ನ್ಯೂಸ್

ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರ ಸಾವು

ಪ್ರತಾಪಗಢ: ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಪ್ರತಾಪಗಢದ ಸರಾಯ್ ಬಹೇಲಿಯಾ ಗ್ರಾಮದದಲ್ಲಿ ನಡೆದಿದೆ.

ಇದನ್ನೂ ಓದಿ: ಶಿಕ್ಷಕನೊಂದಿಗೆ ಸಿಕ್ಕಿ ಬಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ: ವಿವಸ್ತ್ರಗೊಳಿಸಿ ಹಲ್ಲೆ

ಮನೆ ಮಾಲೀಕ ಅಬ್ದುಲ್ ಜಬ್ಬಾರ್(60), ಮಗಳು ಶಾಹೀನ್ ಬಾನೋ(27) ಮತ್ತು ಸೊಸೆ ಸಫಿಯಾ ಬಾನೊ(62) ಮೃತ ದುರ್ದೈವಿಗಳಾಗಿದ್ದು, ಶುಕ್ರವಾರ ರಾತ್ರಿ ಮನೆಯ ವರಾಂಡಾದಲ್ಲಿ ಮಾತನಾಡುತ್ತ ಕುಳಿತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಟ್ರಕ್ ಮನೆಗೆ ನುಗ್ಗಿದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿದ್ದರು.

ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಅವಶೇಷಗಳಡಿಯಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಘಟನೆಯ ನಂತರ ಚಾಲಕ ಸ್ಥಳದಲ್ಲೇ ಟ್ರಕ್​ ಬಿಟ್ಟು ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ಆರಂಭಿಸಲಾಗಿದೆ.(ಏಜೆನ್ಸೀಸ್​​)