ಪ್ರಯಾಗ್ರಾಜ್: ಈ ದೇಶದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಯಂತೆ ಹಿಂದುಸ್ತಾನ(Hindustan) ನಡೆಯುತ್ತದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಅಲಹಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಹೇಳಿದ್ದಾರೆ.
ಪ್ರಯಾಗ್ರಾಜ್ನಲ್ಲಿ ನಡೆದ ವಿಶ್ವ ಹಿಂದು ಪರಿಷತ್(ವಿಎಚ್ಪಿ) ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡುವಾಗ ಅವರು ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಮತ್ತೊಬ್ಬ ನ್ಯಾಯಮೂರ್ತಿ ದಿನೇಶ್ ಪಾಠಕ್ ಇದ್ದರು ಎಂದು ವರದಿಗಳು ಉಲ್ಲೇಖಿಸಿವೆ.
''ಇದು ಕಾನೂನು. ಕಾನೂನು ವಾಸ್ತವವಾಗಿ ಬಹುಮತದ(ಮೆಜರಿಟಿ) ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದನ್ನೂ ಕುಟುಂಬ ಮತ್ತು ಸಮಾಜದ ಹಿನ್ನೆಲೆಯಿಂದ ನೋಡಿ, ಬಹುಸಂಖ್ಯಾತರ ಕಲ್ಯಾಣ ಮತ್ತು ಸಂತೊಷಕ್ಕೆ ಏನು ಪ್ರಯೋಜನವಾಗುತ್ತಯೋ ಅದನ್ನೇ ಸ್ವೀಕರಿಸಲಾಗುತ್ತದೆ'' ಎಂದು ಯಾದವ್ ಹೇಳಿದ್ದಾರೆ.
ಬಹುಪತ್ನಿಯರನ್ನು ಹೊಂದುವುದು, ತ್ರಿವಳಿ ತಲಾಕ್ ಮತ್ತು ಹಲಾಲ್ನಂತಹ ಆಚರಣೆಗಳು ಸ್ವೀಕರಾರ್ಹಲ್ಲ ಎಂದು ಮುಸ್ಲಿಂ ಆಚರಣೆ ಬಗ್ಗೆ ಹೆಸರಿಸದೆ ಹೇಳಿದರು. ಇಂತಹ ಆಚರಣೆಗಳಿಗೆ ನಮ್ಮ ವೈಯಕ್ತಿಕ ಕಾನೂನು ಅವಕಾಶ ನೀಡುತ್ತದೆ ಎಂದು ಹೇಳಿದರೆ ಅದನ್ನು ನೀವು ಒಪ್ಪಿಕೊಳ್ಳಲ್ಲ. ಹಿಂದು ಸಮುದಾಯ ನಾಲ್ಕು ಹೆಂಡ್ತಿಯರನ್ನು ಹೊಂದುವುದಿಲ್ಲ. ಯಾಕೆಂದರೆ ನಮ್ಮ ಶಾಸ್ತ್ರಗಳು ಮತ್ತು ವೇದ, ನಮ್ಮ ಮಹಿಳೆಯರನ್ನು ದೇವತೆ ಎಂದು ಹೇಳಿದೆ ಎಂದರು.
ಹಿಂದೂ ಧರ್ಮದಲ್ಲಿ ಬಾಲ್ಯವಿವಾಹ ಮತ್ತು ಸತಿಯಂತಹ ಸಾಮಾಜಿಕ ಅನಿಷ್ಟಗಳಿವೆ ಎಂದು ನಾನು ಒಪ್ಪಿಕೊಳ್ಳುವೆ. ಆದರೆ, ರಾಮ್ ಮೋಹನ್ ರಾಯ್ ಅವರಂತಹ ಸುಧಾರಕರು ಈ ಆಚರಣೆಗಳನ್ನು ಕೊನೆಗೊಳಿಸಲು ಹೋರಾಡಿದರು. ಇತರ ಸಮುದಾಯಗಳು ಅದೇ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುವ ಹಿಂದುಗಳು ನಿರೀಕ್ಷಿಸುವುದಿಲ್ಲ, ಆದರೆ, ಅವರು ಖಂಡಿತವಾಗಿಯೂ ಈ ದೇಶದ ಸಂಸ್ಕೃತಿ, ಮಹಾನ್ ವ್ಯಕ್ತಿಗಳು ಮತ್ತು ಈ ನೆಲದ ದೇವರನ್ನು ಅಗೌರವಗೊಳಿಸಬಾರದು ಎಂದರು.
ನಮ್ಮ ದೇಶದಲ್ಲಿ, ಚಿಕ್ಕ ಪ್ರಾಣಿಗಳಿಗೆ ಈ ಹಾನಿ ಮಾಡಬಾರದು, ಇರುವವರನ್ನು ಕೊಲ್ಲಬಾರದು ಎಂದು ನಮಗೆ ಕಲಿಸುವ ಮತ್ತು ಪಾಠವು ನಮ್ಮಲ್ಲಿ ಬೇರೂರಿದೆ. ಬಹುಶಃ ಅದಕ್ಕಾಗಿಯೇ ನಾವು ಸಹಿಷ್ಣು ಮತ್ತು ಸಹಾನುಭೂತಿ ಹೊಂದಿದ್ದೇವೆ; ತುಂಬಾ ಬಳಲುತ್ತಿರುವಾಗ ನಾವು ನೋವನ್ನು ಅನುಭವಿಸುತ್ತೇವೆ. ಆದರೆ ನಿಮ್ಮ ಸಂಸ್ಕøತಿಯಲ್ಲಿ ಚಿಕ್ಕಂದಿನಿಂದಲೂ ಮಕ್ಕಳು ಪ್ರಾಣಿಗಳ ಹತ್ಯೆಗೆ ಒಳಗಾಗುತ್ತಾರೆ. ಅವರು ಸಹಿಷ್ಣು ಮತ್ತು ಸಹಾನುಭೂತಿಯಿಂದ ಇರಬೇಕೆಂದು ನೀವು ನಿರೀಕ್ಷಿಸಬಹುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ, (ಏಜೆನ್ಸಿಸ್).