Extra Marital Affairs : ಮದುವೆ ಎಂಬ ಪವಿತ್ರ ಬಂಧಕ್ಕೆ ಇಂದು ಅರ್ಥವಿಲ್ಲದಂತಾಗಿದೆ. ಅದಕ್ಕೆ ಕಾರಣ ಹೆಚ್ಚುತ್ತಿರುವ ಡಿವೋರ್ಸ್ ಒಂದೆಡೆಯಾದರೆ, ವಿವಾಹೇತರ ಸಂಬಂಧಗಳು ಇನ್ನೊಂದು ಕಾರಣ. ಜೀವನಪೂರ್ತಿ ಜತೆಯಾಗಿ ಹೆಜ್ಜೆ ಹಾಕುತ್ತೇನೆಂದು ಹೇಳಿ ಸಪ್ತಪದಿ ತುಳಿಯುವ ಜೋಡಿ, ಕೆಲವೇ ವರ್ಷಗಳಲ್ಲಿ ಬೇರೆಯಾಗುತ್ತವೆ. ಬಹುತೇಕರ ದಾಂಪತ್ಯ ಜೀವನ, ವಿವಾಹೇತರ ಸಂಬಂಧಗಳಿಂದಲೇ ನಾಶವಾಗಿವೆ.
ವೈಯಕ್ತಿಕವಾಗಿ ಗೊತ್ತಿರುವವರು, ಒಂದೇ ಕಚೇರಿಯಲ್ಲಿ ಕೆಲಸ ಮಾಡುವವರು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗುವ ಪುರುಷರು ಮತ್ತು ಮಹಿಳೆಯರು ಪರಸ್ಪರ ಹತ್ತಿರವಾಗುತ್ತಾರೆ. ಸ್ನೇಹ ಬೆಳೆದಂತೆ ಅದು ಪ್ರೀತಿಯಾಗಿ ಬದಲಾಗಲು ಪ್ರಾರಂಭಿಸುತ್ತದೆ. ಮೊಬೈಲ್ ಫೋನ್ ಮೂಲಕ ಚಾಟ್ ಮಾಡುವುದರಿಂದ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಇದರ ನಡುವೆ ಕೇರಳದಲ್ಲಿ ಹೆಚ್ಚಿನ ಅಕ್ರಮ ಸಂಬಂಧಗಳು ಹೇಗೆ ಪ್ರಾರಂಭವಾಗುತ್ತವೆ ಎಂಬುದನ್ನು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅವರ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳ ಸಾಮಾನ್ಯ ಸ್ವರೂಪವನ್ನು ಆಧಾರವಾಗಿಟ್ಟುಕೊಂಡು ಪೊಲೀಸ್ ಅಧಿಕಾರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವರ್ಷಗಳ ನಂತರ ಆಯೋಜಿಸಲಾಗುವ ಹಳೆಯ ವಿದ್ಯಾರ್ಥಿಗಳ ಕೂಟಗಳು ಅಕ್ರಮ ಸಂಬಂಧಗಳಿಗೆ ಸಾಮಾನ್ಯ ಕಾರಣ ಎಂದು ಅಧಿಕಾರಿ ಹೇಳಿದ್ದಾರೆ.
ನಾನು ಪೊಲೀಸ್ ಠಾಣೆಯಲ್ಲಿ ಕುಳಿತಾಗ, ಸಾಮಾನ್ಯವಾಗಿ ಬರುವ ಸಮಸ್ಯೆಗಳು ಹಳೆಯ ವಿದ್ಯಾರ್ಥಿಗಳ ಒಕ್ಕೂಟಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ನನಗೆ ಈಗಾಗಲೇ ಮೂವತ್ತಕ್ಕೂ ಹೆಚ್ಚು ಪ್ರಕರಣಗಳು ಬಂದಿವೆ. ಚಾಟ್ ಮಾಡುವ ಮೂಲಕವೇ ಸಮಸ್ಯೆಗಳು ಉದ್ಭವಿಸುತ್ತವೆ. ತಾತ್ಕಾಲಿಕ ಸುಖಗಳ ಹಿಂದೆ ಹೋಗಬೇಡಿ. ನಾನು ಈಗಾಗಲೇ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ ಎಂದು ಅಧಿಕಾರಿ ಹೇಳಿದ್ದಾರೆ.
ಹಳೆಯ ವಿದ್ಯಾರ್ಥಿಗಳ ಕೂಟಗಳಲ್ಲಿ ಈ ಹಿಂದೆ ಹೇಳಿಕೊಳ್ಳಲಾಗದ ಅನೇಕ ಪ್ರೀತಿಗಳು ಬಹಿರಂಗಗೊಳ್ಳುವುದು ಸಾಮಾನ್ಯವಾಗಿದೆ. ಅಂತಹ ಸಂಬಂಧಗಳನ್ನು ಪ್ರಾರಂಭಿಸುವ ಮೊದಲ ಹೆಜ್ಜೆ ಫೋನ್ ನಂಬರ್ಗಳನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ಚಾಟ್ ಮಾಡಲು ಪ್ರಾರಂಭಿಸುವುದು. ಇದು ನಂತರದಲ್ಲಿ ಅಕ್ರಮ ಸಂಬಂಧಕ್ಕೆ ತಿರುತ್ತದೆ.
ಮದುವೆಯಾದ ವರ್ಷಗಳ ನಂತರ ಸಂಗಾತಿಯಿಂದ ದೂರವಾಗುವುದು ಮತ್ತು ಕೌಟುಂಬಿಕ ಸಮಸ್ಯೆಗಳು ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಮತ್ತೊಂದು ಸಂಬಂಧನ್ನು ಶುರು ಮಾಡುವುದರಿಂದ ತಾತ್ಕಾಲಿಕ ಸಂತೋಷ ಸಿಗಬಹುದು. ಆದರೆ, ದೀರ್ಘಾವಧಿಯಲ್ಲಿ ಅದು ಸಮಸ್ಯೆಗಳನ್ನು ಮಾತ್ರ ಸೃಷ್ಟಿಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ವಿವಾಹೇತರ ಸಂಬಂಧಗಳು ಮನೆಯಲ್ಲಿ ಮತ್ತು ಕೆಲಸದಲ್ಲಾಗುವ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರವಲ್ಲ, ಬದಲಿಗೆ ಮುಂದಿನ ದಿನಗಳಲ್ಲಿ ನಿಮಗೆ ಎದುರಾಗಬಹುದಾಗ ದೊಡ್ಡ ಸಮಸ್ಯೆಗಳಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನಶ್ಶಾಸ್ತ್ರಜ್ಞರು ಸೂಚಿಸುತ್ತಾರೆ. (ಏಜೆನ್ಸೀಸ್)