ದುಬೈ: ಭಾರತೀಯ ಮೂಲದ ಉದ್ಯಮಿ ಸುಚೇತಾ ಶರ್ಮಾ ಅವರ ಮಾಲೀಕತ್ವದ ದುಬೈ ಮೂಲದ ಕೆಫೆಯು ತನ್ನ ಅತಿರಂಜಿತ "ಗೋಲ್ಡ್ ಕರಕ್"(Gold Karak) ಎಂಬ ಹೆಸರಿನ ಚಹಾ ದುಬೈನಲ್ಲಿ ಹೊಸ ಸಂಚಲ ಮೂಡಿಸಿದೆ.
ಹೌದು, ಇಲ್ಲಿನ ಎಮಿರೇಟ್ಸ್ ಫೈನಾನ್ಶಿಯಲ್ ಟವರ್ಸ್‌ನಲ್ಲಿರುವ ಬೋಹೋ ಎಂಬ ಕೆಫೆಯಲ್ಲಿ ಈ ಗೋಲ್ಡ್ ಕರಕ್ ಚಹಾ ಸವಿಯಬಹುದು. ಆದರೆ, ಈ ಚಹಾದ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ, ದುಬೈನಲ್ಲಿ ಬರೊಬ್ಬರಿ 5,000 AED ಬೆಲೆ ಹೊಂದಿದೆ. ಅಂದರೆ ಭಾರತೀಯ ರೂಪಾಯಿಗಳ ಪ್ರಕಾರ ಸುಮಾರು 1.14 ಲಕ್ಷ ರೂ. ಬೆಲೆ ಹೊಂದಿದೆ. ಈ ಬೆಲೆಯ ಹಿನ್ನೆಲೆ ಇದೀಗ ಈ ಗೋಲ್ಡ್ ಕರಕ್ ಚಹಾ ದುಬೈ ಮತ್ತು ಸಾಮಾಜಿಕ ಜಾಲತಾಣಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ತುಟಿ ಮೃದುವಾಗಿಬೇಕೇ?; ಇಲ್ಲಿದೆ ಸಿಂಪಲ್ ವಿಧಾನ ನೀವು ಟ್ರೈ ಮಾಡಿ.. | Health Tips
ಈ ಐಷಾರಾಮಿ ಚಹಾವನ್ನು 24-ಕ್ಯಾರೆಟ್ ಚಿನ್ನದ ಎಲೆಗಳಿಂದ ಮಾಡಲ್ಪಟ್ಟ ಶುದ್ಧ ಬೆಳ್ಳಿಯ ಕಪ್‌ಗಳಲ್ಲಿ ಬಡಿಸುವ ಮೂಲಕ ಸಂಪೂರ್ಣ ಹೊಸನತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತಿದೆ. ಚಹಾದ ಮೇಲೆ ಬಂಗಾರದ ಪದರು ಹೊಂದಿದೆ. ಹೀಗಾಗಿ ಇದಕ್ಕೆ 1.14 ಲಕ್ಷ ರೂ. ಬೆಲೆ ಎಂದು ವರದಿಯಾಗಿದೆ.
ಈ ಕೆಫೆಯಲ್ಲಿ ಐಷಾರಾಮಿ ಮೆನು(ಖಾದ್ಯಗಳ ಪಟ್ಟಿ) ಹೊಂದಿದೆ. ಅದರಲ್ಲಿ ಗೋಲ್ಡ್ ಸವೇನರ್ ಕಾಫಿ ಕೂಡ ಇದ್ದು ಇದರ ಬೆಲೆ ಕೂಡ 1.09 ಲಕ್ಷ ರೂ. ಆಗಿದೆ. ಅಲ್ಲದೆ, ಈ ಕೆಫೆಯಲ್ಲಿ ಐಸ್ಕ್ರೀಮ್ ಮತ್ತು ಪಾನಿಗಳ ಕೂಡ ದುಬಾರಿ ಬೆಲೆಯಲ್ಲಿ ಇದೆ. ಈ ಖಾದ್ಯಗಳನ್ನು ಶುದ್ಧ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳಲ್ಲಿ(ಪಾತ್ರೆ) ಉಣಬಡಿಸುತ್ತಾರೆ. ಹೀಗಾಗಿ, ಈ ಕೆಫೆ ಮತ್ತು ಇಲ್ಲಿನ ಚಹಾ ಇದೀಗ ವೈರಲ್ ಆಗುತ್ತಿದೆ,(ಏಜೆನ್ಸೀಸ್).