ನ್ಯೂಸ್

Trump Praises Pak PM | ಅವರು ಅದ್ಬುತ ವ್ಯಕ್ತಿಗಳು..ಗಾಜಾ ಶಾಂತಿ ಬೆಂಬಲಿಸಿದ ಮುಸ್ಲಿಂ ರಾಷ್ಟ್ರಗಳ ನಾಯಕರಿಗೆ ಧನ್ಯವಾಧ ಅರ್ಪಿಸಿದ ಟ್ರಂಪ್​!

Trump Praises Pak PM: ಅಮೆರಿಕಾದ ಗಾಜಾ ಶಾಂತಿಯನ್ನು ಬೆಂಬಲಿಸಿದ್ದಕ್ಕಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್​​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಕಳೆದ ವಾರ ಶ್ವೇತಭವನದಲ್ಲಿ ಭೇಟಿಯಾದ ಪಾಕಿಸ್ತಾನಿ ನಾಯಕರನ್ನು ಅದ್ಬುತ ವ್ಯಕ್ತಿಗಳು ಎಂದು ಕರೆದರು.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಅಂತ್ಯಕ್ಕೆ ಪಾಕ್​ ಅಮೆರಿಕಾದ 20 ಅಂಶಗಳ ಪ್ರಸ್ತಾಪವನ್ನು ಆರಂಭದಿಂದಲೂ ಬೆಂಬಲಿಸುತ್ತಿದೆ, ಪಾಕಿಸ್ತಾನದ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಮೊದಲಿನಿಂದಲೂ ನಮ್ಮೊಂದಿಗಿದ್ದಾರೆ, ಅವರು ಅದ್ಭುತ ವ್ಯಕ್ತಿಗಳು, ನಮ್ಮ ಎಲ್ಲ ಒಪ್ಪಂದಗಳನ್ನು ಸಂಪೂರ್ಣವಾಗಿ ನಂಬುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ರಾಷ್ಟ್ರಗಳ ನಾಯಕರಿಗೆ ಧನ್ಯವಾದ ಅರ್ಪಿಸಿದ ಟ್ರಂಪ್..

ಗಾಜಾ ಯುದ್ಧವನ್ನು ಕೊನೆಗೊಳಿಸುವ ಯೋಜನೆಗೆ ಅಗಾಧ ಬೆಂಬಲ ನೀಡಿದ್ದಕ್ಕಾಗಿ ಹಲವಾರು ಮುಸ್ಲಿಂ ಮತ್ತು ಅರಬ್ ರಾಷ್ಟ್ರಗಳ ನಾಯಕರಿಗೆ ಟ್ರಂಪ್ ಧನ್ಯವಾದ ಅರ್ಪಿಸಿದರು. ಸೌದಿ ಅರೇಬಿಯಾ, ಕತಾರ್‌ನ ಎಮಿರ್, ಯುಎಇ, ಜೋರ್ಡಾನ್ ರಾಜ, ಟರ್ಕಿಯ ಅಧ್ಯಕ್ಷ ಎರ್ಡೋಗನ್ ಮತ್ತು ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ನನ್ನ ಸಭೆಗಳು ಮತ್ತು ಸಂವಾದ ನಿರಂತರವಾಗಿ ನಡೆದಿದ್ದು, ನಾವೆಲ್ಲಾ ಒಟ್ಟಿಗೆ ಇದ್ದೆವು ಎಂದು ಹೇಳಿದರು.

ಟ್ರಂಪ್ ಸಮಗ್ರ ಯೋಜನೆಯ ಒಳಗೆ

ಟ್ರಂಪ್​ರ ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಸಮಗ್ರ ಯೋಜನೆ'ಯು, ಅದನ್ನೂ ಮೂಲಭೂತವಾದ ಮುಕ್ತ, ಭಯೋತ್ಪಾದನೆ ಮುಕ್ತ ವಲಯವನ್ನಾಗಿ ಮಾಡಲಾಗುವುದು ಮತ್ತು ಅದರ ನೆರೆಹೊರೆಯವರಿಗೆ ಬೆದರಿಕೆಯನ್ನುಂಟು ಮಾಡುವುದಿಲ್ಲ ಮತ್ತು ಅದನ್ನು ಪುನರಾಭಿವೃದ್ಧಿ ಮಾಡಲಾಗುವುದು ಎಂದು ಹೇಳುತ್ತದೆ. ಈ ಪ್ರಸ್ತಾಪಕ್ಕೆ ಎರಡೂ ರಾಷ್ಟ್ರಗಳು ಒಪ್ಪಿದರೆ, ಯುದ್ಧವು ತಕ್ಷಣವೇ ಕೊನೆಗೊಳ್ಳುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತದೆ, ಈ ಸಮಯದಲ್ಲಿ, ವೈಮಾನಿಕ ಮತ್ತು ಫಿರಂಗಿ ಬಾಂಬ್ ದಾಳಿ ಸೇರಿದಂತೆ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಸಂಪೂರ್ಣ ಹಂತ ಹಂತದ ಹಿಂತೆಗೆದುಕೊಳ್ಳುವಿಕೆಗೆ ಷರತ್ತುಗಳನ್ನು ಪೂರೈಸುವವರೆಗೆ ಯುದ್ಧ ರೇಖೆಗಳು ಸ್ಥಗಿತಗೊಂಡಿರುತ್ತವೆ. ಯೋಜನೆಯ ಪ್ರಕಾರ, ಇಸ್ರೇಲ್ ಈ ಒಪ್ಪಂದವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡ 72 ಗಂಟೆಗಳ ಒಳಗೆ ಎಲ್ಲಾ ಒತ್ತೆಯಾಳುಗಳು, ಜೀವಂತವಾಗಿರಲಿ ಅಥವಾ ಸತ್ತಿರಲಿ, ಹಿಂತಿರುಗಿಸಬೇಕೆಂದು ಸಹ ಕರೆ ನೀಡುತ್ತದೆ.

ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ, ಇಸ್ರೇಲ್ 250 ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಮತ್ತು ಅಕ್ಟೋಬರ್ 7, 2023 ರ ನಂತರ ಬಂಧನಕ್ಕೊಳಗಾದ 1700 ಗಾಜಾ ನಿವಾಸಿಗಳನ್ನು ಬಿಡುಗಡೆ ಮಾಡುತ್ತದೆ, ಇದರಲ್ಲಿ ಎಲ್ಲಾ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಪ್ರತಿಯೊಬ್ಬ ಇಸ್ರೇಲಿ ಒತ್ತೆಯಾಳಿನ ಶವಗಳನ್ನು ಬಿಡುಗಡೆ ಮಾಡಿದರೆ, ಇಸ್ರೇಲ್ 15 ಸತ್ತ ಗಾಜಾ ನಿವಾಸಿಗಳ ಶವಗಳನ್ನು ಬಿಡುಗಡೆ ಮಾಡುತ್ತದೆ. ಸೌದಿ ಅರೇಬಿಯಾ, ಜೋರ್ಡಾನ್, ಯುಎಇ, ಇಂಡೋನೇಷ್ಯಾ, ಪಾಕಿಸ್ತಾನ, ಟರ್ಕಿಯೆ, ಕತಾರ್ ಮತ್ತು ಈಜಿಪ್ಟ್ ವಿದೇಶಾಂಗ ಮಂತ್ರಿಗಳು ಟ್ರಂಪ್ ನಾಯಕತ್ವ ಮತ್ತು ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವರ ಪ್ರಾಮಾಣಿಕ ಪ್ರಯತ್ನಗಳನ್ನು ಸ್ವಾಗತಿಸಿ ಜಂಟಿ ಹೇಳಿಕೆ ನೀಡಿದ್ದಾರೆ.

ಅಮೆರಿಕ-ಪಾಕಿಸ್ತಾನ ಸಂಬಂಧ

ಕಳೆದ ಗುರುವಾರ ಓವಲ್ ಕಚೇರಿಯಲ್ಲಿ ಟ್ರಂಪ್ ಅವರು ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರನ್ನು ಭೇಟಿಯಾದ ನಂತರ ಅಮೆರಿಕ ಅಧ್ಯಕ್ಷರು ಪಾಕ್​​ ನಾಯಕರನ್ನು ಹೊಗಳಿದರು. ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರ ಒಪ್ಪಂದದ ನಂತರ ಈ ಸಭೆ ನಡೆಯಿತು ಮತ್ತು ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟ್ರಂಪ್ ಮತ್ತು ಷರೀಫ್ ಭೇಟಿಯಾದ ಸ್ವಲ್ಪ ಸಮಯದ ನಂತರ, ಅಮೆರಿಕ ಅಧ್ಯಕ್ಷರು ಈಜಿಪ್ಟ್, ಇಂಡೋನೇಷ್ಯಾ, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ ಮತ್ತು ಟರ್ಕಿ ಸೇರಿದಂತೆ ಅರಬ್ ರಾಷ್ಟ್ರಗಳ ನಾಯಕರೊಂದಿಗೆ ಮತ್ತು ಇತರರೊಂದಿಗೆ ಬಹುಪಕ್ಷೀಯ ಸಭೆಯನ್ನು ನಡೆಸಿದರು.(ಏಜೆನ್ಸೀಸ್​)