ನ್ಯೂಸ್

ಹೆರಿಗೆ ದಿನ ಸಮೀಪಿಸುತ್ತಿದ್ದರೂ ರಜೆ ಪಡೆಯುತ್ತಿಲ್ಲ ಈ ತಹಸೀಲ್ದಾರ್​..!

lakshmihegde

ತಿಪಟೂರು: ಹೆರಿಗೆ ಸಮಯ ಸಮೀಪಿಸುತ್ತಿದ್ದರೂ ಅವಧಿಪೂರ್ವ ರಜೆ ತೆಗೆದುಕೊಳ್ಳಲು ಮನಸ್ಸು ಮಾಡದೆ ಕರೊನಾ ಸೇನಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ತಿಪಟೂರು ತಹಸೀಲ್ದಾರ್ ಬಿ. ಆರತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಚೆನ್ನಾಗಿದ್ದಾಗ ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ ಸಂದಿಗ್ಧ ಸಮಯದಲ್ಲಿ ಕೆಲಸ ಮಾಡುವುದು ಮುಖ್ಯ. ಒಂದೂವರೆ ವರ್ಷಗಳಿಂದ ತಾಲೂಕಿನ ಪರಿಸ್ಥಿತಿ, ಕರೊನಾಗೆ ಸಂಬಂಧಪಟ್ಟ ರೋಗಿಗಳ ಮಾಹಿತಿ ನನಗಿದೆ. ನಾನು ರಜೆ ಮೇಲೆ ತೆರಳಿದರೆ ನನ್ನ ಜಾಗಕ್ಕೆ ಬರುವ ಹೊಸಬರಿಗೆ ಇಲ್ಲಿನ ಆಡಳಿತ ವ್ಯವಸ್ಥೆ ತಿಳಿದುಕೊಳ್ಳಲು ಸಮಯ ಬೇಕು. ಮನೆಯಲ್ಲಿ ರಜೆ ಹಾಕಿ ಬರಲು ಹೇಳುತ್ತಿದ್ದಾರೆ. ಆದರೆ ಕರ್ತವ್ಯ ಪ್ರಜ್ಞೆ ಕಾಡುತ್ತಿದೆ. ಕಠಿಣ ಪರಿಸ್ಥಿತಿಗಳಲ್ಲಿ ಕರ್ತವ್ಯದಿಂದ ವಿಮುಖರಾಗಲ್ಲ ಎಂದು ಮಾಡಿರುವ ಪ್ರಮಾಣ ನೆನಪಿಗೆ ಬರುತ್ತದೆ ಎಂದು ಆರತಿ ಹೇಳುತ್ತಾರೆ.