Food Waste:ಆಹಾರ ಬಟ್ಟೆ ಮತ್ತು ವಸತಿ ಇವು ಮನುಷ್ಯನ ಮೂಲಭೂತ ಸೌಕರ್ಯಗಳಾಗಿವೆ. ಇದಕ್ಕಾಗಿ ಜನರು ಹಗಲಿರುಳು ಜನರು ಶ್ರಮಿಸುತ್ತಾರೆ. ಅಲ್ಲದೆ, ಕಷ್ಟಪಟ್ಟರೆ ಮಾತ್ರ ಹೊಟ್ಟೆಗೆ ಎರಡೋತ್ತು ಊಟ ಎಂಬಂತಾಗಿದೆ. ಇಷ್ಟಿದ್ದರೂ ಇಂದಿನ ಜನರು ಆಹಾರಕ್ಕಾಗಿ ಜನರು ಪಾರದಾಡುತ್ತಿದ್ದಾರೆ. ಆದರೆ, ಅನೇಕ ಜನರು ಬಹಳಷ್ಟು ಮಂದಿ ಆಹಾರವನ್ನು ವ್ಯರ್ಥ ಮಾಡುತ್ತಿದ್ದಾರೆ. ಆಹಾರವನ್ನು ವ್ಯರ್ಥ ಮಾಡುವುದು ಅಪರಾಧಕ್ಕಿಂತ ಕಡಿಮೆಯಿಲ್ಲ. ಆಹಾರವನ್ನು ಎಸೆಯುವ ವಿಷಯದಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ ಎಂಬುದು ನೋಡೋಣ.
ಇದು ಸುಳ್ಳಾದರೂ ನಿಜ, ಇಂದಿಗೂ ದೇಶದಲ್ಲಿ 100 ರಷ್ಟು ಜನರಿಗೆ ಸರಿಯಾದ ಮತ್ತು ಸಮರ್ಪಕವಾದ ಆಹಾರ ಸಿಗುತ್ತಿಲ್ಲ. ಆದರೂ, ಆಹಾರ ಪಾದರ್ಥಗಳ ವ್ಯರ್ಥವು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ದೇಶದಲ್ಲಿ ಆಹಾರ ಕೊರತೆ ಮತ್ತು ಅಪೌಷ್ಟಿಕತೆಯ ಸ್ಥಿತಿ ಹೇಗಿದೆ ಎಂದರೆ ಇಲ್ಲಿ ಸುಮಾರು 23.4 ಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಪ್ರಪಂಚದಲ್ಲಿ ಪ್ರತಿ ವರ್ಷ ಶೇ. 33 ರಷ್ಟು ಆಹಾರ ವ್ಯರ್ಥವಾಗುತ್ತಿದೆ. ಈ ವ್ಯರ್ಥವಾಗುವ ಆಹಾರದ ಕೇವಲ ಕಾಲು ಭಾಗದಿಂದ ಸುಮಾರು 795 ಜನರಿಗೆ ಆಹಾರವನ್ನು ಒದಗಿಸಬಹುದು ಎಂದು ವರದಿಗಳ ಅಧ್ಯಯನ ಹೇಳಿದೆ. ಇನ್ನು ಆಹಾರ ವ್ಯರ್ಥದ ವಿಚಾರಕ್ಕೆ ಬಂದರೆ ಆಹಾರ ವ್ಯರ್ಥದಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಚೀನಾದಲ್ಲಿ ಪ್ರತಿ ವರ್ಷ 91.6 ಮಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತಿದ್ದರೆ, ಭಾರತದಲ್ಲಿ ಈ ಅಂಕಿ ಅಂಶ 68.8 ಮಿಲಿಯನ್ ಟನ್ ಆಗಿದೆ.
ಅಮೆರಿಕದಲ್ಲಿ 19.4 ಮಿಲಿಯನ್ ಟನ್ ಆಹಾರ ವ್ಯರ್ಥ ಮಾಡುತ್ತಿದ್ದಾರೆ. ಇನ್ನು ಫ್ರಾನ್ಸ್ ಮತ್ತು ಜರ್ಮಿನಿಯಲ್ಲಿ 5-6 ಟನ್ ಕ್ರಮವಾಗಿ ಆಹಾರ ವ್ಯರ್ಥ ಮಾಡುತ್ತಿದೆ. ಪ್ರತಿ ವ್ಯಕ್ತಿಗೆ ಆಹಾರ ವ್ಯರ್ಥವಾಗುವ ಪ್ರಮಾಣದಲ್ಲಿ ಮಾಲ್ಡೀವ್ಸ್ ಅಗ್ರಸ್ಥಾನದಲ್ಲಿದೆ. ಇಲ್ಲಿ ಪ್ರತಿ ವರ್ಷ ಪ್ರತಿ ವ್ಯಕ್ತಿಗೆ 207 ಕಿಲೋಗ್ರಾಂಗಳಷ್ಟು ಆಹಾರವನ್ನು ಎಸೆಯಲಾಗುತ್ತಿದೆ ಎಂದು ಅಧ್ಯಯನದ ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)