Trump: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ನಾನೇ ಕಾರಣ, ನನ್ನಿಂದಲೇ ಎರಡೂ ದೇಶಗಳು ಸಂಘರ್ಷ ಕೈಬಿಡಲು ಒಪ್ಪಿಕೊಂಡಿತು ಎಂಬುದನ್ನು ಪದೇ ಪದೇ ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಭಾರತದ ವಿರುದ್ಧ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ಮುಂದಿನ 6 ತಿಂಗಳೊಳಗೆ ಭಾರತದ ಶಾಲಾ ಮಕ್ಕಳಿಗೆ ಅತಿದೊಡ್ಡ AI ತರಬೇತಿ ಕೇಂದ್ರ: ಸಚಿವ ಜಯಂತ್ ಚೌಧರಿ |Artificial intelligence
ಇತ್ತೀಚೆಗಷ್ಟೇ ಯುಕ್ರೇನ್ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಶೀಘ್ರವೇ ಕೈಬಿಡಬೇಕು. ಇಲ್ಲದಿದ್ದರೇ, ಭಾರೀ ಸುಂಕವನ್ನು ವಿಧಿಸಲಾಗುವುದು ಎಂದು ಯುಎಸ್ ಸೆನೇಟರ್ ಭಾರತವನ್ನು ಗುರಿಯಾಗಿಸಿಕೊಂಡು ಹೇಳಿದ್ದರು. ಇದರ ಬೆನ್ನಲ್ಲೇ ಯುಎಸ್ ಮೂಲ ಸಂಸ್ಥೆಗಳಾದ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಟೆಕ್ ಕಂಪನಿಗಳಿಗೆ ಖಡಕ್ ಸಂದೇಶ ರವಾನಿಸಿರುವ ಟ್ರಂಪ್, ಸಂಸ್ಥೆಗಳಿಗೆ ಹೆಚ್ಚಾಗಿ ಭಾರತೀಯರನ್ನು ನೇಮಿಸಿಕೊಳ್ಳುವುದು ಬೇಡ. ಆದಷ್ಟು, ನಮ್ಮ ನೆಲದವರನ್ನೇ ಸೇರಿಸಿಕೊಳ್ಳಿ ಎಂದು ಹೇಳಿದ್ದಾರೆ.
ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಟೆಕ್ ಕಂಪನಿಗಳ ಜಾಗತಿಕ ಮನಸ್ಥಿತಿ ಸರಿಯಲ್ಲ. ಇದಲ್ಲದೆ, ಅವರು ಅಮೆರಿಕನ್ನರ ಅಭಿವೃದ್ಧಿಯತ್ತ ಹೆಚ್ಚು ಗಮನಹರಿಸುತ್ತಿಲ್ಲ. ಕೆಲವು ಟೆಕ್ ಕಂಪನಿಗಳು ದೇಶೀಯವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಬದಲು ಚೀನಾದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವುದು ಮತ್ತು ಭಾರತೀಯರಿಗೆ ಉದ್ಯೋಗವನ್ನು ನೀಡುವತ್ತ ಮುಂದುವರಿದಿವೆ. ಆ ದಿನಗಳೆಲ್ಲ ಮುಗಿದ ಕಥೆ. ನಮ್ಮವರಿಗೆ ಮೊದಲ ಆದ್ಯತೆ ಹಾಗೂ ಪ್ರಾಮುಖ್ಯತೆ ನೀಡಿ ಎಂದು ಟ್ರಂಪ್ ಕಿಡಿಕಾರಿದ್ದಾರೆ,(ಏಜೆನ್ಸೀಸ್).