ಆಂಧ್ರ ಪ್ರದೇಶ: ಟಿಡಿಪಿ(ತೆಲುಗು ದೇಶಂ ಪಕ್ಷ) ನಾಯಕ ಎನ್.ಚಂದ್ರಬಾಬು ನಾಯ್ಡು ನಡೆದ ಸಾರ್ವಜನಿಕ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ 8 ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ನಿನ್ನೆ(ಭಾನುವಾರ) ಸಂಭವಿಸಿದೆ.
ನೆಲ್ಲೂರಿನಲ್ಲಿ ಡಿ.28ರಂದು ನಡೆದ ಚಂದ್ರಬಾಬುನಾಯ್ಡು ಅವರ ರೋಡ್ ಶೋ ಕಾರ್ಯಕ್ರಮದಲ್ಲಿ ಸಭೆಗೆ ಭಾರೀ ಜನಸ್ತೋಮ ಸೇರಿತ್ತು. ಈ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ 8 ಮಂದಿ ಸಾವನ್ನಪ್ಪಿದ್ದರು. ನಿನ್ನೆ ಕೂಡ ಇಂತಹದ್ದೇ ದುರ್ಘಟನೆ ಸಂಭವಿಸಿದೆ. ಗುಂಟೂರು ಜಿಲ್ಲೆಯಲ್ಲಿ ತೆಲುಗು ದೇಶಂ ಪಕ್ಷದ ವತಯಿಂದ ಸಂಕ್ರಾತಿ ಹಬ್ಬದ ಹಿನ್ನೆಲೆ ಚಂದ್ರಣ್ಣ ಉಡುಗೊರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಡುಗೊರೆ ವಿತರಣೆಗಾಗಿ 24 ಕೌಂಟರ್ಗಳನ್ನು ತೆರೆಯಲಾಗಿತ್ತು. ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಮೊದಲ ನಾಲ್ಕು ಕೌಂಟರ್ಗಳಲ್ಲಿ ಕೆಲವರು ಸರದಿ ಸಾಲು ಬಿಟ್ಟು ಏಕಾಏಕಿ ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಹಲವು ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.(ಏಜೆನ್ಸೀಸ್)