ನ್ಯೂಸ್

ಹೊರಬಿತ್ತು 'ಸಲಾರ್'ನ ಅಧಿಕೃತ ಟ್ರೇಲರ್ ರಿಲೀಸ್​ ಡೇಟ್​​!

ಮೋಹನ್​ ಶೆಟ್ಟಿ

ಬೆಂಗಳೂರು: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಮತ್ತು ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ಕಾಂಬಿನೇಷನ್​​ನಲ್ಲಿ ಮೂಡಿಬಂದಿರುವ ಪ್ಯಾನ್ ಇಂಡಿಯನ್ 'ಸಲಾರ್' ಭಾಗ 1ರ ಟ್ರೇಲರ್​ ರಿಲೀಸ್​ ಡೇಟ್​ ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ಈ ಕುರಿತು ಚಿತ್ರತಂಡ ಮಾಹಿತಿ ನೀಡಿದೆ.

ಕೆಲವು ಬದಲಾವಣೆಗಳ ನಂತರ ಡಿಸೆಂಬರ್ 22, 2023 ರಂದು ಸಲಾರ್​ ಸಿನಿಮಾವನ್ನು ತೆರೆ ಮೇಲೆ ತರಲು ನಿರ್ಧರಿಸುವ ಚಿತ್ರತಂಡ ಇದೀಗ ಟ್ರೇಲರ್​ ಅನ್ನು ಡಿ. 01 ರಂದು ಬಿಡುಗಡೆಗೊಳಿಸಲು ಮುಂದಾಗಿದೆ. ಸದ್ಯ ಈ ಸಂಗತಿ ಪ್ರಭಾಸ್​ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ.

ಆಕ್ಷನ್​, ಗ್ಯಾಂಗ್​ಸ್ಟರ್​ ಜಾನರ್​ನ ಈ ಚಿತ್ರದಲ್ಲಿ ಪ್ರಭಾಸ್​ ಮತ್ತು ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೇಲರ್​​ ಡಿಸೆಂಬರ್ 1 ರಂದು ಸಂಜೆ 07:19ಕ್ಕೆ ರಿಲೀಸ್ ಆಗಲಿದೆ ಎಂದು ಹೊಂಬಾಳೆ ಫಿಲಂಸ್​ ಅಧಿಕೃತ ಪೋಸ್ಟರ್​ ಮುಖೇನ ಘೋಷಿಸಿದೆ.

ಚಿತ್ರದಲ್ಲಿ ಪ್ರಭಾಸ್​, ತಿನ್ನು ಆನಂದ್, ಜಗಪತಿ ಬಾಬು, ಈಶ್ವರಿ ರಾವ್, ಪೃಥ್ವಿರಾಜ್ ಸುಕುಮಾರನ್ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).