More

    ಫ್ರಾನ್ಸ್​ ಸಂಘರ್ಷ: ಪ್ಯಾರಿಸ್​ ಮೇಯರ್​ ಮನೆಗೆ ಕಾರು ನುಗ್ಗಿಸಿದ ಗಲಭೆಕೋರರು!

    ಪ್ಯಾರಿಸ್​: ಫ್ರಾನ್ಸ್​ನಲ್ಲಿ ಎದ್ದಿರುವ ಗಲಭೆ ತೀವ್ರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಉದ್ರಿಕ್ತ ಪ್ರತಿಭಟನಾಕಾರರು ಶನಿವಾರ ರಾತ್ರಿ ಪ್ಯಾರೀಸ್​ ಪಟ್ಟಣದ ಮೇಯರ್​ ವಿನ್ಸೆಂಟ್​ ಜೀನ್​ಬರ್ನ್​ ಅವರ ಮನೆಯ ಮೇಲೆಯೇ ದಾಳಿ ನಡೆಸಿದ್ದಾರೆ.

    ಈ ಸಂಬಂಧ ವಿನ್ಸೆಂಟ್​ ಜೀನ್​ಬರ್ನ್​ ಅವರು ಟ್ವೀಟ್​ ಮಾಡಿದ್ದು, ದಾಳಿಯಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ. ರಾತ್ರಿ ಮಲಗಿದ್ದಂತಹ ಸಮಯದಲ್ಲಿ ಜೀನ್​ಬರ್ನ್​ ಅವರ ನಿವಾಸಕ್ಕೆ ಕಾರನ್ನು ನುಗ್ಗಿಸಿ, ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದಾರೆ.

    ನನ್ನ ಪತ್ನಿ ಮತ್ತು ನನ್ನ ಮಕ್ಕಳಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಇದು ಹೇಳಲಾಗದ ಹೇಡಿತನದ ಕೊಲೆಯ ಪ್ರಯತ್ನವಾಗಿತ್ತು ಎಂದು ಜೀನ್​ಬರ್ನ್​ ಘಟನೆಯನ್ನು ಖಂಡಿಸಿದ್ದಾರೆ.

    ಫ್ರಾನ್ಸ್​ನಲ್ಲಿ 17 ವರ್ಷದ ಹುಡುಗನಿಗೆ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ನಂತರ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಗಲಭೆ ಸ್ವರೂಪ ಪಡೆದುಕೊಂಡಿದೆ. ಇದೀಗ ಗಲಭೆಗಳು ಫ್ರಾನ್ಸ್​ನ ಉತ್ತರ ಭಾಗವನ್ನೂ ತಲುಪಿದ್ದು 45 ಸಾವಿರ ಪೊಲೀಸರನ್ನು ಗಲಭೆ ತಡೆಯಲು ನಿಯೋಜಿಸಲಾಗಿದೆ. ಈವರೆಗೆ ಒಟ್ಟು 1,100 ಜನರನ್ನು ಬಂಧಿಸಲಾಗಿದೆ ಎನ್ನಲಾಗಿದ್ದು ಅಷ್ಟೂ ಜನರ ಸರಾಸರಿ ವಯಸ್ಸು ಕೇವಲ 17 ವರ್ಷ ಎಂದು ವರದಿಯಾಗಿದೆ.

    ಇದನ್ನೂ ಓದಿ: ರೇಡಿಯೋ ಚಾನೆಲ್​ಗಳ ವಿಲೀನ ಬೇಡಾ; ಹಾಲಿ ನಿರೂಪಕರು ನೀರುದ್ಯೋಗಿಗಳಾಗುತ್ತಾರೆ.. ಈಗ ಇರುವ ರೀತಿಯಲ್ಲಿಯೇ ನಡೆಸಲು ಅನುಮತಿ ಕೋರಿ ಸಿಎಂಗೆ ಪತ್ರ

    ಯುವ ಗಲಭೆಕೋರರು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆ ಮಾಡಿದ್ದು, ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿದ್ದಾರೆ. ಈ ಸಂದರ್ಭ ಅವರು ಆ್ಯಪಲ್​ನಂತಹ ದುಬಾರಿ ಅಂಗಡಿಗಳಿಂದ ಹಿಡಿದು, ಚಿಲ್ಲರೆ ಅಂಗಡಿಗನ್ನೂ ಲೂಟಿ ಮಾಡಿದ್ದಾರೆ. ಹಿಂಸಾಚಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಫ್ರಾನ್ಸ್ ಸಾಕ್ಷಿಯಾಗಿದೆ.

    ಪ್ಯಾರಿಸ್‌ನ ಪಶ್ಚಿಮ ಹೊರವಲಯದಲ್ಲಿರುವ ಕಾರ್ಮಿಕ ವರ್ಗದ ಪಟ್ಟಣವಾದ ನಾಂಟೆಯಲ್ಲಿ ಮೊದಲು ಗಲಭೆಗಳು ಭುಗಿಲೆದ್ದವು. ಅಲ್ಲಿ 17 ವರ್ಷದ ಬಾಲಕ ನಹೆಲ್ ಎಂ ಮಂಗಳವಾರ ಟ್ರಾಫಿಕ್ ಸ್ಟಾಪ್‌ನಲ್ಲಿ ಪೊಲೀಸ್ ಅಧಿಕಾರಿಯಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದ. ಅಧಿಕಾರಿಯ ಮೇಲೆ ಕೊಲೆಯ ಪ್ರಾಥಮಿಕ ಆರೋಪವನ್ನು ಹೊರಿಸಲಾಗಿದೆ. ನಹೆಲ್​ ಅಜಾಗರೂಕ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ತನಗೆ ಅಥವಾ ಇತರರಿಗೆ ಗಾಯವಾಗಬಹುದೆಂಬ ಭಯದಿಂದ ಗುಂಡಿಕ್ಕಿದ್ದಾಗಿ ಆರೋಪಿತ ಪೊಲೀಸ್​ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ ಎಂದು ನಾಂಟೆಗ್ರೆ ಪಬ್ಲಿಕ್ ಪ್ರಾಸಿಕ್ಯೂಟರ್ ಪಾಸ್ಕಲ್ ಪ್ರಾಚೆ ಹೇಳಿದ್ದಾರೆ. ಬಾಲಕ ಈ ಹಿಂದೆ ಟ್ರಾಫಿಕ್ ಆದೇಶಗಳನ್ನು ಅನುಸರಿಸಲು ವಿಫಲನಾಗಿದ್ದಕ್ಕಾಗಿ ಆತ ಪರಿಚಯ ಪೊಲೀಸರಿಗೆ ಇತ್ತು ಎಂದು ಪ್ರಾಚೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಬೃಹತ್​ ಗಾತ್ರದ ಹೆಬ್ಬಾವನ್ನು ಗುರುತಿಸಬಲ್ಲರು!

    ಮಾವೋವಾದಿಗಳ ಸಹಾಯದಿಂದ ಎಕರೆಗಟ್ಟಲೆ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಡ್ರಗ್ಸ್​ ರಾಣಿಯ​ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts