ನ್ಯೂಸ್

ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೂವರು ಖಾನ್​ಗಳು! ಬಾಲಿವುಡ್​ ಬಾದ್​​ಷಾಗಳ ಬಗ್ಗೆ ಬಿಗ್​ ಅಪ್ಡೇಟ್​​ ಕೊಟ್ಟ ಅಮೀರ್​ ಖಾನ್​

ಮುಂಬೈ: ಬಾಲಿವುಡ್​ನ ಪ್ರಮುಖ ನಟರಾದ ಶಾರುಖ್​​ ಖಾನ್ ಮತ್ತು ಸಲ್ಮಾನ್​ ಖಾನ್​​ ಜತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದು ನಟ ಅಮೀರ್​ ಖಾನ್(Amir Khan) ಬಹಿರಂಗಪಡಿಸಿದ್ದಾರೆ.

ಈ ಕುರಿತು ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ನಡೆದ ರೆಡ್ ಸಿ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಾವು ಮೂವರು ಈಗಾಗಲೇ ಈ ಕುರಿತು ಚರ್ಚೆ ಮಾಡಿದ್ದೇವೆ ಎಂದು ಅಮೀರ್ ಖಚಿತ ಪಡಿಸಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಶಾರುಖ್​ ಮತ್ತು ಸಲ್ಮಾನ್​ ಜತೆಗಿನ ಪ್ರಾಜೆಕ್ಟ್​ನ ​ ಬಗ್ಗೆ ನಿರೂಪಕರೊಬ್ಬರು ಕೇಳಿದಾಗ, ''ನಾನು, ಸಲ್ಮಾನ್​ ಮತ್ತು ಶಾರುಖ್​ ಮೂವರು ಸಿನಿಮಾ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ. ಅದ್ಭುತವಾಗಿರುತ್ತದೆ ಎಂದು ಮಾತನಾಡಿಕೊಂಡಿದ್ದೇವೆ. ಅಲ್ಲದೇ, ಇದರ ಬಗ್ಗೆ ಇತ್ತೀಚಿಗೆ ಕೂಡ ಮತ್ತೆ ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರಿಯಾದ ಕಥೆ ಸಿಕ್ಕರೆ ಚಿತ್ರ ಮಾಡುವುದಾಗಿ ಮಾತನಾಡಿಕೊಂಡಿದ್ದೇವೆ'' ಎಂದು ಹೇಳಿದ್ದಾರೆ.

ಮುಂದುವರೆಸಿ ಮಾತನಾಡಿದ ಅಮೀರ್​, '' ನಾವು ಮೂವರು ಒಂದೇ ಚಿತ್ರರಂಗದಲ್ಲಿ ಬೆಳೆದವರು. ಒಟ್ಟಿಗೆ ಸೇರಿ ಸಿನಿಮಾ ಮಾಡದಿದ್ದರೆ ಹೇಗೆ ಎಂದು ಕೇಳಿಕೊಂಡಿದ್ದೇವೆ. ಮೂವರು ಇದೇ ಕ್ಷಣಕ್ಕೆ ಎದುರು ನೋಡುತ್ತಿದ್ದೇವೆ'' ಎಂದಿದ್ದಾರೆ.

ಇನ್ನು ಅಮೀರ್​ ಖಾನ್​ ಸಿನಿಮಾಗಳ ವಿಚಾರಕ್ಕೆ ಬರುವುದದಾರೆ, ಅಮೀರ್​ ಲಾಸ್ಟ್​ ಕಾಣಿಸಿಕೊಂಡ ಚಿತ್ರ ಲಾಲ್​ ಸಿಂಗ್​ ಚಡ್ಡಾ. ಈ ಚಿತ್ರ ಪ್ರೇಕ್ಷರರ ಮನಗೆಲ್ಲುವಲ್ಲಿ ವಿಫಲವಾಯಿತು. 2023ರ ಅಕ್ಟೋಬರ್​ರಲ್ಲಿ ಹೊಸ ಸಿನಿಮಾ ಸೆಟ್ಟಿರಿದೆ. ಇತ್ತ ಸಲ್ಮಾನ್​ ಸಿಕಿಂದರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಮುಂದಿನ 2025ರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈಗ ಸದ್ಯಕ್ಕೆ ಬಿಗ್​ಬಾಸ್​ ಸೀಸನ್​ 18 ಕಾರ್ಯಕ್ರಮವನ್ನು ಹೊಸ್ಟ್​ ಮಾಡುತ್ತಿದ್ದಾರೆ. ಅದರಂತೆ ಶಾರುಖ್​ ವಿಚಾರಕ್ಕೆ ಬರುವುದಾದರೆ ಸುಜೋಯ್​ ಘೋಷ್​ ನಿರ್ದೇಶನದ ಕಿಂಗ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರ ಮಗಳು ಸುಹಾನ ಖಾನ್​ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಇದೇ ಡಿ.20ರಂದು ಬಿಡುಗಡೆಯಾಗುವ ನೀರಿಕ್ಷೆ ಇದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​).