ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ. ಸದ್ಯದಲ್ಲೇ ವಿಧಾನಸಭೆ ಚುನಾವಣೆ ಬರಲಿದೆ. ಈ ಸರ್ಕಾರ ಮೋದಿ ಸರ್ಕಾರವಾಗಿದೆ. ಈ ಸರ್ಕಾರ ಎಷ್ಟು ದಿನ ಇರುತ್ತೋ ಕಾದು ನೋಡಬೇಕಿದೆ ಎಂದರು. ಏಕನಾಥ್ ಶಿಂಧೆ ಪಾಳಯದಿಂದ ನಾಯಕರನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ನನ್ನನ್ನು ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಎಂವಿಎ ನಕಲಿ ನಿರೂಪಣೆಯನ್ನು ಬಳಸಿದೆ ಎಂಬ ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಠಾಕ್ರೆ , ಮೋದಿ ಬಳಸಿದ ನಿರೂಪಣೆ ಏನು? ಮಂಗಳಸೂತ್ರ ಬಗ್ಗೆ ಏನು? ಇದು ಸರಿಯೇ? ಬಿಜೆಪಿಯೇ 400 ಎಂಬ ಘೋಷವಾಕ್ಯವನ್ನು ನೀಡಿತು. ಒಳ್ಳೆಯ ದಿನಗಳ ನಿರೂಪಣೆ ಏನಾಯಿತು, ಅಚ್ಛೇ ದಿನ್, ಮೋದಿ ಗ್ಯಾರಂಟಿ ಏನಾಯಿತು ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)