ನ್ಯೂಸ್

ಭಾರತೀಯ ಸೇನೆಯ ಕಾಕೋಪಥರ್ ಶಿಬಿರದ ಮೇಲೆ ಗ್ರೆನೇಡ್ ದಾಳಿ! ಮೂವರು ಸೈನಿಕರಿಗೆ ಗಂಭೀರ ಗಾಯ..Army

ಅಸ್ಸಾಂ: ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಕಾಕೋಪಥರ್​​ನಲ್ಲಿರುವ ಸೇನಾ ( Army)  ಶಿಬಿರದಲ್ಲಿ ಗ್ರೆನೇಡ್ ದಾಳಿ ನಡೆದಿದೆ. ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರುವಾರ ತಡರಾತ್ರಿ ಸೇನಾ ಶಿಬಿರದಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ.

ಹಲವಾರು ಗ್ರೆನೇಡ್ ಸ್ಫೋಟಗಳ ಶಬ್ದಗಳು ಕೇಳಿಬಂದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ನಿನ್ನೆ ತಡರಾತ್ರಿ ಕಾಕೋಪಥರ್ ಸೇನಾ ಶಿಬಿರದ ಬಳಿ ಸುಮಾರು ಒಂದು ಗಂಟೆ ಕಾಲ ಗುಂಡಿನ ದಾಳಿ ಮುಂದುವರೆದಿದೆ ಎಂದು ವರದಿಯಾಗಿದೆ.

ಕಾಕೋಪಥರ್ ನಲ್ಲಿರುವ ಭಾರತೀಯ ಸೇನೆಯ 19 ಗ್ರೆನೇಡಿಯರ್ಸ್ ಘಟಕದ ಶಿಬಿರವನ್ನು ಗುರಿಯಾಗಿಸಿಕೊಂಡು ಮಧ್ಯರಾತ್ರಿಯ ಸುಮಾರಿಗೆ ಗ್ರೆನೇಡ್‌ಗಳನ್ನು ಎಸೆಯಲಾಯಿತು. ಸ್ಫೋಟದಲ್ಲಿ ಮೂವರು ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಸೇನಾ ಶಿಬಿರದ ಮೇಲಿನ ದಾಳಿಯ ನಂತರ, ಸೇನೆ ಮತ್ತು ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದು, ಸ್ಥಳದ ಬಳಿ ನಾಗರಿಕರ ಸಂಚಾರವನ್ನು ನಿರ್ಬಂಧಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪ್ರಸ್ತುತ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ದಾಳಿಯ ಹೊಣೆಯನ್ನು ಯಾವುದೇ ಗುಂಪು ಇನ್ನೂ ಹೊತ್ತುಕೊಂಡಿಲ್ಲ. ಆದಾಗ್ಯೂ, ಗ್ರೆನೇಡ್ ದಾಳಿಯ ಹಿಂದೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ULFA)-(ಸ್ವತಂತ್ರ) ಬಣದ ಕೈವಾಡವಿದೆ ಎಂದು ಶಂಕಿಸಲಾಗಿದೆ.