ನ್ಯೂಸ್

ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಕಳ್ಳತನ; ಖದೀಮರು ಅರೆಸ್ಟ್​​

ದಾವಣಗೆರೆ: ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಪರಿಚಯಸ್ಥರ ರೀತಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಿಲಾಡಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ ಭಜಂತ್ರಿ(24) ಹಾಗೂ ಮಂಜುನಾಥ ಪಿ (23) ಬಂಧಿತ ಆರೋಪಿಗಳು. ಮಂಜುನಾಥ ಭಜಂತ್ರಿ ಮೂಲತ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ನಿವಾಸಿ. ಬ್ಬರು ದಾವಣಗೆರೆ ನಗರದ ರಾಮನಗರದ ನಿವಾಸಿಗಳು. ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

ಕೆಟಿಜೆ ನಗರದ ನಾಗರತ್ನಮ್ಮ ಎಂಬ ಮಹಿಳೆ ಮನೆಗೆ ನುಗ್ಗಿ‌ ಕಳ್ಳತನಕ್ಕೆ ಯತ್ನ. ಲಗ್ನ ಪತ್ರಿಕೆ ನೀಡಲು ಬಂದಿರುವುದಾಗಿ ಹೇಳಿ ಮಹಿಳೆಯ ಚಿನ್ನದ ಸರ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮಹಿಳೆ ಜೋರಾಗಿ ಕಿರುಚಿದ ಹಿನ್ನೆಲೆ ಮನೆಯಲ್ಲಿದ್ದ ಮೊಬೈಲ್ ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.

ನಂತರ ಪೊಲೀಸರು ಆರೋಪಿಗಳಿಂದ ಒಂದು ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ. ಈ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.