ನ್ಯೂಸ್

ನೀವು ಪ್ರತಿನಿತ್ಯ ಹೆಡ್​ಫೋನ್ ಬಳಸುತ್ತೀರಾ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು

ವಾಷಿಂಗ್ಟನ್​: ಹೆಡ್​ಫೋನ್​ (Headphones), ಇಯರ್​ ಬಡ್​ ಬಳಕೆ ಮತ್ತು ಅಬ್ಬರದ ಸಂಗೀತ ಕಾರ್ಯಕ್ರಮಗಳಿಗೆ ಹಾಜರಾಗುವುದರಿಂದ ವಿಶ್ವಾದ್ಯಂತ ಅಂದಾಜು 100 ಕೋಟಿ ಯುವ ಜನರು ಶ್ರವಣದೋಷ (Ear Problem) ಎದುರಿಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಬಿಎಂಜೆ ಗ್ಲೋಬಲ್​ ಹೆಲ್ತ್​ ರ್ಜನಲ್​ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಎಲ್ಲ ದೇಶಗಳು ಶ್ರವಣೇಂದ್ರಿಯ ಆರೋಗ್ಯ ಕಾಪಾಡಲು "ಸುರತ ಆಲಿಸುವಿಕೆ' ನೀತಿಗಳಿಗೆ ತುರ್ತಾಗಿ ಆದ್ಯತೆ ನೀಡಬೇಕಿದೆ ಎಂದು ಸೌತ್​ ಕೆರೊಲಿನಾದ ವೈದ್ಯಕಿಯ ವಿಶ್ವವಿದ್ಯಾಲಯದ ಸಂಶೋಧಕರು ಸೇರಿದಂತೆ ಅಂತಾರಾಷ್ಟ್ರೀಯ ತಜ್ಞರ ತಂಡ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ ಪ್ರಪಂಚದಾದ್ಯಂತ 430 ದಶಲಕ್ಷ ಜನರು ಪ್ರಸ್ತುತ ಶ್ರವಣದೋಷ ಹೊಂದಿದ್ದಾರೆ. ಯುವಜನತೆ ವೈಯಕ್ತಿಕ ಶ್ರವಣ ಸಾಧನದಿಂದಾಗಿ ಕೇಳುವಿಕೆ ಸಾಮರ್ಥ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಕೇಳುವಿಕೆ ಸಾಧನಗಳಲ್ಲಿ ಜನರು ಆಲಿಸುವ ಧ್ವನಿ 105 ಡೆಸಿಬಲ್​ಗಿಂತ (ಡಿಬಿ) ಹೆಚ್ಚಿರುತ್ತದೆ. ಮನರಂಜನಾ ಉದ್ದೇಶಕ್ಕಾಗಿ ಬಳಸುವ ಸರಾಸರಿ ಧ್ವನಿಮಟ್ಟ 104ರಿಂದ 112 ಡಿಬಿವರೆಗೆ ಇರಬೇಕು ಎಂದು ಅಧ್ಯಯನ ತಿಳಿಸಿದೆ. ಸಾಮಾನ್ಯವಾಗಿ ವಯಸ್ಕರಿಗೆ 80 ಡಿಸಿ ಮತ್ತು ಮಕ್ಕಳಿಗೆ 75 ಡಿಸಿವರೆಗಿನ ಧ್ವನಿಮಟ್ಟವನ್ನು ನಿಗದಿಪಡಿಸಲಾಗಿದೆ. ಆದರೆ, ಸೂಚಿತ ಮಟ್ಟಕ್ಕಿಂತ ಹೆಚ್ಚಿನ ಪರಿಮಾಣ ದಲ್ಲಿ ಧ್ವನಿ ಆಲಿಸುವುದರಿಂದ ಕಿವುಡತನ ಉಂಟಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇಯರ್​ ಫೋನ್​ ಕಿವಿಯ ಒಳಗೆ ಇರಿಸಿಕೊಳ್ಳು ವುದರಿಂದ ಅದು ಕಿವಿಯ ತಮಟೆ ಹಾಗೂ ಒಳಗಿವಿಗೆ ಸಮೀಪದಲ್ಲಿರುತ್ತದೆ. ಬಳಕೆ ಮಾಡುವವರು ತಮಗೆ ಅರಿವಿಲ್ಲದೆ ಶಬ್ದದ ಪ್ರಮಾಣ ಶೇ.60ಕ್ಕಿಂತ ಅಧಿಕ ಇರಿಸಿಕೊಂಡಿರುತ್ತಾರೆ. ಇದರಿಂದ ಶಬ್ದವು ಸುರತ ಮಟ್ಟಕ್ಕಿಂತ ಹೆಚ್ಚಿರುತ್ತದೆ. ಈ ರೀತಿ ದೀರ್ಕಾಲ ಬಳಕೆ ಮಾಡುವುದರಿಂದ ಒಳಕಿವಿಯ ನರಕೋಶಕ್ಕೆ ಹಾನಿಯಾಗಿ ಶ್ರವಣ ಶಕ್ತಿ ಕುಂದುತ್ತದೆ. ನರದೌರ್ಬಲ್ಯಗೊಂಡು ಸಣ್ಣ ವಯಸ್ಸಿನಲ್ಲಿಯೇ ಕಿವುಡುತನ ಆವರಿಸುತ್ತದೆ. | ಡಾ.ಎಂ.ಎಸ್​.ಜೆ. ನಾಯಕ್​ ಶ್ರವಣತಜ್ಞ

ನಿಯಮ ಪಾಲಿಸಿ

ಯುವ ಮತ್ತು ಹದಿಹರೆಯದ ವಯಸ್ಸಿನ ಜನರು ಸುರತ ಆಲಿಸುವಿಕೆ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಕೇಳುವಿಕೆ ಸಮಸ್ಯೆಯನ್ನು ಹೆಚ್ಚಿಸುತ್ತಿದೆ ಎಂದು ಅಧ್ಯಯನ ತಿಳಿಸಿದೆ. ಇಂಗ್ಲಿಷ್​, ಫ್ರೆಂಚ್​​, ಸ್ಪಾನಿಷ್​ ಮತ್ತು ರಷ್ಯನ್​ ಭಾಷೆಗಳಲ್ಲಿ ಪ್ರಕಟವಾದ ಅಧ್ಯಯನಗಳನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದೆ. ಕೇಳುವಿಕೆಯಲ್ಲಿ ಅಸುರತ ಅಭ್ಯಾಸಗಳ ಪಾಲನೆ ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ. ಇದು ಹದಿಹರೆಯದವರು ಮತ್ತು ಯುವಜನರಲ್ಲಿ ಕ್ರಮವಾಗಿ ಶೇ. 24 ಮತ್ತು ಶೇ.48 ಇದೆ ಜಾಗತಿಕವಾಗಿ ಹದಿಹರೆಯದವರು ಮತ್ತು ಯುವಜನರಲ್ಲಿ 0.67 ರಿಂದ 1.35 ಬಿಲಿಯನ್​ ಜನರು ಶ್ರವಣ ದೋಷದ ಅಪಾಯ ಹೊಂದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.