ನ್ಯೂಸ್

ಪೊಲೀಸರಿಗೆ ಸಿಕ್ಕಿಬಿದ್ದ ಸ್ಯಾಂಟ್ರೋ ರವಿಯ ಅಸಲಿ ಮುಖ ಇದು!

ಬೆಂಗಳೂರು: ನೋಡೋಕೆ ಥೇಟ್​ ಆಫೀಸರ್​ ಥರ ವಿಧಾನಸೌಧ ಸೇರಿದಂತೆ ಕೆಲ ರಾಜಕಾರಣಿಗಳ ಆಪ್ತ ವಲಯದಲ್ಲಿ ಪದೇಪದೆ ಕಾಣಿಸಿಕೊಳ್ಳುತ್ತಿದ್ದ ಸ್ಯಾಂಟ್ರೋ ರವಿ ಈಗ ಹೇಗಿದ್ದಾನೆ ಗೊತ್ತಾ? ತಲೆಗೆ ವಿಗ್​ ಹಾಕಿಕೊಂಡು ಸ್ಟೈಲಿಶ್​ ಆಗಿ ಓಡಾಡಿಕೊಂಡಿದ್ದ ಈತ ಮಾಂಸದಂಧೆ ಮಾತ್ರವಲ್ಲ, ಪೊಲೀಸ್​ ವರ್ಗಾವಣೆ ದಂಧೆಯ ಕಿಂಗ್​ ಪಿನ್​ ಕೂಡ. ಮೈಸೂರಿನ ಯುವತಿ ಈತನ ವಿರುದ್ಧ ಅತ್ಯಾಚಾರ ಕೇಸ್​ ದಾಖಲಿಸುತ್ತಿದ್ದಂತೆ ಇವನ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ಒಂದೊಂದೇ ಕರಾಳ ಮುಖ ಅನಾವರಣಗೊಂಡಿದೆ.

ಪತ್ನಿಗೆ ಕಿರುಕುಳ, ಅತ್ಯಾಚಾರ, ವೇಶ್ಯಾವಾಟಿಕೆ ದಂಧೆ, ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆ… ಹೀಗೆ ಹಲವು ಪ್ರಕರಣಗಳು ಬಯಲಿಗೆ ಬರುತ್ತಿದ್ದಂತೆ ಕರ್ನಾಟಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ, 11 ದಿನಗಳ ಬಳಿಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಪೊಲೀಸರಿಗೆ ತನ್ನ ಗುರುತು ಸಿಗದಂತೆ ವೇಷ ಬದಲಿಸಿಕೊಂಡಿದ್ದ ಈತ ಮೀಸೆಯನ್ನೂ ಬೋಳಿಸಿಕೊಂಡಿದ್ದ. ಕೂದಲು ಇಲ್ಲದೆ ಬೋಳು ತಲೆ ಇದ್ದರೂ ತರೇಹವಾರಿ ವಿಗ್​ ಹಾಕಿಕೊಂಡು ಯಾಮಾರಿಸಿದ್ದ. ವಿಗ್​ ತೆಗೆದ ಸ್ಥಿತಿಯಲ್ಲಿ ನೋಡಿದ್ರೆ ಅರೆಕ್ಷಣ ಈತ ಸ್ಯಾಂಟ್ರೋ ರವಿ ಹೌದೋ, ಅಲ್ಲವೋ ಎಂಬ ಅನುಮಾನ ಮೂಡುತ್ತೆ. ಇದು ಈತನ ಅಸಲಿ ಮುಖ. ವಯಸ್ಸು 51 ವರ್ಷ. ಆದರೂ ಯುವಕನ ಸೋಗಲ್ಲಿ ಅದೆಷ್ಟು ಹೆಣ್ಣುಮಕ್ಕಳ ಜೀವನ ಹಾಳು ಮಾಡಿದ್ದಾನೋ ತನಿಖೆ ಬಳಿಕ ಹೊರ ಬರಲಿದೆ.