ಸಿನಿ ರಂಗ ಅಂದಮೇಲೆ ಅದೊಂದು ಅವಕಾಶಗಳ ಸಾಗರ. ಇಲ್ಲಿ ಅವರು, ಇವರು ಎಂಬ ತಾರತಮ್ಯಗಳು ನಡೆದರೂ ಸಹ ಉತ್ತಮ ಪ್ರತಿಭೆಗಳು ಇಂದಲ್ಲ, ನಾಳೆ ಬೆಳಕಿಗೆ ಬಂದೇ ಬರುತ್ತಾರೆ. ಅದು ಕಲೆಯ ನೈಜ ಗುಣ. ಕರ್ತವ್ಯದ ಮೇಲಿನ ಶ್ರದ್ಧೆ, ವಿನಯ, ಶಿಸ್ತು, ಬದ್ಧತೆ ಹೀಗೆ ಹತ್ತು ಹಲವು ಕಾರಣಗಳು ಒಬ್ಬ ಅದ್ಭುತ ಕಲಾವಿದರನ್ನಾಗಿ ಮಾಡುತ್ತದೆ ಎಂಬದರಲ್ಲಿ ಕಿಂಚಿತ್ತು ಅನುಮಾನವಿಲ್ಲ. ಹಲವರು ಚಿತ್ರರಂಗದ ಹಿನ್ನೆಲೆ, ಗಾಡ್ಫಾದರ್ಗಳ ಸಹಾಯದಿಂದ ಸುಲಭವಾಗಿ ಇಂಡಸ್ಟ್ರಿಗೆ ಕಾಲಿಡಬಹುದೇ ಹೊರತು ಅವರ ಬೆಂಬಲದಿಂದ ಮಾತ್ರ ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ಕಲಾ ಶಾರದೆಯು ಒಲಿಯಬೇಕು, ಒಂದೊಳ್ಳೆ ಪರಿಶ್ರಮದ ಜತೆಗೆ ಜನರು ಕೈಹಿಡಿಯಬೇಕು. ಇಷ್ಟಾದರೆ ಖಂಡಿತ ಚಿತ್ರರಂಗದಲ್ಲಿ ತನ್ನದೇ ಆದ ಒಂದು ಗುರುತನ್ನು ದಾಖಲಿಸಬಹುದು. ಸಿನಿ ಹಿನ್ನಲೆಯುಳ್ಳವರು ಚಿತ್ರರಂಗಕ್ಕೆ ಬರುವುದು ತೀರ ಸಾಮಾನ್ಯ. ಆದ್ರೆ, ಇತರೆ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು, ನಟನೆಯ ಬಗ್ಗೆ ಗಂಧ-ಗಾಳಿಯೂ ಇಲ್ಲದವರು ಇಂಡಸ್ಟ್ರಿಗೆ ಎಂಟ್ರಿಕೊಟ್ಟರೆ ಹೇಗೆ? ಅದರಲ್ಲೂ ಎಂಟ್ರಿಯಾಗಿ ದೊಡ್ಡ ಸ್ಟಾರ್ ನಟನಾಗಿ ಹೊರಹೊಮ್ಮಿದರೆ, ಆ ಗೆಲುವು, ಸಾಧನೆ ಮರೆಯಲು ಸಾಧ್ಯನಾ? ಖಂಡಿತ ಇಲ್ಲ. ಈ ನಟ ಕೂಡ ಇದೇ ಸಾಲಿಗೆ ಸೇರಿದವರು (Left UPSC Dream)
ಇದನ್ನೂ ಓದಿ: ನಾನು ಎಲ್ಲದಕ್ಕೂ ರೆಡಿ… ರೀಲ್ಸ್ನಿಂದಲೇ ಸಿನಿಮಾ ಅವಕಾಶ ಗಿಟ್ಟಿಸಿದ ಮಲಯಾಳಿ ಯುವತಿಯ ಶಾಕಿಂಗ್ ಹೇಳಿಕೆ! Aradhya Devi
ಅಸಲಿಗೆ ಈ ಕಲಾವಿದ ನಟನಾ ಪ್ರಪಂಚದ ಭಾಗವಾಗಲು ಸಾಕಷ್ಟು ಕಸರತ್ತು ಮಾಡಿದ್ದಾರೆ. ಅವಮಾನಗಳನ್ನು ಸಹ ಸಹಿಸಿಕೊಂಡಿದ್ದಾರೆ. 90ರ ದಶಕದಲ್ಲಿ ಮೂಡಿಬಂದ ಸೂಪರ್ಡೂಪರ್ ಹಿಟ್ ಸಿನಿಮಾಗಳ ಯುಗದಲ್ಲಿ ಚಿತ್ರರಂಗದತ್ತ ಮುಖಮಾಡಲು ದೃಢ ಸಂಕಲ್ಪ ಮಾಡಿಕೊಂಡ ಈ ನಟ, ಸಂಗೀತ ಮತ್ತು ಇತಿಹಾಸ ಬೋಧನೆ ಮಾಡುತ್ತಿದ್ದ ಒಬ್ಬ ಶಿಕ್ಷಕ ಎಂಬುದು ನಿಜಕ್ಕೂ ಮೆಚ್ಚುವಂತದ್ದು. ವಿದ್ಯಾಧಾನ ಮಾಡುವ ಕಾಯಕದಲ್ಲಿ ತೊಡಗಿದ್ದ ಇವರು, ಟೀಚರ್ ಆಗಿ ಕೆಲಸ ಮಾಡುವುದರ ಜತೆ ಜತೆಯಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಎಂಬ ಮಹತ್ವದ ಕನಸು ಇಟ್ಟುಕೊಂಡಿದ್ದರು. ಇದಕ್ಕಾಗಿ ನಿರಂತರವಾಗಿ ಶ್ರಮವಹಿಸುತ್ತಿದ್ದರು. ಆದರೆ, ದೇವರ ಇಚ್ಛೆ ಇವರು ಕಲಾಸೇವೆ ಮಾಡಲಿ ಎಂದಿತ್ತು ಅನಿಸುತ್ತದೆ. ಹಾಗಾಗಿಯೇ ಶಿಕ್ಷಕನ ಮನಸ್ಸನ್ನು ಸಿನಿಲೋಕದತ್ತ ತಿರುಗುವಂತೆ ಮಾಡಿತು.
ಮಾಜಿ ಶಾಸಕನ ಪುತ್ರನಾದ ಇವರು, ಇಂದು ಬಾಲಿವುಡ್ನ ಸ್ಟಾರ್ ಹೀರೋ. ಅಸಲಿಗೆ ಅವರು ಬೇರಾರೂ ಅಲ್ಲ ನಟ ಚಂದ್ರಚೂರ್ ಸಿಂಗ್. ಅಂದು ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಪ್ರೊಡಕ್ಷನ್ ಹೌಸ್ನಲ್ಲಿ ಹೊಸ ನಟನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಬಚ್ಚನ್ ಕಣ್ಣಿಗೆ ಬಿದ್ದ ಚಂದ್ರಚೂರ್, 1996ರಲ್ಲಿ ತೆರೆಕಂಡ 'ಮೇರೆ ಸಪ್ನೆ' ಚಿತ್ರದಲ್ಲಿ ಹೀರೋ ಆಗಿ ಮಿಂಚಿದರು. ಇಲ್ಲಿಂದ ಶುರುವಾದ ಅವರ ಸಿನಿ ವೃತ್ತಿ ಇಂದು ಯಶಸ್ವಿಯಾಗಿ ಸಾಗಿ ಬಂದಿರುವುದು ನಿಜಕ್ಕೂ ರೋಚಕ. ಇದೊಂದು ಸಿನಿಮಾ ಅಂದು ಬಾಲಿವುಡ್ನ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವುದರ ಜತೆಗೆ ಸಿಂಗ್ರನ್ನು ಸ್ಟಾರ್ ನಟನಾಗಿ ಪ್ರೇಕ್ಷಕರಿಗೆ ಪರಿಚಯಿಸಿತು.
ಈ ಸಿನಿಮಾದ ಸಕ್ಸಸ್ ಬೆನ್ನಲ್ಲೇ ನಟಿಸಿದ ಹಲವು ಚಿತ್ರಗಳು ಬ್ಲಾಕ್ಬಸ್ಟರ್ ಸಾಲಿಗೆ ಸೇರಿತು. ಅಂದಿನಿಂದ ಶುರುವಾದ ಅವರ ನಟನಾ ವೃತ್ತಿ 'ದಾಗ್-ದಿ ಫೈರ್' (1999),' ಜೋಶ್' (2000), 'ಕ್ಯಾ ಕೆಹ್ನಾ' (2000), ಮತ್ತು 'ಆಮ್ದಾನಿ ಅಥಾನಿ ಖರ್ಚಾ ರುಪೈಯಾ' (2001) ವರೆಗೂ ಕರೆದುಕೊಂಡು ಹೋಯಿತು. ಒಂದು ಪ್ರಮುಖ ಘಟ್ಟದಲ್ಲಿ ಉತ್ತುಂಗಕ್ಕೇರಿದ್ದ ನಟ, ಜೆಟ್ ಸ್ಕೈ ಸವಾರಿ ವೇಳೆ ದಿಢೀರ್ ಕುಸಿತ ಕಂಡು ದೊಡ್ಡ ಅಪಘಾತಕ್ಕೆ ಒಳಗಾದರು. ಈ ದುರ್ಘಟನೆಯಲ್ಲಿ ತಮ್ಮ ಭುಜಕ್ಕೆ ಬಲವಾದ ಪೆಟ್ಟುಬಿದ್ದ ಕಾರಣ ಅವರು ಸರ್ಜರಿ ಮಾಡಿಸಿಕೊಳ್ಳುವಂತ ಪರಿಸ್ತಿತಿ ಎದುರಾಯಿತು.
ಸರ್ಜರಿ ಆದ ನಂತರ ತೀವ್ರ ಅನಾರೋಗ್ಯದ ಕಾರಣದಿಂದಾಗಿ ಅವರು ಹಲವು ದೊಡ್ಡ ಆಫರ್ಗಳನ್ನು ರಿಜೆಕ್ಟ್ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಂತಿಮವಾಗಿ ಆರೋಗ್ಯವೇ ಮುಖ್ಯ ಎಂದು ಸಿನಿ ಕರಿಯರ್ಗೆ ಗುಡ್ಬೈ ಹೇಳಿ, ಇಂದು ಸಿನಿಲೋಕದಿಂದ ದೂರ ಉಳಿದಿದ್ದಾರೆ. 90ರ ದಶಕದಲ್ಲಿ ಸಿನಿಮಾಗಳನ್ನು ಆನಂದಿಸುತ್ತಿದ್ದ ಸಿನಿಪ್ರಿಯರಿಗೆ ಇವರ ಮುಖ ಪರಿಚಯ ಹಾಗೂ ನಟಿಸಿದ ಚಿತ್ರಗಳು ಚಿರಪರಿಚಿತ ಎಂದೇ ಹೇಳಬಹುದು,(ಏಜೆನ್ಸೀಸ್).