಕೊಳ್ಳುವ ಅಥವಾ ದೂರ ಉಳಿಯುವ ಪರಿಸ್ಥಿತಿ ಎದುರಾದರೆ ಅದು ನಿಜಕ್ಕೂ ಬೇಸರದ ಸಂಗತಿ ಎಂದು ನಟಿ ಅನನ್ಯಾ ಪಾಂಡೆ ಭಾವುಕರಾಗಿದ್ದಾರೆ.

ಇದನ್ನೂ ಓದಿ: ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಅನ್ನೋ ಅಜ್ಜ-ಅಜ್ಜಿ! ಹಿರಿಯರು ಹಳೆ ಕಾಲವನ್ನೇ ನೆನೆಯುವುದೇಕೆ? | Grandparents Memories

ಅಂದಹಾಗೆ, ಅನನ್ಯಾ ಪಾಂಡೆ ಮತ್ತು ಟೈಗರ್ ಶ್ರಾಫ್ 2019ರಲ್ಲಿ ತೆರೆಕಂಡ ಬಾಲಿವುಡ್‌ನ 'ಸ್ಟೂಡೆಂಟ್ ಆಫ್ ದಿ ಇಯರ್ 2' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು.