ತುಮಕೂರು: ಮಾಜಿ ಶಾಸಕ ಮಸಾಲೆ ಜಯರಾಮ್ ಅವರ ಜೇಬಿನಲ್ಲಿದ್ದ ಹಣವನ್ನು ಕದಿಯಲು ಯತ್ನಿಸಿದ ಕಳ್ಳನಿಗೆ ಸ್ಥಳದಲ್ಲಿದ್ದ ಜನಸಾಮಾನ್ಯರು ಥಳಿಸಿದ ಘಟನೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ವರದಿಯಾಗಿದೆ.
ಮಾಜಿ ಶಾಸಕರ ಕಿಸೆಯಲ್ಲಿದ್ದ ಹಣವನ್ನು ಎಗರಿಸಲು ಮುಂದಾದ ಚಾಲಾಕಿ ಕಳ್ಳನನ್ನು ಹಿಡಿದ ಸ್ಥಳೀಯರು, ಆತನನ್ನು ಎಳೆದಾಡಿ ಥಳಿಸಿದ್ದು, ಪಿಕ್ ಪಾಕೆಟ್ ಮಾಡುತ್ತಿದ್ದ ಎಂದು ಹೊಡೆದಿದ್ದಾರೆ.
ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೆಂದ್ರ ಆಗಮಿಸಿದ್ದ ಹಿನ್ನೆಲೆ ಅವರನ್ನು ಬರ ಮಾಡಿಕೊಳ್ಳಲು ಮಾಜಿ ಶಾಸಕ ಮಸಾಲೆ ಜಯರಾಮ್ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಕಳ್ಳನ ಕೈಚಳಕ ಪತ್ತೆಯಾಗಿದೆ.
ವಿಜಯೇಂದ್ರ ಮಠಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಸಾಲೆ ಜಯರಾಮ್ ಜೇಬಿಗೆ ಕೈಹಾಕುತ್ತಿದ್ದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು ಆತನಿಗೆ ಥಳಿಸಿ, ತದನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.