ನ್ಯೂಸ್

ಆಸ್ತಿಗಾಗಿ ತಮ್ಮನ ಪ್ರಾಣ ತೆಗೆದ ಮೂವರು ಸಹೋದರರು ಅರೆಸ್ಟ್​​​

ರೋಣ: ಆಸ್ತಿವಿವಾದ ಹಿನ್ನೆಲೆಯಲ್ಲಿ ಸ್ವಂತ ತಮ್ಮನನ್ನು, ಮೂವರ ಸಹೋದರರು ಸೇರಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ರೋಣ ಬಳಿ ನಡೆದಿದೆ.

ಇದನ್ನೂ ಓದಿ: ಒಂದು ಸರ್ಕಾರ, ಹತ್ತಾರು ಮುಖ್ಯಮಂತ್ರಿಗಳು; ರಾಜ್ಯ ಸರ್ಕಾರದ ವಿರುದ್ಧ ಎಚ್​ಡಿಕೆ ವಾಗ್ದಾಳಿ!

ಶೇಖಪ್ಪ ನವಲಗುಂದ (38) ಮೃತ ವ್ಯಕ್ತಿಯಾಗಿದ್ದು, ಜೂನ್ 30ರಂದು ಜಿಗಳೂರು ರಸ್ತೆಯ ಜಮೀನಿನಲ್ಲಿ ಈತನನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಲೋಕಪ್ಪ ನವಲಗುಂದ, ರೇವಣಪ್ಪ ನವಲಗುಂದ ಮತ್ತು ಬಸಪ್ಪ ನವಲಗುಂದ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ಎಕರೆ ಜಮೀನಿಗಾಗಿ ನಾಲ್ಕು ಜನ‌ಸಹೋದರರ ನಡುವೆ ಕಲಹ ಶುರುವಾಗಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್: ಭಾರತದ ಅಗ್ರ ಬೈಕರ್‌ಗಳು ಸೇರಿ120 ಮಂದಿ ಭಾಗಿ

ತನ್ನ ಪಾಲಿನ ಜಮೀನಿನಲ್ಲಿ ಸೈಟ್​ ಮಾಡುವ ವಿಚಾರವನ್ನು ಹೊಂದಿದ್ದ ಶೇಖಪ್ಪ, ಎರಡು ಎಕರೆ ಜಮೀನಿನಲ್ಲಿ ತನ್ನ‌ ಪಾಲು ಕೊಡುವಂತೆ ಒತ್ತಾಯಿಸುತ್ತಿದ್ದ. ಈ ನಡುವೆ ಜಮೀನಿಗಾಗಿ ನಾಲ್ಕು ಜನರ ನಡುವೆ ಗಲಾಟೆಯಾಗಿದ್ದು, ಮೂವರು ಸೇರಿ ಶೇಖಪ್ಪನಿಗೆ ಕೊಡಲಿಯಿಂದ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)