ನ್ಯೂಸ್

ಈ ವರ್ಷದ ಅಮರನಾಥ ಯಾತ್ರೆ ಸಂಪೂರ್ಣ ರದ್ದು

vinaymk1969

ನವದೆಹಲಿ: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಯನ್ನು ಸಂಪೂರ್ಣ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರದಲ್ಲಿ ಕೋವಿಡ್​-19 ಪಿಡುಗು ಜೋರಾಗಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಹಿತದೃಷ್ಟಿಯಿಂದ ಯಾತ್ರೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ.

ಅಂದಾಜು 42 ದಿನ ಕಾಲ್ನಡಿಗೆಯಲ್ಲಿ ಸಾಗುವ ಜನರು ಹಿಮಾಲಯದ ತಪ್ಪಲಿನಲ್ಲಿರುವ 3,880 ಮೀಟರ್​ ಎತ್ತರದ ಪ್ರದೇಶದಲ್ಲಿ ಮಂಜಿನಿಂದ ನಿರ್ಮಾಣವಾಗಿರುವ ಲಿಂಗುವಿನ ದರ್ಶನಪಡೆದು, ಪುನೀತರಾಗುತ್ತಿದ್ದರು.

ಇದಕ್ಕೂ ಮುನ್ನ ಬಾಟಾಲ್​ ಮಾರ್ಗದ ಮೂಲಕ 15 ದಿನಗಳ ಅಮರನಾಥ ಯಾತ್ರೆಗೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಕೂಡ ಕರೊನಾ ವೈರಾಣು ಸೋಂಕು ಮಿತಿಮೀರಿರುವ ಪರಿಣಾಮ ಯಾತ್ರೆಯನ್ನೇ ಸಂಪೂರ್ಣ ರದ್ದುಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.